General Bipin Rawat Death: ಬಿಪಿನ್ ರಾವತ್ ಅವರ ನಿಧನದಿಂದ ದಿಗ್ಭ್ರಾಂತನಾಗಿದ್ದೇನೆ : ಬೊಮ್ಮಾಯಿ!

By Suvarna NewsFirst Published Dec 8, 2021, 7:42 PM IST
Highlights

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ಬಿಪಿನ್ ರಾವತ್ ಅವರ ನಿಧನದಿಂದ ನಾನು ದಿಗ್ಭ್ರಾಂತನಾಗಿದ್ದೇನೆ : ಬೊಮ್ಮಾಯಿ
*ದೇಶ ಮತ್ತು ಭಾರತದ ರಕ್ಷಣೆಗೆ ದೊಡ್ಡ ನಷ್ಟ : ಸಿದ್ದರಾಮಯ್ಯ!
*ದೇಶಕ್ಕೆ ಅತ್ಯಂತ ದುಃಖದ ದಿನ : ಎಚ್‌ಡಿ ಕುಮಾರಸ್ವಾಮಿ

ವೆಲ್ಲಿಂಗ್ಟನ್(ಡಿ.08): ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಡಿದ್ದು, ಈ ದುರಂತದಲ್ಲಿ ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿರುವ ಮಾಹಿತಿಯನ್ನು ಭಾರತೀಯ ವಾಯುಸೇನಾ ಪಡೆ ದೃಢಪಡಿಸಿದೆ. ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ. 

ಈ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavarj Bommai) ಟ್ವೀಟ್‌ ಮಾಡಿದ್ದು ಬಿಪಿನ್ ರಾವತ್ ಅವರ ನಿಧನದಿಂದ ನಾನು ದಿಗ್ಭ್ರಾಂತನಾಗಿದ್ದೇನೆ   ಎಂದು ಹೇಳಿದ್ದಾರೆ. " ದೇವರು ಬಿಪಿನ್ ರಾವತ್ ಸೇರಿದಂತೆ ಇತರರ ಆತ್ಮಕ್ಕೆ ಶಾಂತಿ ನೀಡಲಿ. ಅವರ  ಸಾವಿನ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ. ಓಂ ಶಾಂತಿಃ " ಎಂದು ಹೇಳಿದ್ದಾರೆ.

"

"ದೇಶದ ಸೇನಾಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ನಿಜಕ್ಕೂ ಇದು ದುರದೃಷ್ಟಕರ,‌ ಅವರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರಂತವೇ ಸರಿ. ಅವರ ಜತೆ ಅವರ ಪತ್ನಿ ಮಧುಲಿಕಾ ರವಾತ್ ಸೇರಿದಂತೆ ಇತರೆ 11 ಜನ ಸಾವನ್ನಪ್ಪಿರುವುದು ಹೃದಯ ಕಲುಕುವ ಸಂಗತಿಯಾಗಿದೆ" ಎಂದು ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

 

ದೇಶದ ಸೇನಾಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ನಿಜಕ್ಕೂ ಇದು ದುರದೃಷ್ಟಕರ,‌ ಅವರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರಂತವೇ ಸರಿ. ಅವರ ಜತೆ ಅವರ ಪತ್ನಿ ಮಧುಲಿಕಾ ರವಾತ್ ಸೇರಿದಂತೆ ಇತರೆ 11 ಜನ ಸಾವನ್ನಪ್ಪಿರುವುದು ಹೃದಯ ಕಲುಕುವ ಸಂಗತಿಯಾಗಿದೆ. pic.twitter.com/bvHN2Qk9bX

— Basavaraj S Bommai (@BSBommai)

 

ದೇಶ ಮತ್ತು ಭಾರತದ ರಕ್ಷಣೆಗೆ ದೊಡ್ಡ ನಷ್ಟ : ಸಿದ್ದರಾಮಯ್ಯ!

ಇನ್ನು ಈ ಬೆನ್ನಲ್ಲೆ ಟ್ವೀಟ್‌ ಮಾಡಿರುವ ಕರ್ನಾಟಕ ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) " ಹೆಲಿಕಾಪ್ಟರ್ ಅಪಘಾತದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಜನರ ದುರದೃಷ್ಟಕರ ನಿಧನದಿಂದ ದುಃಖವಾಗಿದೆ. ಇದು ನಮ್ಮ ದೇಶ ಮತ್ತು ಭಾರತದ ರಕ್ಷಣೆಗೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. ಜತೆಗೆ ಮೃತರ ಕುಟುಂಬಗಳಿಗೆ ಮತ್ತು ಹಿತೈಷಿಗಳಿಗೆ ಸಂತಾಪ ಸೂಚಿಸಿದ್ದಾರೆ.

 

Saddened by the unfortunate demise of Chief of Defence Staff Gen Bipin Rawat, his wife & 11 others in the chopper crash.

It is a huge loss for our nation & Indian defence. My deepest condolences to the families & well-wishers of the deceased.

— Siddaramaiah (@siddaramaiah)

 

ದೇಶಕ್ಕೆ ಅತ್ಯಂತ ದುಃಖದ ದಿನ : ಎಚ್‌ಡಿ ಕುಮಾರಸ್ವಾಮಿ

ಬಿಪಿನ ರಾವತ್‌ ನಿಧನಕ್ಕೆ ಸಂತಾಪ ಸೂಚಿಸಿರುವ ಜೆಡಿಎಸ್‌ ನಾಯಕ  ಎಚ್‌ಡಿ ಕುಮಾರಸ್ವಾಮಿ (H. D. Kumaraswamy) "ಸೇನಾ ಪಡೆಗಳ ಮುಖ್ಯಸ್ಥರಾದ (CDS) ಜ.ಬಿಪಿನ್ ರಾವತ್, ಅವರ ಶ್ರೀಮತಿಯವರು, ಉನ್ನತ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಊಟಿಯ ಕೂನೂರು ಬಳಿ ದುರಂತಕ್ಕೀಡಾಗಿ ರಾವತ್,  ಶ್ರೀಮತಿ ಅವರು ಸೇರಿ ಇನ್ನಿತರೆ ಉನ್ನತ ಸೇನಾಧಿಕಾರಿಗಳು ಅಸುನೀಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ" ಎಂದು ಟ್ವೀಟ್‌ ಮಾಡಿದ್ದಾರೆ.

"ದೇಶರಕ್ಷಣೆಗೆ ಅನನ್ಯ ಕೊಡುಗೆ ನೀಡಿದ್ದ ಈ ಸೇನಾಧಿಕಾರಿಗಳ ದುರಂತ ಸಾವು ಆಘಾತಕಾರಿ, ಇಂದು ದೇಶಕ್ಕೆ ಅತ್ಯಂತ ದುಃಖದ ದಿನ. ದುರಂತದಲ್ಲಿ ಜೀವ ಚೆಲ್ಲಿದ ಎಲ್ಲ ಸೇನಾಧಿಕಾರಿಗಳಿಗೆ ನನ್ನ ಪ್ರಣಾಮಗಳು. ಅವರೆಲ್ಲರಿಗೂ ಚಿರಶಾಂತಿ ಸಿಗಲಿ, ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಎಲ್ಲರ ಕುಟುಂಬಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಧಾನಿ ಮೋದಿ ಸಂತಾಪ!

ಈ ಬೆನ್ನಲ್ಲೇ ಪ್ರಧಾನಿ ಕೂಡ ಮೋದಿ ಟ್ವೀಟ್‌ ಮಾಡಿದ್ದು ರಕ್ಷಣಾಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಿಧನ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. " ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನಾವು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಸಶಸ್ತ್ರ ಪಡೆಗಳ ಇತರ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಅವರು ಅತ್ಯಂತ ಶ್ರದ್ಧೆಯಿಂದ ಭಾರತಕ್ಕೆ ಸೇವೆ ಸಲ್ಲಿಸಿದರು. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ" ಎಂದು ಹೇಳಿದ್ದಾರೆ.

click me!