
ಬೆಂಗಳೂರು(ಮಾ.27): ಮಾಜಿ ಸಚಿವರ ಲೈಂಗಿಕ ಹಗರಣಕ್ಕೆ ವಿವಾದಿತ ಯುವತಿ ಅಧಿಕೃತವಾಗಿ ದೂರು ನೀಡುವ ಮೂಲಕ ಅನಿರೀಕ್ಷಿತ ತಿರುವು ನೀಡಿದ ಬೆನ್ನಲ್ಲೇ ಪ್ರಕರಣದ ಕುರಿತು ವಿಶೇಷ ತನಿಖಾ ದಳದ ಮುಂದಿನ ನಡೆ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
'ವಿಡಿಯೋ, ಆಡಿಯೋ ಧ್ವನಿ ಮ್ಯಾಚ್ ಮಾಡಲಿ, ಒಂದೇ ತಾಸಿನಲ್ಲಿ ಕೇಸ್ ಇತ್ಯರ್ಥ ಆಗುತ್ತೆ!'
ಕಳೆದ ಇಪ್ಪತ್ತು ದಿನಗಳಿಂದ ರಾಜ್ಯ-ಹೊರ ರಾಜ್ಯಗಳಲ್ಲಿ ವಿವಾದಿತ ಯುವತಿ ಹಾಗೂ ಸಿಡಿ ಸ್ಫೋಟದ ಗುಂಪಿನ ಸದಸ್ಯರ ಪತ್ತೆಗೆ ಎಸ್‌ಐಟಿ ಹುಡುಕಾಟ ನಡೆಸಿದ್ದರೂ ಯಶಸ್ಸು ಕಂಡಿಲ್ಲ. ಈಗ ಯುವತಿ ದೂರು ಸಲ್ಲಿಸಿದ ಬಳಿಕ ಅತ್ಯಾಚಾರ ಆರೋಪ ಹೊತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧನವಾಗಲಿದೆಯೇ ಅಥವಾ ಈ ಕೃತ್ಯಕ್ಕೆ ಸಂಚು ರೂಪಿಸಿದ ಮಹಾನ್ ನಾಯಕ ಖೆಡ್ಡಾಕ್ಕೆ ಬೀಳಲಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಎಸ್‌ಐಟಿ ಮುಂದಿನ ನಡೆಗಳು ಹೀಗಿರಬಹುದು
* ಮಾಜಿ ಸಚಿವರ ವಿರುದ್ಧ ದೂರು ನೀಡಿರುವ ಯುವತಿಗೆ ಐದನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ. ಒಂದು ವೇಳೆ ಯುವತಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದರೆ ಅದನ್ನು ಆಧರಿಸಿ ಮುಂದಿನ ತನಿಖೆ ನಡೆಸಬಹುದು.
'ಡಿಕೆಶಿಯನ್ನು CD ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ'
* ನ್ಯಾಯಾಲಯದ ಮುಂದೆ ಸಿಆರ್‌ಪಿಸಿ 164 ಅಡಿ ಯುವತಿಯ ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿಕೊಳ್ಳಬಹುದು, ಆಗಲೂ ಮಾಜಿ ಸಚಿವರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದರೆ ಮಾಜಿ ಸಚಿವರಿಗೆ ಸಂಕಷ್ಟಬರಲಿದೆ.
* ಈಗಾಗಲೇ ಸಿಆರ್‌ಪಿಸಿ 164 ಅಡಿ ಯುವತಿ ಬಾಯ್‌ಫ್ರೆಂಡ್ ಎನ್ನಲಾದ ಆಕಾಶ್ ಸೇರಿದಂತೆ ನಾಲ್ವರ ಹೇಳಿಕೆಯನ್ನು ಎಸ್‌ಐಟಿ ಪಡೆದಿದೆ. ಹೀಗಾಗಿ ಈ ನಾಲ್ವರ ಹೇಳಿಕೆಗೆ ತತ್ವಿರುದ್ಧವಾಗಿ ನಡೆದರೆ ಯುವತಿಗೆ ತನಿಕೆಯ ಬಿಸಿ ತಟ್ಟಬಹುದು.
*ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ಯುವತಿ ಕೊಠಡಿ ಮೇಲೆ ದಾಳಿ ನಡೆಸಿದಾಗ ಪತ್ತೆಯಾದ ಹಣಕ್ಕೆ ಲೆಕ್ಕ ಹಾಗೂ ಸಿಡಿ ಸ್ಫೋಟದ ಸಂಚಿನ ಪಾಲ್ಗೊಂಡಿರುವ ಸದಸ್ಯರ ಜತೆ ನಂಟಿನ ಕುರಿತು ಯುವತಿಯಿಂದ ಸ್ಪಷ್ಟೀಕರಣವನ್ನು ಎಸ್‌ಐಟಿ ಕೇಳಬಹುದು.
* ಯುವತಿ ದೂರು ಆಧರಿಸಿ ಹೊಸದಾಗಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಎಸ್‌ಐಟಿ ನೋಟಿಸ್ ನೀಡಬಹುದು. ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ. ಬಂಧಿಸುವ ಅಂತಿಮ ನಿರ್ಧಾರ ತನಿಖಾಧಿಕಾರಿಗೆ ಇದೆ.
CD ಲೇಡಿಯ ಆಡಿಯೋದಲ್ಲಿ ಡಿಕೆಶಿ ಹೆಸ್ರು, ಇದಕ್ಕಿಂತ ದೊಡ್ಡ ಬಾಂಬ್ ಇದೆ ಎಂದ ಜಾರಕಿಹೊಳಿ
* ತಮ್ಮಿಂದ ಮಾಜಿ ಸಚಿವರು ತಪ್ಪಿಸಿಕೊಳ್ಳುವುದಿಲ್ಲ ಎಂದು ಖಾತ್ರಿಯಾದರೆ ಎಸ್‌ಐಟಿ, ಯುವತಿ ದೂರಿನ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಿ ಮಾಜಿ ಸಚಿವರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಬಹುದು.
* ಅತ್ಯಾಚಾರ ಪ್ರಕರಣಕ್ಕೂ ಮುನ್ನ ಮಾಜಿ ಸಚಿವರು ಬ್ಲ್ಯಾಕ್‌ಮೇಲ್ ಆರೋಪದ ಎಫ್‌ಐಆರ್ ದಾಖಲಾಗಿದೆ. ಹೀಗಾಗಿ ಎರಡು ಪ್ರಕರಣಗಳ ಸಾಮ್ಯತೆಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿದೆ. ಪೂರ್ವಯೋಜಿತ ಸಂಚು ರೂಪಿಸಿ ಮಾಜಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿರುವುದನ್ನು ಬಹಿರಂಗವಾಗಿ ಎಸ್‌ಐಟಿ ಖಚಿತಪಡಿಸಿದರೆ ಮಾಜಿ ಸಚಿವರಿಗೆ ರಿಲೀಫ್ ಸಿಗಬಹುದು.
* ಹನಿಟ್ರ್ಯಾಪ್ ಆಗಿರುವುದು ತನಿಖೆಯಲ್ಲಿ ಗೊತ್ತಾದ್ದರೂ ಸಹ ವಿವಾದೀತ ಯುವತಿ ಜತೆ ಸಂಬಂಧವನ್ನು ಮಾಜಿ ಸಚಿವರು ಒಪ್ಪಿಕೊಳ್ಳಬೇಕಾಗುತ್ತದೆ. ಯುವತಿ ಪರಿಚಯವಿಲ್ಲ, ಸಿಡಿ ನಕಲಿ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಅವರು, ತಮ್ಮ ಸಮರ್ಥನೆಯನ್ನು ಪುರಾವೆಗಳ ಮೂಲಕ ರುಜುವಾತುಪಡಿಸಬೇಕಿದೆ.
ಲೇಡಿ + ಸಿಡಿ = ಮತ್ತೊಮ್ಮೆ ಬೇಡಿ: ಕಾಂಗ್ರೆಸ್‌ಗೆ ರೇಣುಕಾಚಾರ್ಯ ತಿರುಗೇಟು
* ಇಪ್ಪತ್ತು ದಿನಗಳ ಎಸ್‌ಐಟಿ ತನಿಖೆಯಲ್ಲಿ ಸಿಡಿ ಸ್ಫೋಟದ ಸಂಚಿನ ಭಾಗಿದಾರರು ಎನ್ನಲಾಗುತ್ತಿರುವ ಪತ್ರಕರ್ತರು, ಯುವತಿಯ ಬಾಯ್‌ಫ್ರೆಂಡ್ ಹಾಗೂ ಆಕೆಯ ಸ್ನೇಹಿತರ ಬಳಿ ಲಕ್ಷ ಲಕ್ಷ ಹಣ ವರ್ಗಾವಣೆ ನಡೆದಿರುವ ಕುರಿತು ಮಾಹಿತಿ ಸಿಕ್ಕಿದೆ. ಹೀಗಾಗಿ ಅತ್ಯಾಚಾರವೇ ಆಗಿದೆ ಎನ್ನುವುದಾದರೆ ವಿಡಿಯೋ ಮಾಡಿಕೊಂಡಿದ್ದೇಕೆ, ಅದನ್ನು ಮತ್ತೊಬ್ಬರಿಗೆ ನೀಡಲು ಕಾರಣವೇನು ಎಂಬ ಪ್ರಶ್ನೆಗಳನ್ನು ಎಸ್‌ಐಟಿ ಕೇಳಬಹುದು.
* ಯುವತಿಯ ವಿಡಿಯೋಗಳ ಸಾಚಾತನದ ಬಗ್ಗೆ ಎಫ್‌ಎಸ್‌ಎಲ್‌ಗೆ ಎಸ್‌ಐಟಿ ಕಳುಹಿಸಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ