ಅಯೋಧ್ಯೆ ರಾಮಮಂದಿರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತಾದ್ರೂ ಹೋಗ್ಲಿ, ನಾಳೆಯಾದ್ರೂ ಹೋಗ್ಲಿ. ರಾಮನ ಮೇಲೆ ಅಭಿಮಾನ ಇದೆ. ನಾನೂ ರಾಮನ ಭಕ್ತ ಅಂತಾ ಹೇಳ್ತಾರಲ್ಲ ಅಷ್ಟು ಸಾಕು. ಉಳಿದಿದ್ದು ಅವರ ಅನುಕೂಲಕ್ಕೆ ತಕ್ಕಂತೆ ಅವರ ಮಟ್ಟದಲ್ಲಿ ಏನಾದ್ರೂ ಮಾಡ್ಲಿ ಎಂದು ಗದಗ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ತಿಳಿಸಿದರು.
ಗದಗ (ಜ.12): ಅಯೋಧ್ಯೆ ರಾಮಮಂದಿರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತಾದ್ರೂ ಹೋಗ್ಲಿ, ನಾಳೆಯಾದ್ರೂ ಹೋಗ್ಲಿ. ರಾಮನ ಮೇಲೆ ಅಭಿಮಾನ ಇದೆ. ನಾನೂ ರಾಮನ ಭಕ್ತ ಅಂತಾ ಹೇಳ್ತಾರಲ್ಲ ಅಷ್ಟು ಸಾಕು. ಉಳಿದಿದ್ದು ಅವರ ಅನುಕೂಲಕ್ಕೆ ತಕ್ಕಂತೆ ಅವರ ಮಟ್ಟದಲ್ಲಿ ಏನಾದ್ರೂ ಮಾಡ್ಲಿ ಎಂದು ಗದಗ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ತಿಳಿಸಿದರು.
ರಾಮಮಂದಿರಕ್ಕೆ ಹೋಗ್ತೀನಿ ಆದರೆ ಕಾರ್ಯಕ್ರಮ ಮುಗಿದ ಮೇಲೆ ಎಂಬ ಸಿಎಂ ಹೇಳಿಕೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅವರಿಗೆ ರಾಜಕೀಯ, ಪಕ್ಷ ಸಿದ್ಧಾಂತ ಅಂತಾ ಇರುತ್ತೆ. ಅದು ಪಕ್ಷದ ಶಿಸ್ತಿನ ಪ್ರಶ್ನೆ. ಅವರ ಪಕ್ಷ ಅವರ ಇಷ್ಟ. ಅವರ ಅನುಕೂಲಕ್ಕೆ ತಕ್ಕಂತೆ ಅವರ ಮಟ್ಟದಲ್ಲಿ ಏನಾದ್ರೂ ಮಾಡ್ಲಿ. ಯಾರ ನಿಲುವನ್ನೂ ನಾನು ಆಕ್ಷೇಪಣೆ ಮಾಡಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ನಿಲುವು ಇರುತ್ತೆ. ಅದು ಸಾಂಘಿಕವಾಗಿ ನಿಲುವು ಆಗಿರಬಹುದು. ವೈಯಕ್ತಿಕ, ಸಾಂಘಿಕ ನಿಲುವಿಗೆ ಘರ್ಷಣೆ ಬಂದಾಗ ಸಾಂಘಿಕ ನಿಲುವು ಎತ್ತಿ ಹಿಡಿಯಬೇಕು. ಅವರು ಹೇಳಿದ್ರಲ್ಲಿ ತಪ್ಪೇನಿಲ್ಲ, ಸರಿಯಾಗಿದೆ ಎಂದರು.
ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ: ಪೊಲೀಸ್ ಠಾಣೆ ಮೆಟ್ಟಿಲಲ್ಲಿ ಕುಳಿತು ಸಿ.ಟಿ.ರವಿ ಪ್ರತಿಭಟನೆ
ಇನ್ನು ಶಂಕರಾಚಾರ್ಯರಿಂದ ರಾಮ ಮಂದಿರ ಉದ್ಘಾಟನೆ ವಿಷಯವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅಪೂರ್ಣ ಅನ್ನೋದು ಬಹಳ ಆಯಾಮದಿಂದ ನೋಡ್ಬೇಕು. ಯಾವುದೇ ಮನೆ ಗೃಹ ಪ್ರವೇಶ ಮಾಡುವಾಗ ಕೆಲಸ ಬಾಕಿ ಇರುತ್ತೆ. ಪ್ರಧಾನವಾಗಿ ಪೂಜಾ ಕೋಣೆ, ಅಡುಗೆ ಕೋಣೆಯಾಗಿದೆ ನೋಡ್ಬೇಕು. ಯಾವುದೋ ಮೂಲೆ ಕೆಲಸ ಬಾಗಿ ಇದ್ರೆ, ಪೇಂಟ್ ಬಾಕಿ ಇದ್ರೆ ಚಿಂತೆ ಇಲ್ಲ. ಪೂರ್ಣ, ಅಪೂರ್ಣ ವ್ಯಾಖ್ಯಾನವೇ ಒಬ್ಬರಿಂದ ಒಬ್ಬರಿಗೆ ಬೇರೆ. ಮುಖ್ಯವಾಗಿ ಇರಬೇಕಾಗಿರೋದು ಮಾಡ್ಬೇಕೆಂಬ ಭಕ್ತಿ, ಅದನ್ನು ಅವರು ಮಾಡಿದ್ದಾರೆ. ವಿಶ್ವದಾದ್ಯಂತ ರಾಮ ಮಂದಿರ ವಿಷಯವಾಗಿ ತರಂಗ ಎದ್ದಿದೆ. ಹಿಂದೂಗಳು ಅಲ್ಲದೇ ಇರುವವರಲ್ಲೂ ತರಂಗ ಎದ್ದಿದೆ. ಆ ತರಂಗದ ಜೊತೆ ನಮ್ಮ ತರಂಗವನ್ನೂ ಸೇರಿಸಬೇಕು. ಇನ್ನಷ್ಟು ಚೆನ್ನಾಗಿರುತ್ತೆ ಆಗಿರೋದನ್ನು ಬಿಟ್ಟು, ಬೇರೆ ಆಗಿಲ್ಲ ಅನ್ನೋದು ಸರಿಯಲ್ಲ ಎಂದರು.
ಮೈಸೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಯತೀಂದ್ರ ಗೆಲ್ಲೋದು ಗ್ಯಾರಂಟಿ: ಶಾಸಕ ಪ್ರದೀಪ್ ಈಶ್ವರ್