CBSE exam 2025: ರೈತನ ಮಗಳು ಪ್ರಜ್ಞಾಗೆ ಶೇ.97 ಫಲಿತಾಂಶ!

Published : May 15, 2025, 08:08 AM IST
CBSE exam 2025: ರೈತನ ಮಗಳು ಪ್ರಜ್ಞಾಗೆ ಶೇ.97 ಫಲಿತಾಂಶ!

ಸಾರಾಂಶ

ಪಟ್ಟಣದ ಬಡ್ಸ್ ಫೌಂಡೇಷನ್ ಶಾಲೆ ವಿದ್ಯಾರ್ಥಿನಿ ಪ್ರಜ್ಞಾ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಪಾಂಡವಪುರ (ಮೇ.15): ಪಟ್ಟಣದ ಬಡ್ಸ್ ಫೌಂಡೇಷನ್ ಶಾಲೆ ವಿದ್ಯಾರ್ಥಿನಿ ಪ್ರಜ್ಞಾ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಪ್ರಜ್ಞಾ ಪಟ್ಟಣದ ಹಾರೋಹಳ್ಳಿ ರೈತ ಕುಟುಂಬದಲ್ಲಿ ಜನಿಸಿದ ಕುಮಾರ ಹಾಗೂ ಚೈತನ್ಯಕುಮಾರಿ ದಂಪತಿಯ ಏಕೈಕ ಪುತ್ರಿ. ಈಕೆ ಇಂಗ್ಲಿಷ್ 93, ಕನ್ನಡ 99, ಗಣಿತ 93, ವಿಜ್ಞಾನ 98, ಸಮಾಜ ವಿಜ್ಞಾನ 96 ಹಾಗೂ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ 97 ಅಂಕ ಸೇರಿದಂತೆ ಒಟ್ಟು 576 ಅಂಕಗಳನ್ನು ಪಡೆದಿದ್ದಾರೆ. ಮುಂದೆ ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಎಂಜಿನಿಯರ್ ಆಗುವುದಾಗಿ ಪ್ರಜ್ಞಾ ತಿಳಿಸಿದ್ದಾರೆ. ಟಾಪರ್ ಆಗಿ ಹೊರಹೊಮ್ಮಿರುವ ಪ್ರಜ್ಞಾ ಅವರು ಹಾರೋಹಳ್ಳಿಯ ಅಕ್ಕ ಪಕ್ಕದ ಮನೆಯವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಸಿಬಿಎಸ್ಇ 10ನೇ ತರಗತಿ ಪರೀಕ್ಷೆ : 500ಕ್ಕೆ 500 ಅಂಕ ಪಡೆದು ವಿದ್ಯಾರ್ಥಿಗಳ ಅದ್ಭುತ ಸಾಧನೆ

ಸಿಬಿಎಸ್‌ಇ ಪರೀಕ್ಷೆ ಶೇ.100ರಷ್ಟು ಫಲಿತಾಂಶ

ಪಾಂಡವಪುರ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಪಟ್ಟಣದ ಎಲ್‌ಕೆಆರ್ ಹೈಯರ್ ಪ್ರೈಮೆರಿ ಸೆಂಕೆಂಡರಿ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ ಬಂದಿದೆ.

ಶಾಲೆಗೆ ಕಳೆದ 13 ವರ್ಷದಿಂದಲೂ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಶಾಲೆಯ 9 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 19 ಮಂದಿ ಉತ್ತನ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯ ಪ್ರಜ್ಞಾ- ಶೇ.97, ವಿಶ್ರುತ ಎನ್.ರಾಜ್- ಶೇ.94, ಧೀರಜ್ ಕಿಶೋರ್- ಶೇ.93, ಶರಧಿ ಸಿ.ಎಸ್- ಶೇ.93., ರೋನಾಕ್ ಕಠಾರಿಯಾ-ಶೇ.92., ಬಾಲಾಜಿ ಜೆ.ಎಚ್.-92, ಪೂರ್ವಿಕಗೌಡ ಎಂ.ಪಿ.-90, ಮುಖೇಶ್ ಎಸ್-90, ಧನ್ಯಾ ಎನ್ ಜವಲೇಕರ್-90 ಅಂಕಗಳನ್ನು ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!