
ಕೊಟ್ಟೂರು (ಮೇ.15): ಹಿಂದೂ ಧರ್ಮವನ್ನು ಸಂಪೂರ್ಣ ನಾಶಗೊಳಿಸುವುದೇ ಮುಸ್ಲಿಮರ ಸ್ಪಷ್ಟ ಉದ್ದೇಶವಾಗಿದ್ದು, ಈ ಕಾರಣಕ್ಕಾಗಿ ಲವ್ ಜಿಹಾದ್ ಪ್ರಕರಣಗಳನ್ನು ಹೆಚ್ಚು ಮಾಡುವತ್ತ ತಮ್ಮ ಜನಾಂಗದ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಸಮಗ್ರ ಭಾರತ ರಾಷ್ಟ್ರ ತುಂಡಾಗಿ ಪಾಕಿಸ್ತಾನ ನಿರ್ಮಾಣಗೊಂಡಿತು. ಮತ್ತೆ ಈಗ ಈ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಮತ್ತಿತರ ಸೋಕಾಲ್ಡ್ ಪಕ್ಷಗಳು ಬೆಂಬಲವಾಗಿ ಸಾಗಿರುವುದು ದೊಡ್ಡ ದುರಂತ ಎಂದು ಹೇಳಿದರು.
ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಆರೋಪಿಗೆ ಇನ್ನೂ ಯಾವುದೇ ಶಿಕ್ಷೆ ನೀಡಿಲ್ಲ. ವರ್ಷದೊಳಗೆ ನ್ಯಾಯ ಒದಗಿಸಿಕೊಡುತ್ತೇವೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು ತುಷ್ಟೀಕರಣಗೊಳಿಸುವ ಕಾರಣಕ್ಕಾಗಿ ತಮ್ಮ ಈ ವರೆಗಿನ ಎಲ್ಲಾ ಬಗೆಯ ಹೋರಾಟ, ಸಿದ್ದಾಂತಗಳನ್ನು ಮೊಟಕುಗೊಳಿಸುವತ್ತ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಶ್ಚಿಯನ್ ಮತಾಂತರ, ಲವ್ ಜಿಹಾದ್, ಗೋಹತ್ಯೆ, ಭಯೋತ್ಪಾದನೆಗೆ ವಿರುದ್ದವಾಗಿ ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ಮತ್ತಿತರ ಸಮಿತಿಗಳನ್ನು ರಾಜ್ಯದೆಲ್ಲೆಡೆ ಪ್ರಾರಂಭಿಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಜಮೀರ್, ಖಾದರ್ ಜೊತೆ ಪೆಹಲ್ಗಾಮ್‌ಗೆ ಹೋಗಿ ಮೇ ಸಿದ್ದರಾಮಯ್ಯ ಹೂಂ ಅಂದಿದ್ರೆ 10 ಗುಂಡು ಹೊಡಿತಿದ್ರು; ಮುತಾಲಿಕ್
ಭಾರತ ಮತ್ತು ಪಾಕಿಸ್ತಾನ ಸಮರದ ಮಧ್ಯಸ್ಥಿಕೆಗೆ ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬರುವ ಅವಶ್ಯಕತೆ ಇಲ್ಲ. ಅದರ ಅಗತ್ಯವು ಭಾರತಕ್ಕೆ ಬೇಕಾಗಿಲ್ಲ ಎಂದ ಅವರು, ರಾಷ್ಟ್ರದ ಹಿತ ಕಾಪಾಡಲು ನಮ್ಮ ಸೇನೆ ಸರ್ವ ರಂಗದಲ್ಲೂ ಸಮರ್ಥವಾಗಿದೆ. ಟ್ರಂಪ್ ಅವರ ಹಿತ ವಚನ ಬೇಕಾಗಿಲ್ಲ, ಅವರ ಮಧ್ಯಸ್ಥಿಕೆಯನ್ನು ಯಾವುದೇ ಕಾರಣಕ್ಕೂ ಶ್ರೀರಾಮ ಸೇನೆ ಒಪ್ಪುವುದಿಲ್ಲ ಎಂದು ಹೇಳಿದರು.
ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆಗೆ ಗೈರಾಗಿದ್ದು ಸರಿಯಲ್ಲ. ಪ್ರತಿಯೊಬ್ಬರು ಸೇರಿಕೊಂಡು ರಾಷ್ಟ್ರದ ಯುದ್ಧದ ನೀತಿ ಮತ್ತು ಇತರ ವಿಷಯಗಳನ್ನು ಒಗ್ಗಟಾಗಿ ರೂಪಿಸಬೇಕಿದೆ. ಜಾತಿಗಣತೆ ಮಾಡುವುದು ಸರಿಯಲ್ಲ ಕೇಂದ್ರದ ತಪ್ಪು ನಿರ್ಧಾರಗಳಲ್ಲಿ ಇದು ಒಂದು ಎಂದರು.
ಇದನ್ನೂ ಓದಿ: 'ಭಯೋತ್ಪಾದನೆಗೆ ಧರ್ಮ ಇಲ್ಲ' ಎಂದವರಿಗೆ ಚಪ್ಪಲಿಯಲ್ಲಿ ಹೊಡಿಬೇಕು: ಮುತಾಲಿಕ್ ಆಕ್ರೋಶ
ಪ್ರತಿ ಮಹಿಳೆ ತಮ್ಮ ಸುರಕ್ಷತೆಗಾಗಿ ತಮ್ಮ ಬ್ಯಾಗಿನಲ್ಲಿ ತ್ರಿಶೂಲದ ಆಯುಧವನ್ನು ಇರಿಸಿಕೊಂಡು ತಮ್ಮ ರಕ್ಷಣೆಮಾಡಿಕೊಳ್ಳಬೇಕೆ ಹೊರತು ಮುಸ್ಲಿಮರ ಹಿತ ಚಿಂತಕ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರ ರಕ್ಷಣೆಯಾಗದು ಎಂದು ಮುತಾಲಿಕ್ ಹೇಳಿದರು.
ಬಿಜೆಪಿ ಮುಖಂಡ ಎಸ್. ತಿಂದಪ್ಪ, ಶ್ರೀ ರಾಮ ಸೇನೆಯ ಸ್ಥಳೀಯ ಮುಖಂಡ ಡಾ. ರಾಕೇಶ್ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ