
ರಾಮನಗರ(ಸೆ.29): ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸುತ್ತಿರುವ ಹೊತ್ತಿನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಶಾಕ್ ನೀಡಿದೆ. ಆದಾಯ ಮೀರಿದ ಸಂಪತ್ತಿನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆ ಎದುರಿಸಿ ಬಂದಿದ್ದ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ, ಆಸ್ತಿ ವಿವರಗಳನ್ನು ಕಲೆ ಹಾಕಿದ್ದಾರೆ.
ಕನಕಪುರಕ್ಕೆ ಬೆಳಗ್ಗೆ 10 ರಿಂದ 11 ಗಂಟೆ ವೇಳೆಗೆ ಆಗಮಿಸಿದ ಸಿಬಿಐನ ಏಳರಿಂದ ಎಂಟು ಮಂದಿ ಇದ್ದ ಅಧಿಕಾರಿಗಳ ತಂಡ ತಹಸೀಲ್ದಾರ್ ವಿಶ್ವನಾಥ್ ಅವರೊಂದಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.
Operation Megha Chakra: 20 ರಾಜ್ಯಗಳ 56 ಸ್ಥಳಗಳ ಚೈಲ್ಡ್ ಪೋರ್ನೊಗ್ರಫಿ ದಂಧೆಯ ಮೇಲೆ ಸಿಬಿಐ ದಾಳಿ!
ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಕನಕಪುರ ನಗರದ ಮೈಸೂರು ರಸ್ತೆಯಲ್ಲಿ ಹೆಂಚಿನ ಫ್ಯಾಕ್ಟರಿ ಬಳಿಯಿರುವ ಮನೆ, ದೊಡ್ಡಾಲಹಳ್ಳಿಯ ಹಳೇ ಮನೆ ಹಾಗೂ ಸಂತೆ ಕೋಡಿಹಳ್ಳಿಯಲ್ಲಿ ಫಾಮ್‌ರ್ ಹೌಸ್ ಹಾಗೂ ಜಮೀನು ಮತ್ತಿತರ ಸ್ಥಳಗಳಿಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿದರು.
ದೆಹಲಿ ತಲುಪಿದ ಸಿಎಂ ಗೆಹ್ಲೋಟ್, ಇತ್ತ ಸಹೋದರನ ಮನೆ ಮೇಲೆ ಸಿಬಿಐ ದಾಳಿ!
ಡಿ.ಕೆ.ಶಿವಕುಮಾರ್ ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ಮಾತ್ರವಲ್ಲದೆ, ಜಿಲ್ಲೆಯ ಬೇರೆಡೆ ಡಿ.ಕೆ.ಶಿವಕುಮಾರ್, ಅವರ ಕುಟುಂಬಸ್ಥರು ಮತ್ತು ಸಂಬಂಧಿಕರ ಹೆಸರಿನಲ್ಲಿರುವ ಭೂ ದಾಖಲೆಗಳ ಬಗ್ಗೆಯೂ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆæ. ಪೊಲೀಸರು ಸೇರಿ ಯಾರಿಗೂ ಮಾಹಿತಿ ನೀಡದೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಮಧ್ಯಾಹ್ನ 3.30ರವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದಲ್ಲದೆ, ಗೌಪ್ಯವಾಗಿಯೇ ಮಾಹಿತಿ ಕಲೆ ಹಾಕಿ ವಾಪಸಾದರು.
ಈಗಾಗಲೇ ಅಕ್ರಮ ಹಣ ವರ್ಗಾವಣೆ, ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಆರೋಪಿಯಾಗಿದ್ದು, ಸದ್ಯ ಜಾಮೀನು ಮೇಲಿದ್ದಾರೆ.
ಶಾಕ್ ಮೇಲೆ ಶಾಕ್
- ಇತ್ತೀಚೆಗಷ್ಟೇ ಇ.ಡಿ. ವಿಚಾರಣೆಗೆ ಹಾಜರಾಗಿ ಬಂದಿದ್ದ ಡಿಕೆಶಿ
- ಈ ಹಿಂದೆಯೂ ತೆರಿಗೆ, ಸಿಬಿಐ, ಇ.ಡಿ. ದಾಳಿ ಎದುರಿಸಿದ್ದರು
- ತಹಶೀಲ್ದಾರ್ ಜೊತೆ ಬಂದು ಆಸ್ತಿ ದಾಖಲೆ ಸಂಗ್ರಹಿಸಿದ ಸಿಬಿಐ
- ಕನಕಪುರದ ಮನೆಗೆ ಬೆಳಿಗ್ಗೆ 10 ಗಂಟೆಗೆ 7-8 ಅಧಿಕಾರಿಗಳ ದಾಳಿ
- ನಂತರ ಡಿಕೆಶಿಯ ಇತರ ಮನೆ, ಫಾಮ್‌ರ್‍ಹೌಸ್, ಜಮೀನಿಗೆ ಭೇಟಿ
- ಸಂಬಂಧಿಕರ ಹೆಸರಿನಲ್ಲಿರುವ ಭೂದಾಖಲೆ ಬಗ್ಗೆಯೂ ವಿವರ ಸಂಗ್ರಹ
- ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ