KPCC ಅಧ್ಯಕ್ಷ ಡಿಕೆಶಿಗೆ ಸಿಬಿಐ ಶಾಕ್, ಬೆಳ್ಳಂ ಬೆಳಗ್ಗೆ ದಾಳಿ!

Published : Oct 05, 2020, 09:41 AM ISTUpdated : Oct 05, 2020, 10:39 AM IST
KPCC ಅಧ್ಯಕ್ಷ ಡಿಕೆಶಿಗೆ ಸಿಬಿಐ ಶಾಕ್, ಬೆಳ್ಳಂ ಬೆಳಗ್ಗೆ ದಾಳಿ!

ಸಾರಾಂಶ

ಕರ್ನಾಟಕ ಕಾಂಗ್ರೆಸ್ ಸಾರಥಿಗೆ ಮತ್ತೊಂದು ಬಿಗ್ ಶಾಕ್| ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಸಿಬಿಐ ಶಾಕ್| ಬೆಳ್ಳಂ ಬೆಳಗ್ಗೆ ಡಿ.ಕೆ ಶಿವಕುಮಾರ್ ಮನೆ ಮೇಲೆ ರೇಡ್!  

ಬೆಂಗಳೂರು(ಅ.05): ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

"

ಐವರು ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.ಡಿಕೆಶಿ ಮಾತ್ರವಲ್ಲದೇ ಸಹೋದರ ಡಿಕೆ ಸುರೇಶ್ ಮನೆ ಮೇಲೂಲ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

"

ಈ ದಾಳಿ ಬೆನ್ನಲ್ಲೇ ಅವರ ವಕೀಲ ವಿಕ್ರಮ್ ಕೂಡಾ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ.

"

ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ತನಿಖೆಗೆ ಅನುಮತಿ ನೀಡಿತ್ತು.

"

ಆದರೆ ಕೆಲ ದಿನಗಳ ಹಿಂದಷ್ಟೇ ಡಿಕೆಶಿ ಈ ಅನುಮತಿ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರಾದರೂ ಇದು ವಜಾಗೊಂಡಿತ್ತು. 

"

ಅರ್ಜಿ ವಜಾ ಬೆನ್ನಲ್ಲೇ ಸಿಬಿಐ ತನಿಖೆ ಚುರುಕುಗೊಳಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇಂದು ಡಿ.ಕೆ ಶಿವಕುಮಾರ್​​ ಮನೆ ಮೇಲೆ ಸಿಬಿಐ ರೇಡ್ ನಡೆದಿದೆ.

ಈಗಾಗಲೇ ED ವಿಚಾರಣೆ ಎದುರಿಸಿ ಹೈರಾಣಾಗಿರೋ ಡಿಕೆಶಿಗೆ ಈ ದಾಳಿ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ