ರಾಜ್ಯದ ರೈತರ ಹಿತಕ್ಕಿಂತ ರಾಜಕೀಯ ಸ್ವಾರ್ಥ ಮುಖ್ಯವಾಗಿದೆ. ರಾಜ್ಯದ ವಸ್ತುಸ್ಥಿತಿ ಗಮನಿಸದೇ ಕಾವೇರಿ ನೀರು ಹರಿಸಿದ್ದಾರೆ. ರೈತರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೋ ಗೊತ್ತಿಲ್ಲ. ಹಿಂದೆ ಬಂಗಾರಪ್ಪ ಸಿಎಂ ಆಗಿದ್ದಾಗ ಕಾವೇರಿ ನೀರು ಬಿಡುವುದಿಲ್ಲ ಎಂದು ಗಟ್ಟಿ ಹೆಜ್ಜೆ ಇಟ್ಟಿದ್ದರು. ಆದರೆ ಸ್ಟಾಲಿನ್ ಮತ್ತು ಸೋನಿಯಾ ಗಾಂಧಿ ಮುಂದೆ ದೊಡ್ಡ ಮನುಷ್ಯನಾಗಲು ಡಿಕೆಶಿ ನಿರು ಬಿಟ್ಟಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗ (ಸೆ.22): ರಾಜ್ಯದಲ್ಲಿ ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬನಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ ಕಾರಣ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆರೋಪಿಸಿದರು.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಇಂಡಿಯ ಗ್ರೂಪ್ ತೃಪ್ತಿ ಪಡಿಸಲು , ಸಿಎಂ ಸ್ಟಾಲಿನ್ ಹಾಗೂ ಸೋನಿಯಾ ಗಾಂಧಿಯವರನ್ನು ತೃಪ್ತಿಪಡಿಸಲು ಕದ್ದು ಮುಚ್ಚಿ ನೀರು ಬಿಟ್ಟಿದ್ದಾರೆ. ನೀರು ಬಿಡುವ ಮುಂಚೆ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ನೀರಾವರಿ ತಜ್ಞರ ಅಭಿಪ್ರಾಯ ಕೇಳಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಮುಠ್ಠಾಳತನ ಮಾಡಿದ್ದಾರೆ ಎಂದು ಹರಿಹಾಯ್ದರು.
ಈ ಸರ್ಕಾರಕ್ಕೆ ರಾಜ್ಯದ ರೈತರ ಹಿತಕ್ಕಿಂತ ರಾಜಕೀಯ ಸ್ವಾರ್ಥ ಮುಖ್ಯವಾಗಿದೆ. ರಾಜ್ಯದ ವಸ್ತುಸ್ಥಿತಿ ಗಮನಿಸದೇ ಕಾವೇರಿ ನೀರು ಹರಿಸಿದ್ದಾರೆ. ರೈತರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೋ ಗೊತ್ತಿಲ್ಲ. ಹಿಂದೆ ಬಂಗಾರಪ್ಪ ಸಿಎಂ ಆಗಿದ್ದಾಗ ಕಾವೇರಿ ನೀರು ಬಿಡುವುದಿಲ್ಲ ಎಂದು ಗಟ್ಟಿ ಹೆಜ್ಜೆ ಇಟ್ಟಿದ್ದರು. ಆದರೆ ಸ್ಟಾಲಿನ್ ಮತ್ತು ಸೋನಿಯಾ ಗಾಂಧಿ ಮುಂದೆ ದೊಡ್ಡ ಮನುಷ್ಯನಾಗಲು ಡಿಕೆಶಿ ನಿರು ಬಿಟ್ಟಿದ್ದಾರೆ.
ಗ್ಯಾರಂಟಿ ದುಡ್ಡು ಹೊಡೆಯೋದೇ ಕಾಂಗ್ರೆಸ್ ಯೋಚನೆ: ಈಶ್ವರಪ್ಪ ವಾಗ್ದಾಳಿ
ಈ ವರ್ಷ ಸಾಕಷ್ಟು ಮಳೆಯಿಲ್ಲದೆ ಜನರಿಗೆ ಕುಡಿಯಲು ನೀರಿಲ್ಲ. ರೈತರ ಬೆಳೆಗಳಿಗೆ ನೀರಿಲ್ಲ ಇಂಥ ಪರಿಸ್ಥಿತಿಯಲ್ಲಿ ರಾತ್ರೋರಾತ್ರಿ ತಮಿಳನಾಡಿಗೆ ನೀರು ಹರಿಸಿದ್ದಾರೆ ಇದಕ್ಕೇ ಡಿಸಿಎಂ ಶಿವಕುಮಾರರೇ ಸಂಪೂರ್ಣ ಹೊಣೆಗಾರರು. ಮೊದಲು ಸಿದ್ದರಾಮಯ್ಯ ತಕ್ಷಣವೇ ಡಿಕೆ ಶಿವಕುಮಾರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ತಾವು ಮಾಡಿದ ಮುಠ್ಠಾಳತನಕ್ಕೆ ಕೇಂದ್ರದತ್ತು ಬೊಟ್ಟುಮಾಡುವುದು ನಿಲ್ಲಿಸಬೇಕು. ನದಿ ನೀರು ಬಿಟ್ಟಿದ್ದು ರಾಜ್ಯ ಸರ್ಕಾರ, ಈಗ ರೈತರ ಆಕ್ರೋಶ ಸರ್ಕಾರದ ಮೇಲೆ ಹೆಚ್ಚಾಗ್ತಿದ್ದಂತೆ ಕೇಂದ್ರ ಸರ್ಕಾರವನ್ನ ಮಧ್ಯೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೀರಾವರಿ ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸರ್ವ ಪಕ್ಷಗಳ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ. ಇದು ನ್ಯಾಯಾಲಯದ ನಿಂದನೆ ಆಗುತ್ತದೆ ಎಂದರೆ ಸಿಎಂ ಸಿದ್ದರಾಮಯ್ಯ ರನ್ನು ಒಂಟಿಯನ್ನಾಗಿ ಬಿಡುವುದಿಲ್ಲ ನಾವು ಕೂಡ ಜೈಲಿಗೆ ಹೋಗುತ್ತೇವೆ ಎಂದರು.
ಇದೀಗ ತೀರ್ಪಿನಂತೆ ಹದಿನೈದು ದಿನ ತಮಿಳನಾಡಿಗೆ ನೀರು ಬಿಟ್ಟರೆ ರಾಜ್ಯದ ಜನರಿಗೆ ಕುಡಿಯಲು ಸಹ ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ವಿವಾದ: ಮಂಡ್ಯದಲ್ಲಿ ಮುಂದುವರಿದ ರೈತರ ಕಿಚ್ಚು; ಹೋರಾಟಕ್ಕೆ ನಿರ್ಮಾಲಾನಂದ ಸ್ವಾಮೀಜಿ ಸಾಥ್
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ:
ರಾಜಣ್ಣ ಮೂವರು ಡಿಸಿಎಂ ಮಾಡಿ ಅನ್ನುತ್ತಿದ್ದಾರೆ. ಇನ್ನೊಬ್ಬರು ಜಾತಿಗೊಂದು ಡಿಸಿಎಂ ಮಾಡಿ ಎನ್ನುತ್ತಿದ್ದಾರೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಗುಂಪುಗಾರಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹಾಸ್ಯಾಸ್ಪದ ಎಂದರು. ಗ್ಯಾರೆಂಟಿ ಕೊಡುತ್ತೇವೆ ಎಂದು ಅಧಿಕಾರಕ್ಕೆ ಕಾಂಗ್ರೆಸ್‌ನ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಶಿವಮೊಗ್ಗದ ಗೋವಿಂದಪುರದಲ್ಲಿ
ಆಶ್ರಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಶೀಘ್ರದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.