ಕಾವೇರಿ ವಿವಾದ: ಮಂಡ್ಯದಲ್ಲಿ ಮುಂದುವರಿದ ರೈತರ ಕಿಚ್ಚು; ಹೋರಾಟಕ್ಕೆ ನಿರ್ಮಾಲಾನಂದ ಸ್ವಾಮೀಜಿ ಸಾಥ್

By Ravi Janekal  |  First Published Sep 22, 2023, 1:30 PM IST

ಹಲವು ದಶಕಗಳಿಂದ ಕರ್ನಾಟಕ ತಮಿಳನಾಡು ಮಧ್ಯೆ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಮೊದಲು ಕುಡಿಯುವುದಕ್ಕೆ ನೀರು ಕೊಡಬೇಕು ಅನಂತರ ವ್ಯವಸಾಯ, ಕೈಗಾರಿಕೆಗೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


ಮಂಡ್ಯ (ಸೆ.22): ಹಲವು ದಶಕಗಳಿಂದ ಕರ್ನಾಟಕ ತಮಿಳನಾಡು ಮಧ್ಯೆ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಮೊದಲು ಕುಡಿಯುವುದಕ್ಕೆ ನೀರು ಕೊಡಬೇಕು ಅನಂತರ ವ್ಯವಸಾಯ, ಕೈಗಾರಿಕೆಗೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿವರ್ಷ ತಮಿಳುನಾಡಿಗೆ 419TMC ನೀರು,ಕರ್ನಾಟಕಕ್ಕೆ  270TMC ನೀರು ನಿಗದಿ ಮಾಡಲಾಗಿದೆ.ಆದರೆ ‌ಮಳೆ ಕಡಿಮೆ ಆದ ಸಂಧರ್ಭದಲ್ಲಿ ನೀರು ಹಂಚಿಕೆ ಸಮಸ್ಯೆ ಎದುರಾಗುತ್ತದೆ ಆಗ ಸಂಕಷ್ಟ ಸೂತ್ರ ರಚಿಸಬೇಕಿತ್ತು ಎಂದರು. 

Latest Videos

undefined

ಕಾವೇರಿ ವಿಚಾರದಲ್ಲಿ ಅಂದು ಬಂಗಾರಪ್ಪನವರು ಚಿಟಿಕೆ ಹೊಡೆಯೊದ್ರೊಳಗೆ ಉತ್ತರ ಕೊಟ್ಟುಬಿಟ್ಟರು: ಮಧು ಬಂಗಾರಪ್ಪ

ಈ ವರ್ಷ ಮಳೆ ಅಭಾವದಿಂದ ನಮ್ಮಲ್ಲಿ ಬೆಳೆಗೆ ಬಿಡಿ, ಕುಡಿಯಲು ನೀರು ಸಿಗದಂತಾಗಿದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಒಂದೆಡೆ ನೀರು ಇಲ್ಲದಿದ್ರೆ ಬೆಳೆ ಒಣಗುವುದು ಒಂದೆಡೆಯಾದರೆ ಇನ್ನೊಂದೆಡೆ ಕುಡಿಯಲು ನೀರು ಸಿಗದಿದ್ದರೆ ಮನುಷ್ಯನೇ ಒಣಗಿಹೋಗುತ್ತಾನೆ. ಸದ್ಯ ಬೆಳೆಗಿಂತ ಮನುಷ್ಯ ಅಸ್ತಿತ್ವವೇ ಈಗ ಪ್ರಶ್ನೆ ಆಗಿದೆ. ತಮಿಳುನಾಡು ಬೆಳೆಗೆ ನೀರು ಕೇಳುತ್ತದೆ ನಮಗೆ ಕುಡಿಯುಲು ನೀರು ಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು ಎಂದು ತೀರ್ಪಿನ ವಿರುದ್ಧ ಬೇಸರ ವ್ಯಕ್ತಪಡಿಸಿದರು.


ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲಾಗಿದೆ. ಈಗ ಮತ್ತೆ ಹದಿನೈದು ದಿನಗಳ ಕಾಲ ದಿನಕ್ಕೆ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿದ್ದಾರೆ. ಈ ಆದೇಶದಂತೆ ನೀರು ಹರಿದರೆ ಡ್ಯಾಂನಲ್ಲಿ ನೀರು ಉಳಿಯುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಾಸ್ತವ ಪರಿಸ್ಥಿತಿಯನ್ನು ನ್ಯಾಯಾಲಯದಲ್ಲಿ ಮನವರಿಕೆ ಮಾಡಬೇಕು.
ನಮ್ಮ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಕೋರ್ಟ್ ತೀರ್ಪಿನಂತೆ ಆದೇಶ ಪಾಲನೆ ಮಾಡಬೇಕು, ಪಾಲನೆ ಮಾಡಿದ್ರೆ ರೈತರ ಬದುಕು ಬೀದಿಗೆ ಬರಲಿದೆ. ಒಟ್ಟಿನಲ್ಲಿ ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳ ಜೊತೆ ನಾನು ಚರ್ಚಿಸುತ್ತೇನೆ. ಸಂಕಷ್ಟ ಸೂತ್ರಕ್ಕಾಗಿ ಒತ್ತಾಯಿಸುತ್ತೇನೆ ಎಂದರು. ಇದೇ ವೇಳೆ ಮೇಕೆದಾಟು ಯೋಜನೆ ಪ್ರಸ್ತಾಪಿಸಿದ ಸ್ವಾಮೀಜಿಗಳು, ಯೋಜನೆ ಜಾರಿ ಮಾಡಬೇಕು. ಮಳೆ ಬಿದ್ದಾಗ ಹೆಚ್ಚುವರಿ ಸಂಗ್ರಹಿಸಿದ್ರೆ ಇಂತಹ ಕಷ್ಟ ಕಾಲದಲ್ಲಿ ಹರಿಸಬಹುದು‌.
ಎರಡು ರಾಜ್ಯಗಳಿಗೂ ಮೇಕೆದಾಟು ಯೋಜನೆ ಸಹಕಾರಿ ಎಂದರು.

ಕಾಂಗ್ರೆಸ್-ತಮಿಳುನಾಡಿನ ನಂಟಿಂದ ರಾಜ್ಯಕ್ಕೆ ನಷ್ಟ: ಕುಮಾರಸ್ವಾಮಿ ಹೇಳಿದ್ದೇನು?

ನಮ್ಮ ರೈತರು ಸುಖಾಸಮ್ಮನೆ ರಸ್ತೆಗೆ ಬರುವವರಲ್ಲ. ಇಂದು ಬೀದಿಗೆ ಇಳಿದಿದ್ದಾನೆಂದರೆ ಆತನಿಗೆ ಕಷ್ಟ ಎದುರಾಗಿದೆ ಎಂದರ್ಥ. ಇವತ್ತಿನ ಕ್ಯಾಬಿನೆಟ್ ರೈತರ ಪರ ನಿರ್ಧಾರವಾಗಲಿ.ರೈತರ ಪರವಾಗಿ ಶ್ರೀ ಮಠ ಯಾವಾಗಲೂ ಇರುತ್ತದೆ. ನಮ್ಮನ್ನ ಯಾರೂ ಕರೆಯದೆ ಇದ್ರೂ ಬಂದಿದ್ದೇವೆ, ಇದು ನಮ್ಮ ಕರ್ತವ್ಯ ಎಂದರು.

click me!