ಮೆಟ್ರೋ ಪಿಲ್ಲರ್‌ ಬಿದ್ದು ಇಬ್ಬರ ಸಾವು, ಬಿಎಂಆರ್‌ಸಿಎಲ್‌, ಗುತ್ತಿಗೆದಾರರ ವಿರುದ್ಧ ಪ್ರಕರಣ!

By Santosh Naik  |  First Published Jan 10, 2023, 3:02 PM IST

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಉರುಳಿ ಇಬ್ಬರು ಸಾವು ಕಂಡ ಪ್ರಕರಣದಲ್ಲಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
 


ಬೆಂಗಳೂರು/ಗದಗ (ಜ.10):  ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಕಂಡ ಘಟನೆಯಲ್ಲಿ  ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರ.ೆ ಪ್ರಕರಣ ಸಂಬಂಧ ಪ್ರಾಣಾಪಾಯದಿಂದ ಪಾರಾಗಿರುವ ಲೋಹಿತ್ ಬಳಿ ಮಾಹಿತಿ ಪಡೆದುಕೊಂಡು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಲೋಹಿತ್‌ ಅವರ ಪತ್ನಿ ತೇಜಸ್ವಿನಿ ಹಾಗೂ ಎರಡೂ ವರ್ಷದ ಪುತ್ರ ವಿಹಾನ್‌ ಸಾವು ಕಂಡಿದ್ದರು. ನೆಗ್ಲಿಜೆನ್ಸಿ ಆರೋಪದಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 337, 338, 304a, 427, 34 ಅನ್ವಯ ಪ್ರಕರಣ ದಾಖಲಾಗಿದೆ. ಸಂಬಂಧಪಟ್ಟ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲೋಹಿತ್ ಕುಟುಂಬದ ಒಡನಾಟ ನೆನದು ಕಣ್ಣೀರಾದ ಜನ: ಮೆಟ್ರೋ ಪಿಲ್ಲರ್ ಬಿದ್ದು ಗದಗ ಮೂಲದ ತಾಯಿ ಮಗು ಸಾವು ಪ್ರಕರಣದಲ್ಲಿ ಲೋಹಿತ್ ಕುಟುಂಬದ ಒಡನಾಟ ನೆನದು ಕಣ್ಣೀರಾದ ಅಕ್ಕಪಕ್ಕದ ಜನ ಕಣ್ಣೀರಾಗಿದ್ದಾರೆ. ಗದಗ ನಗರದ ಸಿದ್ದರಾಮೇಶ್ವರ ಬಡಾವಣೆ ನಿವಾಸಿಗಳಾಗಿದ್ದ ತೇಜಸ್ವಿನಿ, ವಿಹಾ‌ನ್ ಘಟನೆಯಲ್ಲಿ ಸಾವು ಕಂಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಆಗಿದ್ದ ವಿಜಯ್ ಕುಮಾರ್ ಸುಲಾಖೆ ಅವರ ಹಿರಿಯ ಸೊಸೆ, ಮೊಮ್ಮಗನ ದಾರುಣ ಸಾವಿಗೆ ಜನ ಕಣ್ಣೀರಿಟ್ಟಿದ್ದಾರೆ.

ವಿಜಯ್ ಅವರ್ ಹಿರಿಯ ಮಗ ಲೋಹಿತ್‌ ಸುಲಾಕೆ ಸಾಫ್ಟ್ ವೇರ್ ಇಂಜಿನಿಯರ್‌ ಆಗಿದ್ದರು. ಆರು ವರ್ಷದ ಹಿಂದೆಯಷ್ಟೇ ಲೋಹಿತ್‌ ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಶಿಫ್ಟ್‌ ಆಗಿದ್ದರು.  ಮಂಗಳವಾರ ಬೆಳಗ್ಗೆ ಪತ್ನಿ ಹಾಗೂ ಮಗುವಿನೊಂದಿಗೆ ಬೈಕ್ ನಲ್ಲಿ‌ತೆರಳುತಿದ್ದ ವೇಳೆ ಅವಗಢ ಸಂಭವಿಸಿದೆ. ಪ್ರಕರಣದ ಸುದ್ದಿ ಕೇಳಿ ಅಕ್ಕಪಕ್ಕದ ಮನೆಯ ಜನರು ಆಘಾತಗೊಂಡಿದ್ದಾರೆ. 'ವಿಷಯ ಕೇಳಿ ಆಘಾತವಾಗಿದೆ.. ಮೊನ್ನೆ ಬೆಂಗಳೂರಿಂದ ಬಂದು ಹೋಗಿದ್ದರು. ಬಹಳ ಸಂಭಾವಿತರು ಏರಿಯಾದಲ್ಲಿ ಕಿರಿಕಿರಿ ಮಾಡುತ್ತಿರಲಿಲ್ಲ ಎಂದು ಲೋಹಿತ್ ಕುಟುಂಬದ ಒಡನಾಟವನ್ನು ಅಕ್ಕಪಕ್ಕದ ಜನ ನೆನೆದಿದ್ದಾರೆ.

Latest Videos

undefined

ಬೆಂಗಳೂರಿಗರೆ ಮೆಟ್ರೋ ಮಾರ್ಗದ ಅಡಿಯ ರಸ್ತೆಗಳಲ್ಲಿ ಹೋಗೋವಾಗ ಹುಷಾರ್‌!

ಮೊಮ್ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಲೋಹಿತ್‌ ಪಾಲಕರು: ಮೊಮ್ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಗದಗ್ ನಿಂದ ಬೆಂಗಳೂರಿಗೆ ಲೋಹಿತ್‌ ಪೋಷಕರು ಬಂದಿದ್ದರು. ಲೋಹಿತ್ ಕುಟುಂಬ ಜೊತೆಗೆ ಎರಡು ವರ್ಷದಿಂದ ಲೋಹಿತ್‌ ತಂದೆ ತಾಯಿ ವಾಸವಿದ್ದರು. ಕಳೆದ ಒಂದು ವಾರದಿಂದ ಮಕ್ಕಳನ್ನು ಬೇಬಿ ಸಿಟ್ಟಿಂಗ್ ಕಳುಹಿಸಲಾಗುತ್ತಿತ್ತು. ಮಕ್ಕಳೊಂದಿಗೆ ಬೆರೆಯಲಿ ಎಂಬ ಕಾರಣಕ್ಕೆ ಬೇಬಿ ಸಿಟ್ಟಿಂಗ್ ಹಾಕಲಾಗಿತ್ತು. ಮಧ್ಯಾಹ್ನ ಕಚೇರಿಯಿಂದ ವಾಪಾಸಾಗುವಾಗ ಮಕ್ಕಳನ್ನು ಮನೆಗೆ ಕರೆತರಲಾಗುತ್ತಿತ್ತು. ಲೋಹಿತ್ ಹಾಗೂ ತೇಜಸ್ವಿನಿ ಇಬ್ಬರೂ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಆದರೆ, ಮಕ್ಕಳಿಗೋಸ್ಕರ ಇಬ್ಬರೂ ಕಚೇರಿಗೆ ತೆರಳಲು ತೀರ್ಮಾನ ಮಾಡಿದ್ದರು.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಉರುಳಿ ತಾಯಿ,ಮಗ ಸಾವು!

20 ಲಕ್ಷ ರೂಪಾಯಿ ಪರಿಹಾರ: ಘಟನೆ ನಡೆದ 5 ಗಂಟೆಗಳ ಬಳಿಕ ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿದ ಬಿಎಂಆರ್‌ಸಿಎಲ್‌ ಎಂಡಿ ಅಂಜುಂ ಪರ್ವೇಜ್‌, ಮೃತ ತೇಜಸ್ವಿನಿ, ವಿಹಾನ್‌ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಚೀಫ್‌ ಇಂಜಿನಿಯರ್‌ ಹಾಗೂ ಗುತ್ತಿಗೆದಾರನಿಗೆ ನೋಟಿಸ್‌ ನೀಡಿದ್ದೇನೆ. 18 ಮೀಟರ್‌ ಉದ್ದದ ಪಿಲ್ಲರ್‌ ಬಿದ್ದಿದೆ. ಈ ಕುರಿತಂತೆ ಎಲ್ಲಾ ಇಂಜಿಯರ್‌ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

click me!