ಬಿಜೆಪಿ, ಸಂಘ ಪರಿವಾರ, ರೈತರು, ಕನ್ನಡಪರ ಸಂಘಟನೆಗಳ ಮೇಲಿನ ಕೇಸ್‌ ವಾಪಸ್

By Kannadaprabha NewsFirst Published Aug 11, 2021, 9:42 AM IST
Highlights
  • ಹಿಂದಿನ ಸರ್ಕಾರ ಬಿಜೆಪಿ, ಸಂಘ ಪರಿವಾರ, ರೈತರು ಹಾಗೂ ಕನ್ನಡಪರ ಸಂಘಟನೆಗಳ ಮೇಲೆ  ದಾಖಲಿಸಿರುವ ಪ್ರಕರಣ
  • ಪ್ರಕರಣಗಳನ್ನು ಹಿಂಪಡೆಯುವ ಕುರಿತು ಆದೇಶ ಹೊರಡಿಸಲಾಗುವುದು ಎಂದ ಗೃಹ ಸಚಿವ

ಬೆಂಗಳೂರು (ಆ.11): ಹಿಂದಿನ ಸರ್ಕಾರವು ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರಷ್ಟೇ ಅಲ್ಲದೆ, ರೈತರು ಹಾಗೂ ಕನ್ನಡಪರ ಸಂಘಟನೆಗಳ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಡಿರುವ ಮನವಿ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಮಾತ್ರವಲ್ಲದೇ, ರೈತರು, ಕನ್ನಡ ಪರ ಸಂಘಗಳ ಮೇಲೂ ಸಹ ಬೇಕು ಅಂತಲೇ ಹಿಂದಿನ ಸರ್ಕಾರ ಪ್ರಕರಣ ಹಾಕಿದೆ. ಅದನ್ನು ಹಿಂಪಡೆಯುವಂತೆ ಆದೇಶ ನೀಡಲಾಗುವುದು ಎಂದರು.

ಅಕ್ರಮ ಚಟುವಟಿಕೆಗಳಿಗೆ ಪೊಲೀಸರೇ ಹೊಣೆ : ಆರಗ ಜ್ಞಾನೇಂದ್ರ

ಗೊಂದಲ ಇಲ್ಲ:  ಶಾಸಕ ಅಪ್ಪಚ್ಚು ರಂಜನ್‌ ಅವರು ಸಚಿವ ಸ್ಥಾನ ಬೇಡಿಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಗೊಂದಲ ಇಲ್ಲ. ಪೋಸ್ಟ್‌ ಖಾಲಿ ಇದೆ. ಅದಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರು ಸಹ ಹಿರಿಯರಿದ್ದಾರೆ ಎಂದು ಹೇಳಿದರು.

ನೋವಿನಿಂದ ಈಶ್ವರಪ್ಪ ಮಾತು:  ಇನ್ನು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದವರು, ಸಂಘಟನೆಯವರ ಕಗ್ಗೊಲೆಯಾಗಿದೆ. ಆ ನೋವಿನ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ಅದನ್ನು ಬೆಳೆಸುವುದು ಬೇಡ ಎಂದು ಸಮರ್ಥಿಸಿಕೊಂಡರು

click me!