ಪ್ರಯಾಣಿಕರಿಗೆ ಅತ್ಯುನ್ನತ ಶೇಣಿಯ ಪ್ರವಾಸ ಅನುಭವ ನೀಡುವ ಉದ್ದೇಶದಿಂದ ಬಿಎಸ್ 4 - 9600 ವೋಲ್ವೊ ಮಲ್ಟಿಆಕ್ಸಲ್ ಸ್ಲೀಪರ್ ಬಸ್ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲು ಮುಂದಾದ ಕೆಎಸ್‌ಆರ್‌ಟಿಸಿ
ಬೆಂಗಳೂರು(ನ.30): ಕೆಎಸ್‌ಆರ್‌ಟಿಸಿ ನೂತನವಾಗಿ ಆರಂಭಿಸುತ್ತಿರುವ ವೋಲ್ವೊ ಮಲ್ಟಿಆಕ್ಸಲ್ ಸ್ಲೀಪರ್ ಬಸ್ ಮತ್ತು ಎಲೆಕ್ಟ್ರಿಕ್ ಬಸ್‌ಗಳಿಗೆ ಸೂಕ್ತ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸವನ್ನು ಸಾರ್ವಜನಿಕರಿಂದ ಆಹ್ವಾನಿಸಿದೆ.
ಪ್ರಯಾಣಿಕರಿಗೆ ಅತ್ಯುನ್ನತ ಶೇಣಿಯ ಪ್ರವಾಸ ಅನುಭವ ನೀಡುವ ಉದ್ದೇಶದಿಂದ ಬಿಎಸ್ 4 - 9600 ವೋಲ್ವೊ ಮಲ್ಟಿಆಕ್ಸಲ್ ಸ್ಲೀಪರ್ ಬಸ್ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲು ಮುಂದಾಗಿದೆ. ಈ ಬಸ್‌ಗಳಿಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸವನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.
ಬೆಂಗಳೂರಿಂದ 5 ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್..!
ಉತ್ತಮ ಟ್ಯಾಗ್‌ಲೈನ್ ನೊಂದಿಗೆ ಬ್ರಾಂಡ್ ಹೆಸರು ಸೂಚಿಸಿದರೆ ಪ್ರತಿ ಬಸ್‌ಗೆ 10 ಸಾವಿರ ರು., ಉತ್ತಮ ಗ್ರಾಫಿಕ್ಸ್‌ಗೆ 25 ಸಾವಿರ ರು. ನಗದು ಬಹುಮಾನ ನೀಡಲಾಗುವುದು .ಡಿಸೆಂಬರ್ 5ರೊಳಗೆ cpro@ksrtc.org ವಿಳಾಸಕ್ಕೆ ಇ ಮೇಲ್ ಕಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.