ಕರ್ನಾಟಕದಲ್ಲಿ 262 ಹೊಸ 108 ಆಂಬ್ಯುಲೆನ್ಸ್‌ ಖರೀದಿಗೆ ಒಪ್ಪಿಗೆ

By Kannadaprabha NewsFirst Published Nov 4, 2022, 10:00 AM IST
Highlights

ಆಂಬ್ಯುಲೆನ್ಸ್‌ಗಳ ಪ್ರತಿಕ್ರಿಯೆ ಸಮಯ, ನಗರ ಮತ್ತು ಗ್ರಾಮೀಣ ಭಾಗದಲ್ಲಿ 15 ರಿಂದ 20 ನಿಮಿಷದಲ್ಲಿ ಲಭ್ಯವಾಗುವುದು, ಜನರಿಗೆ ತ್ವರಿತಗತಿಯಲ್ಲಿ ಸೇವೆ ಲಭ್ಯವಾಗುವ ಉದ್ದೇಶದಿಂದ 262 ಹೊಸ ಆಂಬ್ಯುಲೆನ್ಸ್‌ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದ ಮಾಧುಸ್ವಾಮಿ 

ಬೆಂಗಳೂರು(ನ.04): ರಾಜ್ಯದಲ್ಲಿ 108 ಆಂಬ್ಯುಲೆನ್ಸ್‌ ಸೇವೆಗೆ ಮತ್ತಷ್ಟುಬಲ ನೀಡಲು 262 ಹೊಸ ಆಂಬ್ಯುಲೆನ್ಸ್‌ ಮತ್ತು ವೈದ್ಯಕೀಯ ಉಪಕರಣ ಖರೀದಿಸಲು 98.90 ಕೋಟಿ ರು. ಮೊತ್ತಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಆಂಬ್ಯುಲೆನ್ಸ್‌ಗಳ ಪ್ರತಿಕ್ರಿಯೆ ಸಮಯ, ನಗರ ಮತ್ತು ಗ್ರಾಮೀಣ ಭಾಗದಲ್ಲಿ 15 ರಿಂದ 20 ನಿಮಿಷದಲ್ಲಿ ಲಭ್ಯವಾಗುವುದು, ಜನರಿಗೆ ತ್ವರಿತಗತಿಯಲ್ಲಿ ಸೇವೆ ಲಭ್ಯವಾಗುವ ಉದ್ದೇಶದಿಂದ 262 ಹೊಸ ಆಂಬ್ಯುಲೆನ್ಸ್‌ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಕರ್ನಾಟಕದಲ್ಲಿ ಮತ್ತೆ ಕೈಕೊಟ್ಟ 108 ಆ್ಯಂಬುಲೆನ್ಸ್‌ ಸೇವೆ: ರೋಗಿಗಳ ಕುಟುಂಬಸ್ಥರ ಗೋಳಾಟ

ಹೊಸ ಆಂಬ್ಯುಲೆನ್ಸ್‌ಗಳ ಖರೀದಿ ಸೇರಿದಂತೆ 105 ಎಎಲ್‌ಎಸ್‌ (ಅಡ್ವಾನ್ಸ್‌ ಲೈಫ್‌ ಸಪೋರ್ಚ್‌) ಆಂಬ್ಯುಲೆನ್ಸ್‌ಗಳ ವೈದ್ಯಕೀಯ ಉಪಕರಣಗಳು, 262 ಬಿಎಲ್‌ಎಸ್‌ (ಬೆಸಿಕ್‌ ಲೈಫ್‌ ಸಪೋರ್ಚ್‌) ಅಂಬ್ಯುಲೆನ್ಸ್‌ಗಳ ವೈದ್ಯಕೀಯ ಉಪಕರಣಗಳ ಪ್ಯಾಬ್ರಿಕೇಷನ್‌ ಮತ್ತು 2018ನೇ ಸಾಲಿನಲ್ಲಿ ಖರೀದಿಸಿರುವ 369 ಎಎಲ್‌ಎಸ್‌ ಮತ್ತು ಬಿಎಲ್‌ಎಸ್‌ ಆಂಬ್ಯುಲೆನ್ಸ್‌ಗಳ ಉಪಕರಣಗಳು, ಬ್ಯಾಕ್‌ಆಪ್‌ ಆಂಬ್ಯುಲೆನ್ಸ್‌ ರಿಪೇರಿ ಮತ್ತು ನವೀಕರಣ ಒಳಗೊಂಡಂತೆ ಒಟ್ಟು 98.90 ಕೋಟಿ ರು. ವೆಚ್ಚದ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
 

click me!