2025ಕ್ಕೆ ದೇಶದ ಎಲ್ಲ ಹಳ್ಳೀಲೂ ಆರ್‌ಎಸ್‌ಎಸ್‌ ಶಾಖೆ ನಿರ್ಮಾಣ ಗುರಿ

By Kannadaprabha News  |  First Published Aug 29, 2022, 3:30 AM IST

ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷ ಸನಿಹ, ಪುತ್ತೂರಲ್ಲಿ ನಡೆದ ಸಂಘದ ಪ್ರಾಂತ ಬೈಠಕ್‌ನಲ್ಲಿ ನಿರ್ಧಾರ


ಮಂಗಳೂರು(ಆ.29):  2025ರ ವೇಳೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಶುರುವಾಗಿ 100 ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಮೂರು ವರ್ಷದಲ್ಲಿ ದೇಶದ ಎಲ್ಲ ಗ್ರಾಮಗಳಲ್ಲೂ ಆರ್‌ಎಸ್‌ಎಸ್‌ನ ಶಾಖೆಗಳು ಇರಬೇಕು ಎಂದು ಸಂಘ ಗುರಿ ನಿಗದಿಪಡಿಸಿಕೊಂಡಿದೆ. ದೇಶದ ಎಲ್ಲ ಗ್ರಾಮಗಳಲ್ಲೂ ಶಾಖೆ ತೆರೆಯಬೇಕು ಎಂಬ ಗುರಿಯೊಂದಿಗೆ ಕಳೆದ ಮೂರು ದಿನಗಳಿಂದ ಪುತ್ತೂರಿನ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಆರೆಸ್ಸೆಸ್‌ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್‌ ಭಾನುವಾರ ಸಮಾಪನಗೊಂಡಿದೆ.

ಮೂರು ದಿನಗಳ ಬೈಠಕ್‌ನಲ್ಲಿ ಎರಡು ದಿನಗಳ ಕಾಲ ಅಖಿಲ ಭಾರತೀಯ ಕಾರ್ಯವಾಹ ಮುಕುಂದ್‌ ನೇತೃತ್ವದಲ್ಲಿ ಸಂಘದ ಕಾರ್ಯ, ವಿಸ್ತರಣೆ ಬಗ್ಗೆ ಚರ್ಚಿಸಲಾಗಿದೆ. ಎರಡು ದಿನ ಎರಡು ಬೌದ್ಧಿಕ್‌ ಕೂಡ ನಡೆಸಲಾಗಿದೆ. ಶನಿವಾರ ಮಧ್ಯಾಹ್ನ 100 ವರ್ಷಗಳ ಆರೆಸ್ಸೆಸ್‌ ಪಕ್ಷಿನೋಟ ಕುರಿತು ಮುಕುಂದ್‌ ‘ಬೌದ್ಧಿಕ್‌’ ನೀಡಿದರು. ಭಾನುವಾರ ಕೂಡ ಸಂಘಟನಾತ್ಮಕ ಚಟುವಟಿಕೆ ಬಗ್ಗೆ ಮುಕುಂದ್‌ ಮಾತನಾಡಿದರು.

Tap to resize

Latest Videos

ಮಂಗಳೂರು: ಇಂದಿನಿಂದ 3 ದಿನ ಪುತ್ತೂರಲ್ಲಿ ಆರೆಸ್ಸೆಸ್‌ ಬೈಠಕ್‌

ಆರೆಸ್ಸೆಸ್‌ ಆರಂಭವಾಗಿ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಗ್ರಾಮಗಳಿಗೆ ಶಾಖೆ ವಿಸ್ತರಣೆಯಾಗಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಗಮನ ನೀಡಬೇಕು ಎಂಬ ಅಂಶವನ್ನು ಬೈಠಕ್‌ನಲ್ಲಿ ಹೇಳಲಾಗಿದೆ. ಸಂಘದ ಕಾರ್ಯವನ್ನು ವಿಸ್ತರಿಸುವ ದಿಶೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ವಿಸ್ತಾರಕರಾಗಿ ಹೊರಡಬೇಕು. ದೇಶದಲ್ಲಿ ಬದಲಾವಣೆ ತರಬೇಕಾದರೆ ಇಷ್ಟುವರ್ಷ ಬೇಕಾಯಿತು. ಸಂಘದ ಕಾರ್ಯಕ್ಕೆ ಇದೀಗ ವಿಶ್ವವೇ ಮನ್ನಣೆ ನೀಡುವಂತಾಗಿದೆ. ಸಂಘದ ಕಾರ್ಯಕ್ಕೆ ಪೂರಕವಾಗಿ ಸಂಘ ಪರಿವಾರದ ಕಾರ್ಯಗಳೂ ನಡೆಯಬೇಕು ಎಂದು ಬೈಠಕ್‌ನಲ್ಲಿ ಆಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

3ನೇ ದಿನವೂ ಕಟೀಲ್‌ ಭಾಗಿ: ಪ್ರಾಂತ ಬೈಠಕ್‌ನ 2ನೇ ದಿನವಾಗಿದ್ದ ಶನಿವಾರ ವಿವಿಧ ಕ್ಷೇತ್ರಗಳ ಬೈಠಕ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭಾಗವಹಿಸಿದ್ದರು. ಭಾನುವಾರ 3ನೇ ದಿನವೂ ಅವರು ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರ ಬೈಠಕ್‌ನಲ್ಲಿ ಬಿಜೆಪಿ ಪರ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಕುಂತೂರು ಸಂಘಟನಾತ್ಮಕ ವರದಿ ಮಂಡಿಸಿದರು.
 

click me!