ಬೆಂಗಳೂರು ಕೆರೆಗಳ ನೀರನ್ನು ಕುಡಿಯುವುದಕ್ಕೆ ಪೂರೈಸಲು ಜಲಮಂಡಳಿ ಚಿಂತನೆ: ನಿಮ್ಮ ಅಭಿಪ್ರಾಯವೇನು?

By Sathish Kumar KH  |  First Published Aug 9, 2023, 9:24 PM IST

ಬೆಂಗಳೂರಿನಲ್ಲಿರುವ ಕೆರೆಗಳ ನೀರನ್ನು ಸ್ಥಳೀಯವಾಗಿಯೇ ಶುದ್ಧೀಕರಿಸಿ ಕುಡಿಯಲು ಪೂರೈಕೆ ಮಾಡುವುದಕ್ಕೆ ಬಿಡಬ್ಲ್ಯೂಬಿಎಸ್‌ಎಸ್‌ಬಿ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದೆ. 


ಬೆಂಗಳೂರು (ಆ.09): ಬೆಂಗಳೂರಿನಲ್ಲಿ ಕಲುಷಿತಗೊಂಡಿರುವ ಕೆರೆಗಳ ನೀರನ್ನು ಸ್ಥಳೀಯವಾಗಿಯೇ ಶುದ್ಧೀಕರಿಸಿ ಕುಡಿಯಲು ಪೂರೈಕೆ ಮಾಡುಬಹುದೇ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಬಿಎಸ್‌ಎಸ್‌ಬಿ) ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದೆ. 

ಸಿಲಿಕಾನ್‌ ಸಿಟಿ ರಾಜಧಾನಿ ದೇಶದಲ್ಲಿಯೇ ವಾಸಯೋಗ್ಯ ನಗರದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ, ರಾಜ್ಯ, ಹೊರ ರಾಜ್ಯ ಹಾಗೂ ವಿದೇಗಳಿಂದ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗಿದ್ದು, ಅಂದಾಜಿನ ಪ್ರಕಾರ ಬೆಂಗಳೂರಿನ ಜನಸಂಖ್ಯೆ 1.3 ಕೋಟಿ ದಾಟಿದೆ. ಆದರೆ, ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ನೀರು ಸರಬರಾಜು ಮಂಡಳಿಯು, ಹೊರಜಿಲ್ಲೆಗಳಲ್ಲಿ ಹರಿಯುವ ನದಿಗಳಿಂದ ನೀರನ್ನು ತರುವ ಬದಲು ಸ್ಥಳೀಯವಾಗಿಯೇ ಲಭ್ಯವಿರುವ ನೀರಿನ ಮೂಲಗಳಾದ ಕೆರೆಗಳಿಂದಲೇ ಕುಡಿಯುವ ನೀರು ಪೂರೈಕೆ ಮಾಡುಬಹುದೇ ಎಂಬ ಚಿಂತನೆಯನ್ನು ಮಾಡಿದೆ.

Tap to resize

Latest Videos

undefined

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 210ಕ್ಕೂ ಕೆರೆಗಳಿವೆ. ಆದರೆ, ಯಾವುದೇ ಕರೆಗಳ ನೀರು ಬಳಸಲು ಮಾತ್ರವಲ್ಲಿ ಮುಟ್ಟಲೂ ಕೂಡ ಯೋಗ್ಯವಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ, ಬ್ರ್ಯಾಂಡ್‌ ಬೆಂಗಳೂರು ಅಭಿಯಾನದಡಿ ಸಿಲಿಕಾನ್ ಸಿಟಿ ಜನರ ಅಭಿಪ್ರಾಯ ಕೇಳುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕಲುಷಿತ ಕೆರೆಗಳ ನೀರನ್ನು ಶುದ್ಧೀಕರಿಸಿ ಕುಡಿಯಲು ಪೂರೈಕೆ ಮಾಡಬಹುದೇ ಎಂದು ಅಭಿಪ್ರಾಯ ಕೇಳಲು ಮುಂದಾಗಿದೆ. 

Bengaluru: ಕೆಂಗೇರಿ-ಬೈಯಪ್ಪನಹಳ್ಳಿ, ಕೆಆರ್‌ಪುರ-ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ವ್ಯತ್ಯಯ

ಬ್ರಾಂಡ್ ಬೆಂಗಳೂರು (ಜಲ ಸಂರಕ್ಷಾ ಬೆಂಗಳೂರು) ಸುಂದರ ಬೆಂಗಳೂರಿಗಾಗಿ ನಾಗರೀಕರ ಭಾಗವಹಿಸುವಿಕೆ ಕಾರ್ಯಕ್ರಮದ ಅಡಿಯಲ್ಲಿ, ಜನರ ಅಭಿಪ್ರಾಯ ಸಂಗ್ರಹಣೆಗೆ ಆ.10ರಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರವು 'ಬ್ರಾಂಡ್ ಬೆಂಗಳೂರು' ಶೀರ್ಷಿಕೆಯೊಂದಿಗೆ ಬೆಂಗಳೂರಿನ ಸರ್ವಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಈ ಸಂಬಂಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು (ಬೆಂಗಳೂರು ಜಲಮಂಡಳಿ- ಬಿಡಬ್ಲ್ಯೂಎಸ್‌ಎಸ್‌ಬಿ) ನೋಡಲ್ ಏಜೆನ್ಸಿಯನ್ನಾಗಿ ನೇಮಕ ಮಾಡಿದೆ. ಈ ಸಂಸ್ಥೆಯು ಶೈಕ್ಷಣಿಕ ಸಂಸ್ಥೆಯಾದ ದಯಾನಂದ ಸಾಗರ್ ತಾಂತ್ರಿಕ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನ ನಾಗರೀಕರು, ಕ್ಷೇಮಾಭಿವೃದ್ಧಿ ಸಂಘಗಳು, ಜಲ ತಜ್ಞರು, ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು, ಬೋಧಕ ವರ್ಗದವರು ಈ ಕಾರ್ಯಕ್ರದಲ್ಲಿ ಆಗಮಿಸಿ ತಮ್ಮ ಸಲಹೆಗಳನ್ನು ನೀಡಲು ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ.

  • ಈ ಅಂಶಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ: 
  • ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರು ಬಳಕೆ (ಇತರೇ ಬಳಕೆಗಾಗಿ) ಮಾಡುವ ಮೂಲಕ, ಶುದ್ಧ ನೀರಿನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವುದು.
  • ಈ ಭೂಮಿಯ ಮಟ್ಟವನ್ನು ಹೆಚ್ಚಿಸಲು ಮಳೆನೀರು ಕೊಯ್ದು ಅಳವಡಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಹಾಗೂ ಮಳೆ ನೀರು ಶೇಖರಿಸಿ ಉಪಯೋಗಿಸುವುದು.
  • ಅಂತರ್ಜಲವನ್ನು ಅವೈಜ್ಞಾನಿಕವಾಗಿ ಬಳಸುವುದನ್ನು ನಿಯಂತ್ರಿಸಲು ಮನವರಿಕೆ ಮಾಡುವುದು. 
  • ನಗರದ ಕೆರೆಗಳನ್ನು ಕುಡಿಯುವ ನೀರು ಸರಬರಾಜಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಆಲೋಚಿಸಿ ಕಾರ್ಯಗತಗೊಳಿಸುವುದು.

ಪುನೀತ್, ಸ್ಪಂದನಾ ಸಾವಿನ ಬೆನ್ನಲ್ಲೇ, ಕೇರಳ ತಂತ್ರಿಗಳ ಬಳಿ ಅಷ್ಟಮಂಗಳ ಪ್ರಶ್ನೆ: ಈಡಿಗ ಸ್ವಾಮೀಜಿ ಮುಂದಾಳತ್ವ

ಕಾರ್ಯಕ್ರಮದ ವಿಳಾಸ ಇಲ್ಲಿದೆ ನೋಡಿ: ಬೆಂಗಳೂರು ನಗರಕ್ಕೆ ಲಭ್ಯತೆಯಿರುವ ನೀರನ್ನು ವ್ಯವಸ್ಥಿತವಾಗಿ ಎಲ್ಲಾರಿಗೂ ಸುಗಮವಾಗಿ ನೀರನ್ನು ಸರಬರಾಜು ಮಾಡುವ ದಿಕ್ಕಿನಲ್ಲಿ ಹಾಗೂ ಪ್ರತಿಯೊಬ್ಬರಿಗೂ ಸಮಾನವಾಗಿ ನೀರು ಸರಬರಾಜು ಕೈಗೊಳ್ಳುವ ನಿಟ್ಟಿನಲ್ಲಿ ಮತ್ತು ಮೇಲ್ಕಂಡ ವಿಷಯಗಳಿಗೆ ಸಲಹೆಗಳನ್ನು ಕೇಳಲಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಡಿ.ಎಸ್.ಸಿ.ಇ ಕ್ಯಾಂಪಸ್‌ನ ಡಾ. ಪ್ರೇಮ ಚಂದ್ರ ಸಾಗರ್ ಸಂಭಾಗಣದಲ್ಲಿ ಆ.8ರ ಗುರುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಗರದ ನಾಗರಿಕರು, ಕ್ಷೇಮಾಭಿವೃದ್ಧಿ ಸಂಘಗಳು, ಜಲ ತಜ್ಞರು, ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು, ಬೋಧಕ ವರ್ಗದವರು ಈ ಕಾರ್ಯಕ್ರಮದಲ್ಲಿ ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲು ಕೋರಲಾಗಿದೆ.

 

click me!