ಮೈಸೂರು (ಸೆ.21) :ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರಾದ, ಮಾಧ್ಯಮ ಲೋಕದ ಮುಂಚೂಣಿ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆಯು ‘ಸಾಂಸ್ಕೃತಿಕ ರಾಜಧಾನಿ’ ಮೈಸೂರು ಭಾಗದ ಉದ್ಯಮ ಕ್ಷೇತ್ರದ ಸಾಧಕರಿಗೆ ಬಿಸಿನೆಸ್ ಅವಾರ್ಡ್ ನೀಡಿ ಗೌರವಿಸಿತು. ನಗರದ ಪ್ರತಿಷ್ಠಿತ ರಾರಯಡಿಸನ್ ಬ್ಲೂ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪ್ರತಾಪ ಸಿಂಹ ಅವರು ಸಾಧಕರನ್ನು ಗೌರವಿಸಿ, ಅಭಿನಂದನಾ ನುಡಿಗಳನ್ನಾಡಿದರು.
ಎಸ್‌ಎಂಪಿ ಡೆವಲಪರ್ಸ್‌ನ ಎಸ್‌ಎಂ ಶಿವಪ್ರಕಾಶ್‌ಗೆ ಮೈಸೂರು ಬಿಸ್ನೆಸ್ ಅವಾರ್ಡ್
undefined
ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸಕ್ಕಷ್ಟೆಸೀಮಿತಗೊಳ್ಳದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆಯು ದೇಶದ ಪ್ರಗತಿಗೆ ಪೂರಕವಾಗಿ ಶ್ರಮಿಸಿದ ಮತ್ತು ನವ ಉದ್ಯಮಿಗಳಿಗೆ ಮಾದರಿಯಾದ ಸಾಧಕರನ್ನು ಹೆಕ್ಕಿ ತೆಗೆದು ಗೌರವಿಸಿದೆ ಎಂದರು.
ವ್ಯವಸ್ಥೆಗೆ ಚಾಟಿ ಬೀಸುವುದಕಷ್ಟೇ ಸೀಮಿತಗೊಳ್ಳದೇ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾದ ಮತ್ತು ಮಾದರಿಯದ ಉದ್ಯಮಿಗಳನ್ನು ಗುರುತಿಸಿ ಮತ್ತು ಇಡೀ ವಿಶ್ವಕ್ಕೆ ಪರಿಚಯಿಸಿ, ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ. ನಾಡಿನ ಸಾಧಕರನ್ನು ಗುರುತಿಸಿ, ಪುರಸ್ಕರಿಸುವ ಮೂಲಕ ಎಲ್ಲರಿಗೂ ಮಾದರಿಯಾದ ಕಾರ್ಯದಲ್ಲಿ ತೊಡಗಿದೆ. ಇಲ್ಲಿ ಗುರುತಿಸಿಕೊಂಡ ಸಾಧಕರು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತ ರತ್ನ, ಅಸಾಮಾನ್ಯ ಕನ್ನಡಿಗ, ಶೌರ್ಯ ಪ್ರಶಸ್ತಿ, ಮಹಿಳಾ ಸಾಧಕ, ರೈತ ರತ್ನ ಪ್ರಶಸ್ತಿ, ಕಿರಿಯ ಸಂಪಾದಕ, ಎಜುಕೇಷನ್ ಎಕ್ಸ್‌ಪೋ, ಫುಡ್ ಎಕ್ಸ್‌ಪೋ ಮುಂತಾದ ಅನೇಕಾರು ಕಾರ್ಯಕ್ರಮಗನ್ನು ಆಯೋಜಿಸುತ್ತ ಬಂದಿದೆ. ಬಿಸಿನೆಸ್ ಅವಾರ್ಡ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಸಿನಿಮಾ ಲೋಕದ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆನ್ನುತಟ್ಟಿಪ್ರೋತ್ಸಾಹಿಸಿದ್ದರು. ನಂತರ ಉತ್ತರ ಕರ್ನಾಟಕದ ಭಾಗದ ರೈತರನ್ನು ಪ್ರೋತ್ಸಾಹಿಸಲು ಹುಬ್ಬಳ್ಳಿಯಲ್ಲಿಯೂ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೋಟೆಲ್ ದಿ ರುಚಿ ಪ್ರಿನ್ಸ್‌ನ ಬಿ. ಮಂಜುನಾಥ್‌ಗೆ ಮೈಸೂರು ಬಿಸ್ನೆಸ್ ಅವಾರ್ಡ್
ಈ ಎರಡೂ ಕಾರ್ಯಕ್ರಮಗಳ ಯಶಸ್ಸಿನ ಬಳಿಕ ಮೈಸೂರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಮಾರ್ವೆಲ್ಲಾ ಬಿಲ್ಡ್‌ಟೆಕ್, ಆಯುರ್ಮಾಟಂ, ಕೆಎಸ್‌ಡಿಎಲ್, ಅನಘಾ ಎಂಟರ್‌ಪ್ರೈಸಸ್ ಮತ್ತು ಡಿವೈನ್ ಪಾರ್ಕ್ನ ಸಹ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು.