ಅಡ್ಡ ಬಂದ ಅಜ್ಜನ ಉಳಿಸಲು ಹೋಗಿ ಬಸ್ ಪಲ್ಟಿ: ಮಹಿಳೆ ಸಾವು!

Published : Jan 27, 2019, 05:34 PM IST
ಅಡ್ಡ ಬಂದ ಅಜ್ಜನ ಉಳಿಸಲು ಹೋಗಿ ಬಸ್ ಪಲ್ಟಿ: ಮಹಿಳೆ ಸಾವು!

ಸಾರಾಂಶ

ಏನೋ ಮಾಡಲು ಹೋಗಿ ಇನ್ನೇನೋ ಆಗೋಯ್ತು| ಬಸ್‌ಗೆ ಅಡ್ಡ ಬಂದ ವೃದ್ಧನ ಉಳಿಸಲು ಹೋದ ಚಾಲಕ| ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವು, 42 ಪ್ರಯಾಣಿಕರಿಗೆ ಗಾಯ|ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಘಟನೆ  

ವಿಜಯಪುರ(ಜ.27): ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ದನನ್ನು ಕಾಪಾಡಲು ಹೋಗಿ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿನಡೆದಿದೆ.

ಇಲ್ಲಿನ ಕಪನಿಂಬರಗಿ ಕ್ರಾಸ್ ಬಳಿ ವೇಗವಾಗಿ ಬರುತ್ತಿದ್ದ ಸರ್ಕಾರಿ ಬಸ್ ಗೆ ವೃದ್ಧನೋರ್ವ ಅಡ್ಡ ಬಂದಿದ್ದಾನೆ. ಗಲಿಬಿಲಿಗೊಂಡ ಚಾಲಕ ಜೋರಾಗಿ ಬ್ರೇಕ್ ಹಾಕಿದ ಪರಿಣಾಮ ಬಸ್ ಪಲ್ಟಿಯಾಗಿದೆ. 


ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಬಲಾದಿ ಗ್ರಾಮದ ಮಹಿಳೆ ಸಾವನ್ನಪ್ಪಿದ್ದು, ಇತರ 42 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಲ್ಲದೇ ಬಸ್ ಗೆ ಅಡ್ಡ ಬಂದಿದ್ದ ವೃದ್ಧನ ಕಾಲು ಕೂಡ ಕಟ್ ಆಗಿದ್ದು, ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ