ಸನಾತನ ಧರ್ಮ ದಂಗಲ್‌ ಗೆ ವೇದಿಕೆಯಾದ ಗಣೇಶ ಮಂಟಪಗಳು, ವೀರ ಸಾವರ್ಕರ್‌ಗೂ ನಡೆಯುತ್ತಿದೆ ಪೂಜೆ!

By Ravi JanekalFirst Published Sep 22, 2023, 2:56 PM IST
Highlights

ಗುಮ್ಮಟನಗರಿ ವಿಜಯಪುರದಲ್ಲಿ ಸನಾತನ ಧರ್ಮ ದಂಗಲ್‌ ಜೋರಾಗಿದೆ. ಹಿಂದೂ ವಿರೋಧಿಗಳಿಗೆ ಟಾಂಗ್‌ ಕೊಡೊದಕ್ಕೆ ಈಗ ಗಣೇಶ ಮಂಟಪಗಳು ವೇದಿಕೆಯಾಗಿವೆ. ಗಣೇಶ ಮಂಟಪಗಳಲ್ಲಿ ಸನಾತನ ಹಿಂದೂ ವೇದಿಕೆ ಬ್ಯಾನರ್‌, ಬಂಟಿಂಗ್ಸ್‌ ಗಳು ರಾರಾಜಿಸುತ್ತಿವೆ. ಜೊತೆಗೆ ಗಣೇಶ ಮೂರ್ತಿಯ ಜೊತೆ-ಜೊತೆಗೆ ವೀರ್‌ ಸಾವರ್ಕರ್‌ ಭಾವಚಿತ್ರವನ್ನಿಟ್ಟು ನಿತ್ಯ ಪೂಜೆ ಸಲ್ಲಿಸ್ತಿದ್ದಾರೆ.

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ 22) : ಗುಮ್ಮಟನಗರಿ ವಿಜಯಪುರದಲ್ಲಿ ಸನಾತನ ಧರ್ಮ ದಂಗಲ್‌ ಜೋರಾಗಿದೆ. ಹಿಂದೂ ವಿರೋಧಿಗಳಿಗೆ ಟಾಂಗ್‌ ಕೊಡೊದಕ್ಕೆ ಈಗ ಗಣೇಶ ಮಂಟಪಗಳು ವೇದಿಕೆಯಾಗಿವೆ. ಗಣೇಶ ಮಂಟಪಗಳಲ್ಲಿ ಸನಾತನ ಹಿಂದೂ ವೇದಿಕೆ ಬ್ಯಾನರ್‌, ಬಂಟಿಂಗ್ಸ್‌ ಗಳು ರಾರಾಜಿಸುತ್ತಿವೆ. ಜೊತೆಗೆ ಗಣೇಶ ಮೂರ್ತಿಯ ಜೊತೆ-ಜೊತೆಗೆ ವೀರ್‌ ಸಾವರ್ಕರ್‌ ಭಾವಚಿತ್ರವನ್ನಿಟ್ಟು ನಿತ್ಯ ಪೂಜೆ ಸಲ್ಲಿಸ್ತಿದ್ದಾರೆ.

ಹಿಂದೂ ವಿರೋಧಿಗಳಿಗೆ ಟಾಂಗ್ ಕೊಟ್ಟ ಗಣೇಶ ಮಂಡಳಗಳು..!

ಒಂದು ಕಡೆಗೆ ರಾರಾಜಿಸುತ್ತಿರೋ ಸನಾತನ ಹಿಂದೂ ವೇದಿಕೆಯ ದೊಡ್ಡ-ದೊಡ್ಡ ಬ್ಯಾನರ್-ಬಂಟಿಂಗ್ಸ್.‌ ಇತ್ತ ಗಣೇಶ ಮಂಟಪಗಳಲ್ಲಿ ಗಣೇಶ ಮೂರ್ತಿ(Lord ganesh statue)ಯ ಜೊತೆಗೆ ಸಾವರ್ಕರ್‌ ಪೋಟೊಗೆ ನಡೆಯುತ್ತಿರೋ ಪೂಜೆ-ಪುನಸ್ಕಾರ, ಹೌದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಸನಾತನ ಧರ್ಮದ ವಿರುದ್ಧದ ಹೇಳಿಕೆ ಬೆನ್ನಲ್ಲೆ ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ಮನೆ ಮಾಡಿತ್ತು. ಈ ನಡುವೆ ವಿಜಯಪುರ ನಗರ ಶಾಸನ ಬಸನಗೌಡ ಯತ್ನಾಳ್‌(Basanagowda patil yatnal) ಗಣೇಶ ಮಂಟಪಗಳನ್ನ ಸನಾತನ ಹಿಂದೂ ವೇದಿಕೆ(Sanatana hindu vedike) ಎಂದು ನಾಮಕರಣಕ್ಕೆ ಸೂಚನೆ ಕೊಟ್ಟಿದ್ರು. ಈ ನಡುವೆ ವಿವೇಕಾನಂದ ಸೇನೆ ಗಣೇಶ ಮಂಡಳಿಗಳಿಗೆ 5 ಸಾವಿರ ಜೊತೆಗೆ ವೀರ್‌ ಸಾವರ್ಕರ್‌(Veer Savarkar photo ganesh chaturthi) ಪೋಟೊ ವಿತರಣೆ ಮಾಡಿತ್ತು. ಈಗ ಗಣೇಶ ಮಂಟಪಗಳಲ್ಲಿ ಸನಾತನ ಹಿಂದೂ ವೇದಿಕೆ ಬೋರ್ಡ್‌-ಬ್ಯಾನರ್‌ ಗಳು ರಾರಾಜಿಸುತ್ತಿವೆ.  

ಸೋನಿಯಾ ಗಾಂಧಿ, ಸ್ಟಾಲಿನ್ ಮುಂದೆ ದೊಡ್ಮನುಷ್ಯನಾಗಲು ಡಿಕೆಶಿ ನೀರು ಬಿಟ್ಟಿದ್ದಾನೆ: ಈಶ್ವರಪ್ಪ ವಾಗ್ದಾಳಿ

ನಗರದಲ್ಲೆಡೆ ಸನಾತನ ಹಿಂದೂ ವೇದಿಕೆ ಬ್ಯಾನರ್‌ಗಳದ್ದೆ ಸದ್ದು..!

ನಗರದ ಎಲ್ಲೆಡೆ ಅಳವಡಿಕೆ ಮಾಡಲಾದ ಬ್ಯಾನರ್‌ಗಳಲ್ಲು ಸನಾತನ ಹಿಂದೂ ವೇದಿಕೆ ಹೆಸ್ರೆ ಕಾಣುತ್ತಿವೆ. ನಗರದ ಗಾಂಧಿ ವೃತ್ತದಲ್ಲಿ ಓವರ್ ಬ್ರಿಡ್ಜ್ ಮೇಲೆ ಸನಾತನ ಹಿಂದೂ ವೇದಿಕೆ ಎಂದು ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಅಡಕಿ ಗಲ್ಲಿಯ ಗಣೇಶ ಯುವಕ ಮಂಡಳ ಸಹ ಗಣೇಶನ ಪ್ರತಿಷ್ಠಾಪನೆ ಮಾಡಿದ ವೇದಿಕೆಗೆ ಸನಾತನ ಹಿಂದೂ ವೇದಿಕೆ ಎಂದು ನಾಮಕರಣ ಮಾಡಿದೆ. ಅಲ್ಲದೆ ನಗರದ ನಾನಾ ಕಡೆಗಳಲ್ಲಿ ಗಣೇಶ ಮಂಟಪಗಳಿಗೆ ಇದೆ ರೀತಿಯಾಗಿ ನಾಮಫಲಕ ಅಳವಡಿಕೆ ಮಾಡಲಾಗಿದೆ.

ಗಣೇಶ ಮಂಟಪಗಳಲ್ಲಿ ವೀರ್ ಸಾವರ್ಕರ್ ಪೋಟೋಗೆ ಪೂಜೆ..!

ಇನ್ನು ವಿಶೇಷ ಅಂದ್ರೆ ಸನಾತನ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನ ಬೆನ್ನಲ್ಲೆ ಈಗ ವಿಜಯಪುರ ನಗರದಲ್ಲಿ ಗಣೇಶ ಮಂಟಪಗಳ ಸಂಖ್ಯೆ ಹೆಚ್ಚಾಗಿದೆ. 550ಕ್ಕು ಅಧಿಕ ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನ ಇರಿಸಲಾಗಿದೆ. ಬಹುತೇಕ ಗಣೇಶ ಮಂಟಪಗಳಲ್ಲಿ ಬೃಹತ್‌ ಗಣೇಶ ಮೂರ್ತಿಗಳ ಜೊತೆಗೆ ವೀರ್‌ ಸಾವರ್ಕರ್‌ ಪೋಟೊಗಳನ್ನು ಇರಿಸಲಾಗಿದೆ. ಗಣೇಶ ಮೂರ್ತಿಗಳ ಪೂಜೆಯ ಜೊತೆ-ಜೊತೆಗೆ ವೀರ್‌ ಸಾರ್ವಕರ್‌ ಪೋಟೊಗು ಗಣೇಶನ ಭಕ್ತರು ಪೂಜೆ ಸಲ್ಲಿಕೆ ಮಾಡ್ತಿದ್ದಾರೆ. ಈ ಮೂಲಕ ಸಾವರ್ಕರ್ ವಿರುದ್ಧ ಮಾತನಾಡಿದವರಿಗೆ ಗಣೇಶ ಮಂಟಪಗಳ ವೇದಿಕೆ ಮೂಲಕ ಟಾಂಗ್ ಕೊಡಲಾಗ್ತಿದೆ.. 

ವಿಜಯಪುರ: ಹರಾಜಿನಲ್ಲಿ ಬರೋಬ್ಬರಿ ₹1.50 ಲಕ್ಷಕ್ಕೆ ಗಣೇಶನ ಲಡ್ಡು ಸೇಲ್!

ಗಣೇಶ ವೇದಿಕೆಗಳ ಪರಿಣಾಮಕಾರಿ ಬಳಕೆ..!

ಸನಾತನ ಧರ್ಮದ ಬಗ್ಗೆ ಸಚಿವ ಉದಯನಿಧಿ ಸ್ಟಾಲಿನ್‌(Udayanidhi stalin) ಹಗುರವಾಗಿ ಮಾತಾಡಿದ್ದರು, ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ನಡುವೆ ರಾಜ್ಯದಲ್ಲಿಯು ಕೆಲವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ರು. ಸಧ್ಯ ಹಿಂದೂ ಸಂಘಟನೆಗಳು, ಹಿಂದೂ ಪ್ರೇಮಿಗಳು ಅಂತವರ ವಿರುದ್ಧ ಸೇಡು ತೀರಿಸಿಕೊಳ್ಳಲು ಗಣೇಶ ಮಂಟಪಗಳನ್ನ ವೇದಿಕೆಯಾಗಿ ಬಳಸಿಕೊಳ್ತಿದ್ದಾರೆ. ವಿಜಯಪುರದಲ್ಲೂ
ಸನಾತನ ಧರ್ಮ ದಂಗಲ್‌ ಗಣೇಶ ಮಂಟಪಗಳು ಈಗ ವೇದಿಕೆಯಾಗಿ ಪರಿಣಮಿಸಿವೆ . ಹಿಂದೂ ಕಾರ್ಯಕರ್ತರು ವೇದಿಕೆಗಳ ಮೂಲಕವೇ ಹಿಂದೂ ವಿರೋಧಿಗಳಿಗೆ ಟಾಂಗ್‌ ಕೊಡ್ತಿದ್ದಾರೆ.

click me!