ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ!

By Kannadaprabha News  |  First Published Feb 24, 2020, 8:18 AM IST

ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ| ಒಂದೇ ಕಂಬಳದ ಋುತುವಿನಲ್ಲಿ ಒಟ್ಟು 39 ಪದಕ|  ಅಪರೂಪದ ಸಾಧನೆ ಮಾಡಿದ ಕಂಬಳದ ‘ಬೋಲ್ಟ್‌’


ಮಂಗಳೂರು[ಫೆ.24]: ಕಂಬಳದ ‘ಉಸೇನ್‌ ಬೋಲ್ಟ್‌’ ಖ್ಯಾತಿಯ ಶ್ರೀನಿವಾಸ ಗೌಡ ಶನಿವಾರ ರಾತ್ರಿ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ನಾಲ್ಕು ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ಒಂದೇ ವರ್ಷ ಕಂಬಳ ಕ್ರೀಡೆಯಲ್ಲಿ ಒಟ್ಟು 39 ಪದಕಗಳನ್ನು ಬಾಚಿದ ಸಾಧನೆ ಮೆರೆದಿದ್ದಾರೆ.

ಕಾಸರಗೋಡು ಮಂಜೇಶ್ವರದ ಪೈವಳಿಕೆಯ ಮೀಯಾರು ಬೆಳಂಗಳ ಎಂಬಲ್ಲಿ ಶನಿವಾರ ನಡೆದ ಬೆಳದಿಂಗಳ 2ನೇ ವರ್ಷದ ಅಣ್ಣ-ತಮ್ಮ ಜೋಡುಕರೆ ಕಂಬಳದಲ್ಲಿ ನಡೆದ ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಲ್ಲಿ ಶ್ರೀನಿವಾಸ ಗೌಡ ಅವರು ಓಡಿಸಿದ ಜೋಡಿ ಕೋಣಗಳು ಪ್ರಥಮ ಹಾಗೂ ಹಗ್ಗ ಹಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿವೆ. ಈ ಮೂಲಕ ಶ್ರೀನಿವಾಸ ಗೌಡ ಅವರ ಮಡಿಲಿಗೆ ಒಂದೇ ಕಂಬಳದಲ್ಲಿ ನಾಲ್ಕು ಪದಕ ಲಭಿಸಿದಂತಾಗಿದೆ. ಇವರಿಗೆ ಸರಿಸಾಟಿಯಾಗಿ ಓಡಿದ ಸುರೇಶ್‌ ಎರಡು ಹಾಗೂ ಆನಂದ ಒಂದು ಪದಕ ಗೆದ್ದುಕೊಂಡಿದ್ದಾರೆ.

Tap to resize

Latest Videos

ಈ ಕಂಬಳ ಋುತುವಿನಲ್ಲಿ ಶ್ರೀನಿವಾಸ ಗೌಡ ಅವರು ಇದುವರೆಗೆ 13 ಕಂಬಳದಲ್ಲಿ 35 ಪ್ರಥಮ ಹಾಗೂ ನಾಲ್ಕು ದ್ವಿತೀಯ ಬಹುಮಾನ ಗೆದ್ದುಕೊಂಡಂತಾಗಿದೆ. ಫೆ.29ರಂದು ಉಪ್ಪಿನಂಗಡಿಯಲ್ಲಿ ಹಾಗೂ ಮಾಚ್‌ರ್‍ 7ರಂದು ಬೆಳ್ತಂಗಡಿಯ ಬಂಗಾಡಿಯಲ್ಲಿ ಕಂಬಳ ನಡೆಯುವುದರೊಂದಿಗೆ ಈ ಬಾರಿಯ ಕಂಬಳ ಸೀಸನ್‌ ಮುಕ್ತಾಯಗೊಳ್ಳಲಿದೆ.

click me!