ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಮದ್ಯಪಾನದಿಂದ ಬರುವ ಆದಾಯದಿಂದಲೇ ರಾಜ್ಯ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಕಷ್ಟ ಸಾಧ್ಯ. ಆದ್ರೆ, ಮದ್ಯ ನಿಷೇಧಕ್ಕೆ ಸ್ವಾಮೀಜಿಗಳ ಮಾತಿಗೆ ಸಿಎಂ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಏನದು..? ಮುಂದೆ ನೋಡಿ..ಆದ್ರೆ
ಚಿಕ್ಕಮಗಳೂರು, [ಜ.14]: ಮದ್ಯಪಾನ ನಿಷೇಧದ ಬಗ್ಗೆ ಸಿರಿಗೆರೆ ಸ್ವಾಮೀಜಿಗಳ ಮಾತಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ಸೊಲ್ಲಾಪುರ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿರೆಗೆರೆ ಸ್ವಾಮೀಜಿಗಳು ತಮ್ಮ ಭಾಷಣದಲ್ಲಿ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂದು ಮನವಿ ಮಾಡಿದರು. ಅಷ್ಟೇ ಅಲ್ಲದೇ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಿಎಂ ಶ್ರೀಗಳು ಮನವಿ ಮಾಡಿ ಮಾತು ಮುಗಿಸಿದರು.
undefined
ಮದ್ಯ ವಹಿವಾಟಿಗೆ ಶುಕ್ರದೆಸೆ! ಮಾರಾಟ ಹೆಚ್ಚಳ
ತದನಂತ ಭಾಷಣ ಮಾಡಿ ಸಿಎಂ ಯಡಿಯೂರಪ್ಪ, ಸ್ವಾಮೀಜಿಗಳು ಹೇಳಿದ ಮಾತುಗಳನ್ನು ಕೇಳಿದ್ದೇನೆ. ರೈತರ ಬದುಕು ಹಸನುಗೊಳಿಸುವುದೇ ಸರ್ಕಾರದ ಗುರಿಯಾಗಿದೆ.
ಸ್ವಾಮೀಜಿ ಹೇಳಿದ ಮಾತುಗಳನ್ನು ಕೇಳಿದ್ದೇನೆ. ಆದ್ರೆ, ನಾನು ಯಾವುದೇ ಭರವಸೆ ನೀಡುವುದಿಲ್ಲ. ಬದಲಾಗಿ ಹಂತ ಹಂತವಾಗಿ ಎಲ್ಲಾವನ್ನು ಜಾರಿಗೊಳಿಸುವುದಾಗಿ ಎಂದು ಹೇಳುವ ಮೂಲಕ ಶ್ರೀಗಳ ಮಾತಿಗೆ ಗೌರವ ನೀಡಿದರು.
ಮದ್ಯಪಾನದಿಂದಲೇ ರಾಜ್ಯ ಸರ್ಕಾರಕ್ಕೆ ಹೆಚ್ಚಾಗಿ ಆದಾಯ ಬರುತ್ತಿದೆ. ಹಾಗಾಗಿ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವುದು ಕಷ್ಟ ಸಾಧ್ಯ.