ಕರ್ನಾಟಕ ಸಿಎಂ ಬದಲಿಸಲು ಒತ್ತಡ: ಸೊಪ್ಪು ಹಾಕುತ್ತಾ ಬಿಜೆಪಿ ಹೈ ಕಮಾಂಡ್?

By Kannadaprabha NewsFirst Published May 29, 2020, 8:07 AM IST
Highlights

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದಲಾವಣೆ ಯತ್ನ ಸೇರಿದಂತೆ ಪಕ್ಷದ ಅತೃಪ್ತ ಶಾಸಕರ ಯಾವುದೇ ಬೇಡಿಕೆಗಳಿಗೆ ಸೊಪ್ಪು ಹಾಕುವ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್‌ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು(ಮೇ 29): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದಲಾವಣೆ ಯತ್ನ ಸೇರಿದಂತೆ ಪಕ್ಷದ ಅತೃಪ್ತ ಶಾಸಕರ ಯಾವುದೇ ಬೇಡಿಕೆಗಳಿಗೆ ಸೊಪ್ಪು ಹಾಕುವ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್‌ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ವಯಸ್ಸನ್ನೂ ಲೆಕ್ಕಿಸದೆ ಕರ್ನಾಟಕದಲ್ಲಿ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅವರನ್ನು ಸದ್ಯದ ಪರಿಸ್ಥಿತಿಯಲ್ಲಿ ಬದಲಾಯಿಸುವ ಅಥವಾ ಅವರನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ವರಿಷ್ಠರು ಪಕ್ಷದ ಬೆಂಬಲ ನೀಡುವುದಿಲ್ಲ ಎಂದು ತಿಳಿದು ಬಂದಿದೆ.

ಡಿಸೆಂಬರ್‌ಗೆ ರಾಜ್ಯದ ಅರ್ಧದಷ್ಟುಜನಕ್ಕೆ ಸೋಂಕು! ವೈರಾಣು ವಿಜ್ಞಾನಿ ಎಚ್ಚರಿಕೆ

ಶಾಸಕರು ಬೇಡಿಕೆ ಇಡಬಹುದು. ಆದರೆ, ಅದರಲ್ಲಿ ಕೆಲವು ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವರಿಷ್ಠರು ಮುಖ್ಯಮಂತ್ರಿಗಳಿಗೇ ಸೂಚಿಸಬಹುದು. ಆದರೆ, ಹೀಗೆಯೇ ಮಾಡಿ ಎಂದು ಹೇಳುವ ಮನಸ್ಥಿತಿಯಲ್ಲಿ ವರಿಷ್ಠರು ಇಲ್ಲ. ಮುಖ್ಯವಾಗಿ ಕೊರೋನಾ ಮಾರಕ ರೋಗದಂಥ ಸಂಕಷ್ಟಪರಿಸ್ಥಿತಿಯಲ್ಲಿ ಶಾಸಕರು ಭೋಜನ ಕೂಟದ ನೆಪದಲ್ಲಿ ಸಭೆ ಸೇರಿ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸುವುದನ್ನು ಸುತಾರಾಂ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪ ಬಗ್ಗೆ ಇದೀಗ ಕೇಂದ್ರಕ್ಕೆ ಮೃದ ಧೋರಣೆ

ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಮತ್ತೊಬ್ಬ ಸಮರ್ಥ ನಾಯಕ ಸಿಗುವುದಿಲ್ಲ. ಕೊರೋನಾ ಪರಿಸ್ಥಿತಿ ನಿಭಾಯಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಅವರ ವೇಗಕ್ಕೆ ತಕ್ಕಂತೆ ಎಲ್ಲ ಸಚಿವರೂ ಸ್ಪಂದಿಸುತ್ತಿಲ್ಲ. ಹೀಗಿರುವಾಗ ಅವರನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.

14ನೇ ವಯಸ್ಸಿನಲ್ಲಿ KBC ಗೆದ್ದ ಬಾಲಕ ಈಗ ಸೂಪರಿಡೆಂಟ್ ಆಫ್ ಪೊಲೀಸ್!

ಮೇಲಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ತಿಂಗಳ 30ಕ್ಕೆ ತನ್ನ ಎರಡನೇ ಅವಧಿಯ ಮೊದಲ ವರ್ಷ ಪೂರೈಸಲಿದೆ. ಜೊತೆಗೆ ಕೊರೋನಾದಿಂದ ಉಂಟಾಗುತ್ತಿರುವ ಸಂಕಷ್ಟಕ್ಕೆ ಪರಿಹಾರ ಹುಡುಕುವಲ್ಲಿ ನಿರತವಾಗಿದೆ. ಈ ವೇಳೆ ತನ್ನ ರಾಜ್ಯ ಸರ್ಕಾರದಲ್ಲಿ ಯಾರೋ ಕೆಲವು ಶಾಸಕರ ವೈಯಕ್ತಿಕ ಬೇಡಿಕೆಗಳಿಗೆ ಮಣೆ ಹಾಕುವ ಸ್ಥಿತಿಯಲ್ಲಿ ಪಕ್ಷದ ವರಿಷ್ಠರು ಇಲ್ಲ ಎಂದು ಹೇಳಿದರು.

click me!