ಮೈತ್ರಿ ಸರ್ಕಾರಕ್ಕೆ ಯಡಿಯೂರಪ್ಪ ಖಡಕ್ ವಾರ್ನಿಂಗ್..!

By Web DeskFirst Published Nov 18, 2018, 8:59 PM IST
Highlights

ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಉಗ್ರ ಪ್ರತಿಭಟನೆ ಹಾಗೂ ಮೈತ್ರಿ ಸರ್ಕಾರದ ನಡುವಿನ ಸಂಘರ್ಷದ ಮಧ್ಯೆ ಬಿಜೆಪಿ ಧಾವಿಸಿದೆ.

ಬೆಂಗಳೂರು, [ನ.18]: ಕಬ್ಬು ಬೆಳೆಗಾರರ ಹಾಗೂ ಮೈತ್ರಿ ಸರ್ಕಾರದ ನಡುವಿನ ತಿಕ್ಕಾಟದಲ್ಲಿ ಬಿಜೆಪಿ ಎಂಟ್ರಿಕೊಟ್ಟಿದೆ.

ಕಬ್ಬಿಗೆ ಬೆಂಬಲ ಬೆಲೆ ನೀಡಿ ಎಂದು ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ರಾಜ್ಯ ಮೈತ್ರಿ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಕೂಡಲೇ ಬೆಳೆಗಾರರ ಸಮಸ್ಯೆ ಪರಿಹಾರ ಮಾಡದಿದ್ದರೆ ಬಿಜೆಪಿ ರೈತರ ಪರ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಅತ್ತ ರೈತರ ಆಕ್ರೋಶ ಕೊತ ಕೊತ ಕುದಿತ್ತಿದ್ರೆ, ಇತ್ತ ದೇವೇಗೌಡ ಕುಟುಂಬದ ಆಕ್ರೋಶ ಕಟ್ಟೆ ಒಡೆಯಿತು..!

ಇಂದು [ಭಾನುವಾರ] ಮಾಧ್ಯಮ ಪ್ರಕಟಣೆ ಹೊರಡಿಸಿದ ಯಡಿಯೂರಪ್ಪ,  ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಈ ಸರ್ಕಾರ ರೈತ ಹಾಗೂ ಉತ್ತರ ಕರ್ನಾಟಕ ವಿರೋಧಿ ಎಂಬುದು ಗೊತ್ತಿರುವ ವಿಚಾರವೇ ಆಗಿದೆ. 

ರೈತರ ವಿಚಾರದಲ್ಲಿ ಮಲತಾಯಿ ಧೋರಣೆ ಪ್ರದರ್ಶನ ಮಾಡುತ್ತಿದೆ. ಪ್ರತಿಭಟನೆ ಮಾಡುತ್ತಿರುವವರನ್ನು ನೀವು ಯಾವ ಪಕ್ಷಕ್ಕೆ ಸೇರಿದವರು ಎಂದು ಕೇಳುವುದು ಉದ್ಧಟತನ. ನ್ಯಾಯಕ್ಕಾಗಿ ಬಂದವರನ್ನು ಬಂಧಿಸಿ ಜೈಲಿಗೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಎಚ್​.ಡಿ.ಕುಮಾರಸ್ವಾಮಿ, ರೇವಣ್ಣ ಅವರು ರೈತರ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಅವರಿಗೆ ನೂರಾರು ಆಸೆ ತೋರಿಸಿ ಕಣ್ಣಿಗೆ ಮಣ್ಣು ಎರಚುತ್ತಿರುವ ಸರ್ಕಾರ ಇದು. ಸಮ್ಮಿಶ್ರ ಸರ್ಕಾರ ಪಲಾಯನವಾದಿಯಾಗಿದೆ ಎಂದು ಹೇಳಿದ್ದಾರೆ.

click me!