'ಗಲಾಟೆ ಮಾಡುತ್ತಿರುವ ಕಬ್ಬು ಬೆಳೆಗಾರರು ರೈತರಲ್ಲ, ಅವ್ರು ಗೂಂಡಾಗಳು'

By Web DeskFirst Published Nov 18, 2018, 4:41 PM IST
Highlights

ಬೆಳಗಾವಿ ಸುವರ್ಣ ಸೌಧ ಬಳಿ ಕಬ್ಬು ಬೆಳೆಗಾರರ ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಾಳಿದೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಹ ಉಗ್ರ ಸ್ವರೂಪದಲ್ಲಿಯೇ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, [ನ.18]:  ಕಬ್ಬಿನ ಬಾಕಿ ಬಿಲ್ ಪಾವತಿಗೆ ಆಗ್ರಹಸಿ ಕಳೆದ ಮೂರು ದಿನಗಳಿಂದ ಬೆಳಗಾವಿಯ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ಉಗ್ರ ಸ್ವರೂಪಕ್ಕೆ ತಿರುಗಿದೆ. ಬೆಳಗಾವಿ ಪೊಲೀಸರು, ಪ್ರತಿಭಟನಾನಿರತ 50ಕ್ಕೂ ಹೆಚ್ಚು ರೈತರನ್ನ ಬಂಧಿಸಿದ್ದಾರೆ. 

"

ಸುವರ್ಣಸೌಧಕ್ಕೆ ತೆರಳಿ ಸಿಎಂಗೆ ರೈತ ಮಹಿಳೆ ಕೊಟ್ಟ ಖಡಕ್ ಎಚ್ಚರಿಕೆ ಇದು!

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಗಲಾಟೆ ಮಾಡುವವರು ರೈತರಲ್ಲ, ಅವರು ಗೂಂಡಾಗಳು. ಯಾರೋ ದರೋಡೆಕೋರನ ಮಾತು ಕೇಳಿ ಬೆಳಗಾವಿ ಸುವರ್ಣ ಸೌಧ ಗೇಟ್ ಹೊಡೆಯೋಕೆ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸರ್ಕಾರವನ್ನ ವಿಶ್ವಾಸಕ್ಕೆ  ತೆಗೆದುಕೊಂಡರೆ ಮೈತ್ರಿ ಸರ್ಕಾರ ರೈತರ ಬೆನ್ನಿಗೆ ನಿಲ್ಲುತ್ತದೆ. ಸರ್ಕಾರದ ಸಂದೇಶಗಳನ್ನ ಪಾಲಿಸಿದರೆ ಎಲ್ಲ ರೀತಿಯ ಬೆಂಬಲ ಸರ್ಕಾರದಿಂದ ಸಿಗುತ್ತದೆ . ರೈತರನ್ನ ಕತ್ತಲಿನಿಂದ ಬೆಳಕಿಗೆ ತರುವುದು ಮೈತ್ರಿ ಸರ್ಕಾರದ ಉದ್ದೇಶ. ಆ ದಾರಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸಚಿವ ಶಿವಶಂಕರ್ ರೆಡ್ಡಿ ಕೆಲಸ ಮಾಡುತ್ತಿದ್ದಾರೆ ಎಂದರು.  

 ನಮ್ಮ ರೈತರು ಸರ್ಕಾರದ ಯೋಜನೆಗಳ ಬಗ್ಗೆ ತಪ್ಪು ಗ್ರಹಿಕೆಗೆ ಕಿವಿಗೊಡಬೇಡಿ. ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗಬೇಡಿ. ರೈತ ಇನ್ನೊಬ್ಬರ ಹತ್ತಿರ ಕೈ ಚಾಚಬಾರದು. ಇನ್ನೊಬ್ಬರಿಗೆ ಹಣ ಕೊಡುವ ಹಾಗೆ ಆಗಬೇಕು ಎಂದು ಸಿಎಂ ರೈತರಿಗೆ ಕಿವಿಮಾತು ಹೇಳಿದರು.

ಗಲಾಟೆ ಮಾಡುವವರು ರೈತರಲ್ಲ, ಅವರು ಗೂಂಡಾಗಳು ಎಂದು ಸಿಎಂ ಹೇಳಿಕೆ ನೀಡಿರುವುದು ಎಷ್ಟು ಸರಿ. ಓರ್ವ ಮುಖ್ಯಮಂತ್ರಿಯಾಗಿ ಈ ರೀತಿ ಹೇಳಿಕೆ ಸಲ್ಲ ಎಂದು ಅಕ್ರೋಶಗಳು ವ್ಯಕ್ತವಾಗುತ್ತಿವೆ.

click me!