ಬಿಗ್‌ಬಾಸ್ ಜಗದೀಶ್ ಮೇಲೆ ಮತ್ತೆ ಹಲ್ಲೆ; ಗಲಾಟೆ ವೇಳೆ ಫೈರಿಂಗ್, ವಕೀಲ್ ಸಾಬ್ ಗನ್‌ಮ್ಯಾನ್‌ಗಳು ಪೊಲೀಸರ ವಶಕ್ಕೆ!

Published : Jan 24, 2025, 10:21 PM ISTUpdated : Jan 24, 2025, 11:37 PM IST
ಬಿಗ್‌ಬಾಸ್ ಜಗದೀಶ್ ಮೇಲೆ ಮತ್ತೆ ಹಲ್ಲೆ; ಗಲಾಟೆ ವೇಳೆ ಫೈರಿಂಗ್, ವಕೀಲ್ ಸಾಬ್ ಗನ್‌ಮ್ಯಾನ್‌ಗಳು ಪೊಲೀಸರ ವಶಕ್ಕೆ!

ಸಾರಾಂಶ

ಬಿಗ್ ಬಾಸ್ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಅವರ ಮೇಲೆ ಬೆಂಗಳೂರಿನಲ್ಲಿ ಮತ್ತೊಮ್ಮೆ ಹಲ್ಲೆ ನಡೆದಿದೆ. ಅಣ್ಣಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ನೂರಾರು ಜನರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಬೆಂಗಳೂರು (ಜ.24): ಬಿಗ್ ಬಾಸ್ ಸ್ಪರ್ಧಿ ಕಂ ವಕೀಲ ಜಗದೀಶ್ ಮೇಲೆ ಮತ್ತೆ ಪುಂಡರು ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ಜಗದೀಶ ನಿವಾಸದ ಬಳಿಯೇ ನಡೆದಿದೆ. ಘಟನೆಯಲ್ಲಿ ವಕೀಲ್ ಜಗದೀಶ ಮೂಗಿಗೆ ಗಂಭೀರ ಗಾಯವಾಗಿದೆ ಅಲ್ಲದೆ ಜಗದೀಶ್ ಪುತ್ರನ ಮೇಲೂ  ಹಲ್ಲೆ ಮಾಡಲಾಗಿದೆ. ಮಗನ ಮುಖ,ಕಿವಿ ಭಾಗದಲ್ಲಿ ಗಾಯಗಳಾಗಿವೆ.

ನಿನ್ನೆಯಷ್ಟೆ ವಕೀಲ ಜಗದೀಶ್ ಮೇಲೆ ಯುವಕನೋರ್ವ ಕುತ್ತಿಗೆ ಹಿಡಿದು ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಯುವಕ ಕಣ್ಣು ಮುಖ ಮೂತಿ ನೋಡದೇ ಪಂಚ್ ಮಾಡಿದ್ದರಿಂದ ಜಗದೀಶ ಕಣ್ಣು ಊದಿಕೊಂಡಿತ್ತು. ಇವತ್ತು ಮತ್ತೆ ಪುಂಡರಿಂದ ಜಗದೀಶ್ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಅಣ್ಣಮ್ಮ ಕೂರಿಸೋ ವಿಚಾರಕ್ಕೆ ಮತ್ತೆ ಗಲಾಟೆಯಾಗಿರುವ ಶಂಕೆ ವ್ಯಕ್ತವಾಗಿದೆ. ನೂರಾರು ಮಂದಿಯಿಂದ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಸದ್ಯ ಕೊಡಗೆಹಳ್ಳಿ ಪೊಲೀಸರು ಜೊತೆ ಜೀಪಿನಲ್ಲಿ ಹೋಗುತ್ತಿರುವಾಗ ಜಗದೀಶ್ ವಿಡಿಯೋದಲ್ಲಿ ಮಾತನಾಡಿದ್ದಾರೆ. ಮೂಗಿನಲ್ಲಿ ರಕ್ತ ಒಸರುತ್ತಿರುವಾಗ, ಲೈವ್ ಮಾಡಿರುವ ಜಗದೀಶ್, 'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ವಕೀಲ ಜಗದೀಶ್ ಪ್ರಶ್ನಿಸಿದ್ದಾರೆ. ಪೊಲೀಸ್ ಜೀಪ್‌ನಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿರುವ ಪೊಲೀಸರು. ಮುಖದ ಮೇಲೆ ರಕ್ತಸುರಿಯುತ್ತಿದೆ. ಎರಡನೇ ಬಾರಿಗೂ ಗಂಭೀರ ಹಲ್ಲೆ ನಡೆದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸೋಷಿಯಲ್ ಮೀಡಿಯಾಲ್ಲಿ ನೆಟ್ಟಿಗರು ಪೊಲೀಸರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿನ್ನೆ ಹೋದ ಜಾಗಕ್ಕೆ ಮತ್ತೆ ಹೋಗಿ ಕಿರಿಕ್, ವಕೀಲ್ ಜಗದೀಶ್ ಮೇಲೆಗೆಇದೇ ಕಾರಣವಾಯ್ತಾ? ನಡೆದಿದ್ದೇನು?

ಜಗದೀಶ್ ಗನ್ ಮ್ಯಾನ್ಗಳು ಪೊಲೀಸರ ವಶಕ್ಕೆ:

ಗಲಾಟೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿರುವ ಲಾಯರ್ ಜಗದೀಶ್‌ ಗನ್‌ಮ್ಯಾನ್‌ಗಳನ್ನ ಕೊಡಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಟೆರರಿಸ್ಟ್‌ಗಳ ರಾಜ್ಯವಾಗಿದೆ: ಜಗದೀಶ್ ಆಕ್ರೋಶ

ನಿನ್ನೆ ಪುಡಿರೌಡಿಗಳು ಹಲ್ಲೆ ಮಾಡಿದ್ದರು. ಇದೀಗ ಮತ್ತೆ ನನ್ನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ರಾಜ್ಯ ಟೆರರಿಸ್ಟ್‌ಗಳು, ಪುಡಿರೌಡಿಗಳ ರಾಜ್ಯವಾಗಿದೆ ಎಂದು ಪೊಲೀಸರು ಬರದಿದ್ದರೆ ಬದುಕುತ್ತಿರಲಿಲ್ಲ. ಪೊಲೀಸರು ಬಂದು ನಮ್ಮ ಕಾಪಾಡಿದರು. ರಾಜ್ಯದಲ್ಲಿ ಎಲ್ಲಿದೆ ನ್ಯಾಯ? ಅನ್ಯಾಯದ ವಿರುದ್ಧ ದನಿ ಎತ್ತುವವರ ಸ್ಥಿತಿ ಏನಾಗಿದೆ ನೋಡಿ  ರಕ್ತಸಿಕ್ತ ಮುಖ ತೋರಿಸಿ ಲಾಯರ್ ಜಗದೀಶ್ ಲೈವ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿದ್ದರಾಮಯ್ಯ ಅವರೇ ಸಿಎಂ ಆಗಿ ಏನು ಮಾಡುತ್ತಿದ್ದೀರಿ?

ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿರುವ ಜಗದೀಶ್, ಅನ್ಯಾಯದ ವಿರುದ್ಧ ದನಿ ಎತ್ತುವವರ ಮೇಲೆ ಹಲ್ಲೆ ನಡೆಯುತ್ತಿದೆ. ಲಾಂಗ್ ಮಚ್ಚು ಹಿಡಿದು ಮನೆಯವರೆಗೂ ಬಂದು ಹಲ್ಲೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಎಲ್ಲಿ ಸ್ವಾಮಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಕೀಲ ಜಗದೀಶ್ ಹರಿಹಾಯ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!