
ರಾಯಚೂರು (ಜ.24): ರಾಜ್ಯದಲ್ಲಿ ದಿನನಿತ್ಯ ಎನ್ನುವಂತೆ ರೋಡ್ ರಾಬರಿ, ಎಟಿಎಂ ರಾಬರಿ ಕೃತ್ಯಗಳು ನಡೆಯುತ್ತಿವೆ. ಸರ್ಕಾರದಾಗಲಿ ಪೊಲೀಸರದಾಗಲಿ ಭಯ ಇದ್ದಂತೆ ಕಳ್ಳಕಾಕರಿಗೆ ಕಾಣುತ್ತಿಲ್ಲ. ನನಗೆ ಜೀವ ಭಯ ಕಾಡುತ್ತಿದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಮುಂದೆ ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಹೇಳಿದ್ದಾರೆ. ಮೂವರು ಅಪರಿಚಿತರಿಂದ ಶಾಸಕಿಗೆ ಜೀವ ಭಯ ಕಾಡುತ್ತಿದೆಯಂತೆ. ದೇವದುರ್ಗ ಪೊಲೀಸ್ ಕಾಲೋನಿಯಲ್ಲಿ ಇರುವ ದೇವದುರ್ಗ ಶಾಸಕಿ ಮನೆಗೆ ಅಪರಿಚಿತರು ನುಗ್ಗಿದ ಬೆನ್ನಲ್ಲಿಯೇ ಶಾಸಕಿಗೆ ಈ ಆತಂಕ ಶುರುವಾಗಿದೆ. ಜನವರಿ 23ರ ಮಧ್ಯರಾತ್ರಿ ಶಾಸಕಿ ಮನೆಗೆ ನುಗ್ಗಿದವರು ಯಾರು ಅನ್ನೋದರ ಬಗ್ಗೆಯೇ ಈಗ ಪ್ರಶ್ನೆ ಎದುರಾಗಿದೆ.
ಘಟನೆ ಬಳಿಕ ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ದೂರು ನೀಡಿದ್ದು, ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪರಿಚಿತರು ಬಂದು ಹೋದ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಬೇಕು. ತನಿಖೆ ಬಳಿಕ ಯಾರು ಎನ್ನುವುದು ಗೊತ್ತಾಗಲಿದೆ. ನಾನು ಅಸಹಾಯಕಳಾಗಿ ಈ ರೀತಿಯಲ್ಲಿ ಮಾತನಾಡುವವಳು ಅಲ್ಲ. ಏನು ಆಗುತ್ತೋ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನಾನು ಶಾಸಕಿಯಾದ ಬಳಿಕ ಇಂತಹ ಹಲವಾರು ಘಟನೆಗಳು ಆಗಿವೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಹೆಚ್ಚು ಕಾಳಜಿ ಇಟ್ಟುಕೊಂಡವಳು. ನಾನು ನನ್ನ ಜೀವಕ್ಕೆ ಭಯಪಡಲ್ಲ. ನನಗೆ ಏನು ಆಗುತ್ತೋ ಏನೋ ನನಗೆ ದೇವರೇ ಇದ್ದಾನೆ. ನನ್ನ ಮನೆಗೆ ಬಂದವರು ಯಾರು ಎಂಬುವುದು ತನಿಖೆ ಆಗಬೇಕು' ಎಂದು ಹೇಳಿದ್ದಾರೆ.
ಸಿಂಧನೂರು ಬಳಿ ಭೀಕರ ಅಪಘಾತ, ಮಂತ್ರಾಲಯ ಮಠದ ಚಾಲಕ ಸೇರಿ ನಾಲ್ವರು ದುರ್ಮರಣ!
ಒಬ್ಬ ಶಾಸಕರಿಗೆ ಈ ಗತಿಯಾದ್ರೆ ಸಾಮಾನ್ಯ ಜನರ ಗತಿಯೇನು? ಜನರ ಚಿಂತೆ ನನಗೆ ಕಾಡುತ್ತಿದೆ. ಆಸ್ಪತ್ರೆಯಲ್ಲಿ ಕಳ್ಳತನ ಆಯ್ತು, ವಾಕಿಂಗ್ ಹೋದ ವ್ಯಕ್ತಿ ಮೇಲೆ ಹಲ್ಲೆ ಆಯ್ತು. ನನಗೆ ನಿಜವಾಗಲೂ ರಕ್ಷಣೆ ಬೇಕಾಗಿದೆ. ಸರ್ಕಾರಿ ಕಾರ್ಯಕ್ರಮಕ್ಕೆ ಹೋಗಬೇಕು .ಪೊಲೀಸ್ ಅಧಿಕಾರಿಗಳು ಭದ್ರತೆ ನೀಡಲು ಮಿನಾಮೇಷ ಎಣಿಸುತ್ತಿದ್ದಾರೆ.. ಪೊಲೀಸರು ರಕ್ಷಣೆ ಕೊಟ್ಟರೇ ನಾನು ನಿರ್ಭಯವಾಗಿ ಓಡಾಡುತ್ತೇನೆ ಎಂದು ಹೇಳಿದ್ದಾರೆ.
ಯಲ್ಲಾಪುರ, ಸಿಂಧನೂರು ಅಪಘಾತದಲ್ಲಿ ಮೃತಪಟ್ಟ 14 ಜನರ ಕುಟುಂಬಕ್ಕೆ ತಲಾ ₹3 ಲಕ್ಷ ಪರಿಹಾರ!
ಆಗಿದ್ದೇನು: ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಅವರ ಮನೆಗೆ ಜನವರಿ 23ರ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಗಳು ನುಗ್ಗಿದ್ದರು.ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಾಸಕಿಯ ಮನೆಯ ಸಮೀಪವೇ ಬೈಕ್ ನಿಲ್ಲಿಸಿದ್ದ ಆಗಂತುಕರು ಹಿಂದಿನ ಬಾಗಿಲಿನಿಂದ ಮನೆಗೆ ಎಂಟ್ರಿಯಾಗುವ ಪ್ರವೇಶ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಕ್ಕಪಕ್ಕದವರು ಕೂಗಿಕೊಂಡಿದ್ದರಿಂದ ಅಪರಿಚಿತರು ಪರಾರಿಯಾಗಿದ್ದಾರೆ. ಅಪರಿಚಿತರು ಯಾಕೆ ನಮ್ಮ ಮನೆಗೆ ನುಗ್ಗಿದ್ದರು ಎಂದು ತನಿಖೆ ನಡೆಸಿ, ಅವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ