ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ, ಕನಕಪುರದ ಫಾರ್ಮ್ ನಲ್ಲಿ ಸಾಕಿದ ನಾಟಿ ಕೋಳಿ ಗಮ್ಮತ್ತು, ಮೆನು ರೆಡಿ!

Published : Dec 01, 2025, 07:21 PM IST
DK Shivakumar Siddaramaiah new

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಗಾಗಿ ಸಿಎಂಗೆ ಇಷ್ಟವಾದ ಕನಕಪುರದ ನಾಟಿ ಕೋಳಿ ಸಾರು ಸೇರಿದಂತೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಾಳೆ ನಡೆಯಲಿರುವ ವಿಶೇಷ ಬ್ರೇಕ್‌ಫಾಸ್ಟ್‌ ಮೀಟಿಂಗ್ ಕುತೂಹಲ ಮೂಡಿಸಿದೆ. ಬ್ಯಾಂಕ್ವೆಟ್ ಹಾಲ್‌ನಲ್ಲಿ ವೇದಿಕೆ ಹತ್ತುವ ವೇಳೆ ಸಿಎಂ ಮತ್ತು ಡಿಸಿಎಂ ನಡುವೆ ಸಂಕ್ಷಿಪ್ತ ಸಂಭಾಷಣೆ ನಡೆಯಿತು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿವಾಸಕ್ಕೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದರು. ಆಹ್ವಾನಕ್ಕೆ ಸಿಎಂ ನಗುಮುಖದಿಂದ ಸಮ್ಮತಿ ಸೂಚಿಸಿದರು. ಏನಯ್ಯ ನಾಳೆ ಏನು ತಿಂಡಿ ಮಾಡಿಸುತ್ತಿದ್ದೀಯಾ ಎಂದು ಸಿಎಂ ಈ ವೇಳೆ ಕೇಳಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ನಿಮಗೆ ಇಷ್ಟವಾದದ್ದನ್ನೇ ಮಾಡಿಸುತ್ತೇನೆ ಎಂದು ಡಿಸಿಎಂ ಡಿಕೆಶಿ ನಕ್ಕರು. ಆಗಲಿ ಎಂದು  ಸಿಎಂ ನಗುಮುಖ ತೋರಿದರು. ಇನ್ನು ಡಿಸಿಎಂ ಡಿಕೆಶಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೌದು ಹೋಗ್ತೀನಿ, ನಾಳೆ 9.30 ಕ್ಕೆ ಹೋಗ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂಗೆ ಇಷ್ಟವಾದ ನಾಟಿ ಕೋಳಿ ಸಾಂಬಾರ್ ಸಿದ್ಧ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆಯ ಬ್ರೇಕ್‌ಫಾಸ್ಟ್‌ಗಾಗಿ ವಿಶೇಷ ಮೆನು ಸಿದ್ಧಪಡಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಸಿಎಂಗೆ ಅತ್ಯಂತ ಇಷ್ಟವಾದ ನಾಟಿ ಕೋಳಿ ಸಾಂಬಾರ್, ಇಡ್ಲಿ, ಮತ್ತು ನಾಟಿ ಕೋಳಿ ಪ್ರೈ ಮೆನುಪಟ್ಟಿಯಲ್ಲಿ ಸೇರಿಸಲ್ಪಟ್ಟಿವೆ.

ಕನಕಪುರದ ನಾಟಿ ಕೋಳಿಗಳು ಮೆನುದ ವಿಶೇಷತೆ

ಡಿಸಿಎಂ ತಮ್ಮ ಕನಕಪುರದ ಫಾರ್ಮ್‌ನಿಂದ ತಂದಿಟ್ಟಿರುವ ನಾಟಿ ಕೋಳಿಗಳನ್ನು ಕನಕಪುರದಿಂದ ತಂದು ಸರ್ಕಾರಿ ಕ್ವಾರ್ಟರ್ಸ್ ಸಾಕಿದ್ದರು. ಅದೇ ಕೋಳಿಗಳಿಂದ ಸಿಎಂಗೆ ವಿಶೇಷವಾಗಿ ಆಹಾರ ತಯಾರಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಇದರಿಂದ ಉಪ ಮುಖ್ಯಮಂತ್ರಿ ತಮ್ಮ ಅತಿಥ್ಯದಲ್ಲಿ ತೋರಿಸುತ್ತಿರುವ ಆತ್ಮೀಯತೆ ಸ್ಪಷ್ಟವಾಗುತ್ತದೆ.

ರಾಜಕೀಯ ಸಂದೇಶವೋ? ಸ್ನೇಹದ ಸಂಕೇತವೋ?

ಈ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಅನ್ನು ಕೇವಲ ಆಹಾರಕ್ಕಾಗಿ ಮಾತ್ರವಲ್ಲ, ರಾಜಕೀಯ ತಂತ್ರ, ಆಡಳಿತದ ಚರ್ಚೆ ಮತ್ತು ಪರಸ್ಪರ ನಂಬಿಕೆಯ ಬಲವರ್ಧನೆಗೆ ವೇದಿಕೆಯಾಗಿ ಕೂಡ ಬಳಸಲಾಗಬಹುದು ಎಂಬ ಊಹಾಪೋಹಗಳು ಸಹಜವಾಗಿವೆ.

ಸದಾನಂದ ಗೌಡ ವ್ಯಂಗ್ಯ

ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ನೀಡಿ, ಜನರನ್ನೆ ಬಲಿಕೊಟ್ಟವರು ಜನರ ಹಿತಾಸಕ್ತಿಯನ್ನೆ ಬಲಿಕೊಟ್ಟವರು. ನಾಳೆ ನಾಲ್ಕು ಕೋಳಿ ಬಲಿ ಕೊಡೋದು ದೊಡ್ಡ ವಿಷಯ ಅಲ್ಲ. ಎಂದು ಡಿಸಿಎಂ ಮನೆಯಲ್ಲಿ ಸಿಎಂ ಡಿನ್ನರ್ ಗೆ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!