ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನ: 70 ಸಾವಿರಕ್ಕೂ ಅಧಿಕ ಜನರ ಸಲಹೆ!

Published : Jul 21, 2023, 05:25 AM IST
ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನ: 70 ಸಾವಿರಕ್ಕೂ ಅಧಿಕ ಜನರ ಸಲಹೆ!

ಸಾರಾಂಶ

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನಕ್ಕೆ ಕಳೆದ ಒಂದು ತಿಂಗಳಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 70 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿದ್ದು, ಗುರುವಾರಕ್ಕೆ ಸಲಹೆ ಮತ್ತು ಅಭಿಪ್ರಾಯ ಪಡೆಯುವ ಪ್ರಕ್ರಿಯೆ ಕೊನೆಗೊಳಿಸಲಾಗಿದೆ.

ಬೆಂಗಳೂರು (ಜು.21) :  ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನಕ್ಕೆ ಕಳೆದ ಒಂದು ತಿಂಗಳಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 70 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿದ್ದು, ಗುರುವಾರಕ್ಕೆ ಸಲಹೆ ಮತ್ತು ಅಭಿಪ್ರಾಯ ಪಡೆಯುವ ಪ್ರಕ್ರಿಯೆ ಕೊನೆಗೊಳಿಸಲಾಗಿದೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಅಭಿಯಾನ ನೇತೃತ್ವ ವಹಿಸಿದ್ದು, ಈಗಾಗಲೇ ಬೆಂಗಳೂರಿನ ನಗರದ ಎಲ್ಲಾ ಪಕ್ಷದ ಶಾಸಕರು, ಸಚಿವರು, ಗಣ್ಯರು ಹಾಗೂ ಉದ್ಯಮಿಗಳ ಸಭೆ ನಡೆಸಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ, ಹಸಿರೀಕರಣ, ರಸ್ತೆ, ಪಾದಚಾರಿ ಮಾರ್ಗ, ಕಸ ವಿಲೇವಾರಿ, ಆಡಳಿತ ಸುಧಾರಣೆ, ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಸಾಕಷ್ಟುಸಲಹೆ ಸೂಚನೆ ಪಡೆದಿದ್ದಾರೆ. ಇದರೊಂದಿಗೆ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ ಆರಂಭಿಸಿ ಜು.20ರ ತಡ ರಾತ್ರಿ 12 ಗಂಟೆ ವರೆಗೆ ಸಲಹೆ ನೀಡುವುದಕ್ಕೆ ಅವಕಾಶ ನೀಡಲಾಗಿತ್ತು.

 

Bengaluru: ಮತ್ತೆ ರಾರಾಜಿಸಲಿವೆ ಜಾಹೀರಾತು ಫಲಕಗಳು: ಬ್ರ್ಯಾಂಡ್‌ ಬೆಂಗಳೂರಿಗೆ ಸಲಹೆ

ಭರಪೂರ ಸಲಹೆ: ಸಂಚಾರಯುಕ್ತ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್‌ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಹೀಗೆ ಒಟ್ಟು ಏಳು ವಿಭಾಗದಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ನಿರ್ಧರಿಸಲಾಗಿದೆ. ಈ ಪ್ರಕಾರ ಜೂ.21ರಿಂದ ಜುಲೈ 20ರ ವರೆಗೆ ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ಗೆ ಬರೋಬ್ಬರಿ 70 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿವೆ.

ಈ ಪೈಕಿ ಪ್ರತಿ ವಿಭಾಗದಲ್ಲಿ 10,300 ರಿಂದ 10,400 ಸಲಹೆ ಬಂದಿವೆ. ಇನ್ನು ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ ಮಾತ್ರವಲ್ಲದೇ ಟೋಲ್‌ ಫ್ರೀ ಸಂಖ್ಯೆ 1533ಕ್ಕೆ 17 ಮುಖ್ಯವಾದ ಸಲಹೆಗಳು ಬಂದಿವೆ.

ಇನ್ನು ವಾಟ್ಸ್‌ ಆಪ್‌ ಸಂಖ್ಯೆ-9480685700ಕ್ಕೆ 1,902 ಸಲಹೆ ಹಾಗೂ ‘ಬ್ರ್ಯಾಂಡ್‌ ಬೆಂಗಳೂರು’ ಮತ್ತು ‘ಬೆಟರ್‌ ಬೆಂಗಳೂರು’ ಟ್ವಿಟರ್‌ನಲ್ಲಿ ಗುರುವಾರ ರಾತ್ರಿ ವರೆಗೆ 56 ಸಲಹೆ ಬಂದಿವೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ ಕ್ಕೆ ಮಾಹಿತಿ ನೀಡಿದ್ದಾರೆ.

ಆ.15ರ ವೇಳೆಗೆ ಬ್ರ್ಯಾಂಡ್‌ ಬೆಂಗಳೂರು ಅಂತಿಮ ವರದಿ

ಈಗಾಗಲೇ ಬಿಬಿಎಂಪಿಯು ಬ್ರ್ಯಾಂಡ್‌ ಬೆಂಗಳೂರಿಗೆ ಸಂಬಂಧಿಸಿದ ಏಳು ಪರಿಕಲ್ಪನೆಗಳಿಗೆ ಅಧಿಕಾರಿಗಳು ಮತ್ತು ತಜ್ಞರ ತಂಡ ರಚನೆ ಮಾಡಲಾಗಿದೆ. ಸಾರ್ವಜನಿಕರಿಂದ ಬಂದಿರುವ ಸಲಹೆ ಮತ್ತು ಅಭಿಪ್ರಾಯಗಳನ್ನು ಪ್ರತ್ಯೇಕ ಮಾಡಿ ಸಂಬಂಧಪಟ್ಟತಂಡಕ್ಕೆ ನೀಡಲಾಗುವುದು. ಆಗಸ್ಟ್‌ ಮೊದಲ ವಾರದಲ್ಲಿ ಈ ಅಭಿಪ್ರಾಯ ಮತ್ತು ಸಲಹೆಗಳನ್ನು ಪರಿಶೀಲನೆ ಮಾಡಿ, ಅಗತ್ಯ ಬಿದ್ದರೆ, ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಅನುಷ್ಠಾನ ಗೊಳಿಸಬಹುದಾದ ಅಂಶಗಳ ಕುರಿತು ವರದಿ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಕೆ ಮಾಡಲಿದ್ದಾರೆ. 

Bengaluru: ಸ್ಟಾರ್ ಲೈಫ್ ಮಿಸ್ ಇಂಡಿಯಾ ವಿಜೇತೆ ನಿಶಾ ನರಸಪ್ಪ, ಈಗ ವಂಚನೆ ಆರೋಪಿ

ಬಿಬಿಎಂಪಿಯು ಏಳು ತಂಡದಿಂದ ವರದಿ ಪಡೆದು ಉಪ ಮುಖ್ಯಮಂತ್ರಿಗಳಿಗೆ (ಸರ್ಕಾರ) ಆಗಸ್ಟ್‌ 15ರ ವೇಳೆಗೆ ಸಲ್ಲಿಕೆ ಮಾಡುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!