ಬ್ರಾಹ್ಮಣರ ವಿರುದ್ಧ ಪಾ. ಮಲ್ಲೇಶ ಹೇಳಿಕೆ: ಕ್ರಮಕ್ಕೆ ಬ್ರಾಹ್ಮಣ ಮಂಡಳಿ ಆಗ್ರಹ

By Govindaraj SFirst Published Nov 17, 2022, 4:41 AM IST
Highlights

ಬ್ರಾಹ್ಮಣ ಸಮುದಾಯ ಹಾಗೂ ಬ್ರಾಹ್ಮಣ್ಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಪಾ.ಮಲ್ಲೇಶ ಎಂಬ ವ್ಯಕ್ತಿಯನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. 

ಬೆಂಗಳೂರು (ನ.17): ಬ್ರಾಹ್ಮಣ ಸಮುದಾಯ ಹಾಗೂ ಬ್ರಾಹ್ಮಣ್ಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಪಾ.ಮಲ್ಲೇಶ ಎಂಬ ವ್ಯಕ್ತಿಯನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. 

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಂಡಳಿಯ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದಮೂರ್ತಿ, ‘ಮೈಸೂರಿನಲ್ಲಿ ನ.15ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅವರ ಬೆಂಬಲಿಗನೆಂದು ಗುರುತಿಸಿಕೊಂಡಿರುವ ಪಾ.ಮಲ್ಲೇಶ ಎಂಬ ವ್ಯಕ್ತಿ ಸಮಾಜದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯವನ್ನು ಯಾರೂ ನಂಬಬಾರದು ಎಂದು ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಅತ್ಯಂತ ಖಂಡನಾರ್ಹ. 

ಕರ್ನಾಟಕದಲ್ಲಿ 6 ಹೊಸ ಟೆಕ್‌ ಸಿಟಿ ನಿರ್ಮಾಣ: ಸಿಎಂ ಬೊಮ್ಮಾಯಿ

ಬ್ರಾಹ್ಮಣರ ಸ್ವಾಭಿಮಾನ ಕೆಳಕುವ, ಸಮಾಜದ ಶಾಂತಿ ಮತ್ತು ಸೌರ್ಹಾರ್ದತೆಯನ್ನು ಹಾಳು ಮಾಡುವ ಈ ಹೇಳಿಕೆಯನ್ನು ಆ ವ್ಯಕ್ತಿ ಕೂಡಲೇ ಹಿಂಪಡೆಯಬೇಕು. ಬ್ರಾಹ್ಮಣ ಸಮುದಾಯ ಮತ್ತು ಸಮಸ್ತ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ಬ್ರಾಹ್ಮಣ ಸಮಾಜ ಸರ್ವ ಜನಾಂಗದ ಹಿತವನ್ನು ಬಯಸುವ ಮತ್ತು ಶಾಂತಿ ಪ್ರಿಯ ಸಮಾಜ. ಇಂತಹ ಸಮಾಜದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಮಲ್ಲೇಶ ಎಂಬ ವ್ಯಕ್ತಿ ಅನಾಗರಿಕತೆ ಪ್ರದರ್ಶಿಸಿದ್ದಾರೆ. ಅಲ್ಲದೆ, ವೇದ ಉಪನಿಷತ್ತುಗಳು ನಮ್ಮ ದೇಶವನ್ನು ಹಾಳು ಮಾಡಿವೆ. 

ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗರು ಹಲವಾರು ಮಠಗಳನ್ನು ಕಟ್ಟಿಕೊಂಡು ಡಿಮಾಂಡ್‌ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿ ಹಿಂದುಗಳ ಶ್ರದ್ಧೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಜತೆಗೆ ಸುಪ್ರೀಂ ಕೋರ್ಚ್‌ ಆರ್ಥಿಕವಾಗಿ ದುರ್ಬಲವರ್ಗದವರಿಗೆ ನೀಡಿರುವ ಶೇ.10ರಷ್ಟು ಮೀಸಲಾತಿಯ ಹಿಂದೆ ಬ್ರಾಹ್ಮಣರ ಕೈವಾಡವಿದೆ ಎಂದು ಹೇಳಿಕೆ ನೀಡಿ ಸರ್ವೋಚ್ಚ ನ್ಯಾಯಾಲಯಕ್ಕೂ ಜಾತಿ ಬಣ್ಣ ಬಳಿದಿದ್ದಾರೆ. ಸರ್ಕಾರ ಇಂತಹ ಸಮಾಜಘಾತಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಹಿಂದೂ ಮಂತ್ರ ಜಪ ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ: ತಿಮ್ಮಾಪೂರ

ಸಿದ್ದು ಕುಮ್ಮಕ್ಕು: ‘ಮಲ್ಲೇಶ ಅವರ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಜಾಣ ಮೌನವಹಿಸಿದ್ದು ಇದನ್ನು ಅಲ್ಲಗಳೆದಿಲ್ಲ. ಈ ಹೇಳಿಕೆ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದಲೇ ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯ ಅವರು ಕೂಡ ಶೇ.10ರಷ್ಟು ಮೀಸಲಾತಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ನಾಯಕರು ವೇದ ಉಪನಿಷತ್ತು, ಮಹಾಭಾರತ, ರಾಮಾಯಣದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಒತ್ತಾಯಿಸಿದ್ದಾರೆ.

click me!