ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತ; ರದ್ದಾಗಿರುವ ಕಾರ್ಡ್‌ಗೂ ರೇಷನ್ ಕೊಡ್ತೀವಿ: ಮುನಿಯಪ್ಪ

By Sathish Kumar KH  |  First Published Nov 21, 2024, 2:50 PM IST

ರಾಜ್ಯದಲ್ಲಿ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗೆ ಬದಲಾಗಿರುವ ಎಲ್ಲ ಕಾರ್ಡ್‌ಗಳನ್ನು ತೆಗೆದುಕೊಂಡು ಹೋದರೂ ಅವರಿಗೆ ಈ ಹಿಂದಿನಂತೆಯೇ ರೇಷನ್ ಕೊಡಲಾಗುವುದು. ಒಂದು ವಾರದಲ್ಲಿ ಈಗಾಗಲೇ ಬದಲಾಗಿರುವ ಎಲ್ಲ ಅರ್ಹರ ರೇಷನ್‌ ಕಾರ್ಡ್‌ಗಳನ್ನು ವಾಪಸ್ ಕೊಡಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.


ಬೆಂಗಳೂರು (ನ.21): ರಾಜ್ಯದಲ್ಲಿ ಈವರೆಗ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗೆ ಬದಲಾಗಿರುವ ಎಲ್ಲ ಕಾರ್ಡ್‌ಗಳನ್ನು ಕಾರ್ಡ್‌ಗಳನ್ನು ತೆಗೆದುಕೊಂಡು ಹೋದರೂ ಅವರಿಗೆ ಈ ಹಿಂದಿನಂತೆಯೇ ರೇಷನ್ ಕೊಡಲಾಗುವುದು. ಇನ್ನು ಒಂದು ವಾರದಲ್ಲಿ ಈಗಾಗಲೇ ಬದಲಾಗಿರುವ ಎಲ್ಲ ಅರ್ಹರ ರೇಷನ್‌ ಕಾರ್ಡ್‌ಗಳನ್ನು ವಾಪಸ್ ಕೊಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 4,366 ಸರ್ಕಾರಿ ಉದ್ಯೋಗಿಗಳ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. 98,473 ಐಟಿ ರಿಟರ್ನ್​​ ಪಾವತಿದಾರರ ಬಳಿ BPL ಕಾರ್ಡ್‌ ಇವೆ. ಒಟ್ಟು 1,2,509 ಅನರ್ಹ BPL ಕಾರ್ಡ್‌ಗಳಿವೆ. ಅದರಲ್ಲಿ ರಾಜ್ಯಾದ್ಯಂತ 8,647 ಬಿಪಿಎಲ್ ಕಾರ್ಡ್‌ ರದ್ದು ಮಾಡಲಾಗಿದೆ. ಇದರಲ್ಲಿ ಬಡವರ ಕಾರ್ಡ್ ರದ್ದು ಆಗಿದ್ದರೆ ಒಂದು ವಾರದಲ್ಲಿ ವಾಪಸ್ ಹಳೆಯ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು. 

Tap to resize

Latest Videos

undefined

ಅಂದರೆ ಒಟ್ಟಾರೆ ರಾಜ್ಯದಲ್ಲಿ ಶೇ.66ರಷ್ಟು ಬಿಪಿಎಲ್​ ಕಾರ್ಡ್‌ಗಳಿವೆ. ಸರ್ಕಾರಿ ನೌಕರರನ್ನು ಪರಿಶೀಲಿಸಿ ಎಪಿಎಲ್‌ಗೆ ಪರಿಷ್ಕರಣೆ ಮಾಡಲಾಗಿದೆ. ಆದಾಯ ತೆರಿಗೆದಾರರ ಮಾಹಿತಿ ಪಡೆದು ಕಾರ್ಡ್​ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ಮಾನದಂಡಗಳ ಅನ್ವಯ ಪರಿಶೀಲಿಸಿ ಪರಿಷ್ಕರಣೆ ಮಾಡಲಾಗುತ್ತದೆ. ಸರ್ಕಾರಿ, ಅರೆ ಸರ್ಕಾರಿ ನೌಕರರ 4,036 ಕಾರ್ಡ್​​ ಅನರ್ಹ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವ 98,473 ಜನರ ಕಾರ್ಡ್​ ರದ್ದುಗೊಳಿಸಲಾಗುದೆ. ಇದೀಗ 1,02,509 ಕಾರ್ಡ್‌ಗಳನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ 12,80,540 ಬಿಪಿಎಲ್ ಕಾರ್ಡ್ ಕೊಟ್ಟಿದೆ, ಯಾವುದನ್ನೂ ರದ್ದು ಮಾಡಿಲ್ಲ; ವಕ್ತಾರ ಎಂ. ಲಕ್ಷ್ಮಣ್!

ಇದರಲ್ಲಿ ಬಡವರ BPL ಕಾರ್ಡ್ ರದ್ದಾಗಿದ್ದರೂ ಅಕ್ಕಿ ಕೊಡುತ್ತೇವೆ. ರದ್ದಾಗಿರುವ ಎಲ್ಲ ಕಾರ್ಡ್‌ಗಳ ವಾಪಸ್ ಪಡೆಯುತ್ತೇವೆ. ಮುಂದಿನ 7 ದಿನಗಳಲ್ಲಿ ಬಿಪಿಎಲ್ ಕಾರ್ಡ್‌ ಸಮಸ್ಯೆ ಬಗೆಹರಿಸುತ್ತೇವೆ. ಈಗಾಗಲೇ ರದ್ದಾದ ಕಾರ್ಡ್ ತೆಗೆದುಕೊಂಡು ಹೋದರೂ ಅಕ್ಕಿ ಕೊಡಲು ಪಡಿತರ ಸರಬರಾಜುದಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಾರು ಅನರ್ಹರು ಎಂಬುದನ್ನು ರಾಜ್ಯಾದ್ಯಂತ ಮನೆ ಮನೆಗೆ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ಮಾಡಿಸಿದ ನಂತರವೇ ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಸಚಿವ ಕೆ.ಎಚ್ ಮುನಿಯಪ್ಪ ಮಾಹಿತಿ ನೀಡಿದರು.

ಸುವರ್ಣನ್ಯೂಸ್ ನಿರಂತರ ವರದಿ ಬಳಿಕ ಎಚ್ಚೆತ್ತ ಸರ್ಕಾರ: ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ಗಳನ್ನು ಏಕಾಏಕಿ ರದ್ದುಗೊಳಿಸಿ ಎಪಿಎಲ್‌ ಕಾರ್ಡ್ ನೀಡಿದ್ದರಿಂದ ಇದರಲ್ಲಿ ಅರ್ಹ ಬಡವರಿಗೆ ಭಾರೀ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ನಿರಂತರವಾಗಿ ವರದಿ ಮಾಡಲಾಗಿತ್ತು. ಸುವರ್ಣನ್ಯೂಸ್ ವರದಿಯ ಬೆನ್ನಲ್ಲಿಯೇ ಎಚ್ಚೆತ್ತ ಸರ್ಕಾರ ಬಿಪಿಎಲ್ ಕಾರ್ಡ್‌ ಪರಿಷ್ಕರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇಂದ್ರದ ನಿರ್ದೇಶನದಂತೆ ಅನರ್ಹ ಕಾರ್ಡ್‌ಗಳ ಪತ್ತೆ ಮಾಡಲು ಮುಂದಾಗಿದೆ. ಅನರ್ಹ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರ, ಆದಾಯ ತೆರಿಗೆ ಪಾವತಿದಾರರ ಬಿಪಿಎಲ್‌ ಕಾರ್ಡಷ್ಟೇ ರದ್ದು: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಡ್ ರದ್ದು ಮಾಡಲಾಗ್ತಿದೆ. ಇದಕ್ಕೆ ಬಿಜೆಪಿ ಅವರು ಉತ್ತರ ಕೊಡಲಿ. ಬಿಜೆಪಿ ರಾಜಕೀಯ ಮಾಡ್ತಿದ್ದಾರೆ. ಕಾರ್ಡ್ ರದ್ದಾಗಿದ್ದರೂ ಆ ಕಾರ್ಡ್ ತಂದರೆ ಅಕ್ಕಿ ಕೊಡಬೇಕು. ಎಲ್ಲಾ ಪಡಿತರ ವಿತರಕರಿಗೆ ಮುನಿಯಪ್ಪ ಸೂಚನೆ ಕೊಡಲಾಗಿದೆ. ಈ ಎಲ್ಲಾ ಗೊಂದಲ ಬಗೆಹರಿದ ಮೇಲೆ ಹೊಸದಾಗಿ ಅರ್ಜಿ ಹಾಕಿದರವರಿಗೂ ಬಿಪಿಎಲ್ ಕಾರ್ಡ್ ನೀಡುತ್ತೇವೆ ಎಂದು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದರು.

click me!