ಕೃಷಿಹೊಂಡದಲ್ಲಿ ಮುಳುಗಿ ಬಾಲಕ ಸಾವು: 1.2 ಲಕ್ಷಕ್ಕೆ ಕೇಸ್ ಕ್ಲೋಸ್‌ಗೆ ಒಪ್ಪಿದ ಪೋಷಕರು! ಮದ್ಯಪ್ರವೇಶಿಸಿದ ಹೈಕೋರ್ಟ್ ಮಹತ್ವದ ತೀರ್ಪು!

Kannadaprabha News   | Kannada Prabha
Published : Aug 25, 2026, 04:27 AM IST
Boy Drowns in Farm Pond Parents Accept Rs 1 2 Lakh Settlement Karnataka HC Orders Rs 10 Lakh Compensation

ಸಾರಾಂಶ

ಕೃಷಿಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಜಮೀನು ಮಾಲೀಕರು 1.2 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದ್ದರು. ಆದರೆ, ಮಧ್ಯಪ್ರವೇಶಿಸಿದ ಹೈಕೋರ್ಟ್‌, ಬಾಲಕನ ಜೀವಕ್ಕೆ ಕಡಿಮೆ ಮೊತ್ತ ನಿರ್ಣಯಿಸಲಾಗದು ಎಂದು ಹೇಳಿ, ಪರಿಹಾರದ ಮೊತ್ತವನ್ನು 10 ಲಕ್ಷ ರೂ.ಗೆ ಹೆಚ್ಚಿಸಿ ಮಾನವೀಯತೆ ಮೆರೆದಿದೆ.

ಬಾಲಕನ ಜೀವಕ್ಕೆ 1.2 ಲಕ್ಷ ರು.ಪರಿಹಾರವಲ್ಲ: ಹೈಕೋರ್ಟ್

ವೆಂಕಟೇಶ್ ಕಲಿಪಿ

ಬೆಂಗಳೂರು (ಆ.25): ಕೃಷಿಹೊಂಡದಲ್ಲಿ ಈಜುಲು ಹೋಗಿ ಬಾಲಕನೋರ್ವ ಸಾವನ್ನಪ್ಪಿದ ದುರ್ಘಟನೆಯ ಹಿನ್ನೆಲೆಯಲ್ಲಿ ಮೃತನ ಕುಟುಂಬಕ್ಕೆ ಹೊಂಡವಿದ್ದ ಜಮೀನಿನ ಮಾಲೀಕರಿಂದ 10 ಲಕ್ಷ ರು. ಪರಿಹಾರ ಕಲ್ಪಿಸಿ ಹೈಕೋರ್ಟ್‌ ಮಾನವೀಯತೆ ಮರೆದಿದೆ.

1.2 ಲಕ್ಷ ರೂಪಾಯಿಗೆ ಪ್ರಕರಣ ಇತ್ಯರ್ಥಕ್ಕೆ ಮುಂದಾಗಿದ್ದ ಪೋಷಕರು!

ವಿಶೇಷವೆಂದರೆ ಮೃತನ ಪೋಷಕರು ಮತ್ತು ಜಮೀನಿನ ಮಾಲೀಕರು ಕೇವಲ 1.2 ಲಕ್ಷ ರು.ಗೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಹೈಕೋರ್ಟ್‌ ಮಧ್ಯಪ್ರವೇಶಿಸಿ, ಬಾಲಕನ ಜೀವವನ್ನು ಕಡಿಮೆ ಮೊತ್ತಕ್ಕೆ ನಿರ್ಣಯಿಸಲಾಗದು ಎಂಬ ಅಭಿಪ್ರಾಯಕ್ಕೆ ಬಂದಿತ್ತು. ಮುಖ್ಯವಾಗಿ ಮೃತ ಬಾಲಕನ ಪೋಷಕರು ಬಡವರಾಗಿದ್ದು, ಅವರಿಗೆ ಮತ್ತೋರ್ವ ಪುತ್ರನಿದ್ದಾನೆ. ಆತನ ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು 10 ಲಕ್ಷ ರು.ಗೆ ಪ್ರಕರಣವನ್ನು ಇತ್ಯರ್ಥಪಡಿಸಿದೆ.

ನಿರ್ಲಕ್ಷ್ಯತನದಿಂದ ಬಾಲಕನ ಸಾವಿಗೆ ಕಾರಣವಾದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೃಷಿಹೊಂಡದ ಜಮೀನಿನ ಮಾಲೀಕರಾದ ವಿಜಯಲಕ್ಷ್ಮೀ, ಆ ಜಮೀನನಲ್ಲಿ ನಡೆಯತ್ತಿರುವ ಪಾವಗಡದ ವೀರಮ್ಮನಹಳ್ಲಿ ಗೇಟ್‌ ಸಮೀಪದ ಹಸಿರು ಕ್ರಾಂತಿ ಸ್ಪೋರ್ಟ್ಸ್‌ ಮತ್ತು ರಿಕ್ರಿಯೇಷನ್‌ ಕ್ಲಬ್‌ ಅಧ್ಯಕ್ಷ ಜಿ.ಎ. ವೆಂಕಟೇಶ್‌ ಹಾಗೂ ಮೇಲ್ವಿಚಾರಕ ಡಿ.ವಲ್ಯಾ ನಾಯ್ಕ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

1.2 ಲಕ್ಷದಿಂದ 10 ಲಕ್ಷಕ್ಕೆ ಪರಿಹಾರ ಏರಿಕೆ

13 ವರ್ಷದ ಬಾಲಕ ತಾಹೀರ್‌ ಸಾವನ್ನಪ್ಪಿರುವುದಕ್ಕೆ ಪ್ರಕರಣ ಸಂಬಂಧಿಸಿದೆ. ಬಾಲಕ ಈಜುಕೊಳದಲ್ಲಿ ಸಾವನ್ನಪ್ಪಿಲ್ಲ. ಬದಲಾಗಿ ಕೃಷಿ ಚುವುಟಿಕೆಗೆ ನೀರು ಸಂಗ್ರಹಿಸಲು ತೋಡಲಾಗಿದ್ದ ಹೊಂಡದಲ್ಲಿದ್ದ ನೀರಿನಲ್ಲಿ ಮುಳುಗಿ ಉಸಿರಾಡಲಾಗದೆ ಸಾವನ್ನಪ್ಪಿದ್ದಾನೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದತಿಗೆ ಅರ್ಜಿದಾರರು ಕೋರಿದ್ದಾರೆ. ಆರಂಭದಲ್ಲಿ ಅರ್ಜಿದಾರರು ಮೃತ ಬಾಲಕನ ತಾಯಿಗೆ 1.2 ಲಕ್ಷ ರು. ನೀಡಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದರು. ಆ ಮೊತ್ತಕ್ಕೆ ನ್ಯಾಯಾಲಯ ಒಪ್ಪಲಿಲ್ಲ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ನಂತರ 7 ಲಕ್ಷ ರು. ನೀಡಲು ಅರ್ಜಿದಾರರು ಮುಂದೆ ಬಂದರು. ಆ ಕಡಿಮೆ ಮೊತ್ತಕ್ಕೆ ಬಾಲಕನ ಜೀವವನ್ನು ನಿರ್ಣಯಿಸಲಾಗುವುದಿಲ್ಲ ಎಂದೇಳಿ 7 ಲಕ್ಷ ಹಣಕ್ಕೂ ಪ್ರಕರಣ ಇತ್ಯರ್ಥಪಡಿಸಲು ನ್ಯಾಯಾಲಯ ಒಪ್ಪಲಿಲ್ಲ. ಬಳಿಕ ಪರಿಹಾರ ಹಣದ ಮೊತ್ತವನ್ನು ಪರಸ್ಪರ ಸಮಾಲೋಚನೆ ಮೂಲಕ ನಿರ್ಧರಿಸಬೇಕು. ಆ ಮೊತ್ತವನ್ನು ಬ್ಯಾಂಕ್‌ನಲ್ಲಿ ನಿಶ್ವಿತ ಠೇವಣಿಯಲ್ಲಿಟ್ಟು ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಈ ಹಿಂದೆ ನಿರ್ದೇಶಿಸಲಾಗಿತ್ತು. ಅದರಂತೆ ಇದೀಗ ದೂರುದಾರರಿಗೆ 10 ಲಕ್ಷ ರು. ನೀಡಲು ಅರ್ಜಿದಾರರು ಒಪ್ಪಿದ್ದಾರೆ. ಆ ಹಣ ಸ್ವೀಕರಿಸಲು ದೂರುದಾರರು ಸಹ ಒಪ್ಪಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಂತಿಮವಾಗಿ 10 ಲಕ್ಷ ಹಣವನ್ನು ಮೃತನ ಬಾಲಕನ ತಾಯಿ ಹೆಸರಿನಲ್ಲಿ ನಿಶ್ವಿತ ಠೇವಣಿ ರೂಪದಲ್ಲಿ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ. ಆ ಕುರಿತ ದಾಖಲೆ ಸಲ್ಲಿಸುವ ಮೂಲಕ ಅನಿರ್ದೇರ್ಜಿದಾರರು ನ್ಯಾಯಾಲಯದ ಶನ ಪಾಲಿಸಿದ್ದಾರೆ. ಇದರಿಂದ ನಿಶ್ವಿತ ಠೇವಣಿಯಿಂದ ಬರುವ ಬಡ್ಡಿಯನ್ನು ಪ್ರತಿ ತಿಂಗಳು ಮೃತ ಬಾಲಕನ ತಾಯಿ ಬ್ಯಾಂಕಿನಿಂದ ಡ್ರಾ ಮಾಡಬಹುದು. ನಂತರ 5 ವರ್ಷಗಳ ನಂತರ ಆಕೆ ಬಯಸಿದಾಂತೆ ಖಾತೆಯನ್ನು ಪರಿವರ್ತಿಸಬಹುದು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್‌ ರದ್ದುಪಡಿಸಿದೆ.

ಪ್ರಕರಣವೇನು?

ಪಾವಗಡ ಪೊಲೀಸ್‌ ಠಾಣೆಗೆ 2026ರ ಮೇ 9ರಂದು ನೂರಿ ಎಂಬಾಕೆ ದೂರು ನೀಡಿದ್ದರು. ನನ್ನ ಗಂಡ ರಿಜ್ವಾನ್‌, ಹಿರಿಯ ಪುತ್ರ ತಾಹಿರ್‌ (13) ಮತ್ತು ಕಿರಿಯ ಪುತ್ರ ಸಾದಿಕ್‌ (10) ಮೇ 9ರಂದು ಮಧ್ಯಾಹ್ನ 2.15ಕ್ಕೆ ಹಸಿರು ಕ್ರಾಂತಿ ಸ್ಪೋರ್ಟ್ಸ್‌ ಮತ್ತು ರಿಕ್ರಿಯೇಷನ್‌ ಕ್ಲಬ್ ಆವರಣದ ಈಜುಕೊಳದಲ್ಲಿ (ವಿಚಾರಣೆ ವೇಳೆ ಕೃಷಿಹೊಂಡವೆಂದು ನ್ಯಾಯಾಲಯಕ್ಕೆ ತಿಳಿಸಲಾಯಿತು) ಈಜಾಡಲೆಂದು ಹೋಗಿದ್ದರು. ಈ ವೇಳೆ ಪುತ್ರ ತಾಹೀರ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕ್ಲಬ್‌ ಜಾಗದ ಉಸ್ತುವಾರಿ ವಲ್ಯಾ ನಾಯ್ಕ, ನನ್ನ ಗಂಡ ಹಾಗೂ ಪುತ್ರನಿಂದ 300 ರು. ಸ್ವೀಕರಿಸಿ, ಈಜುಕೊಳದಲ್ಲಿ ಈಜಾಡಲು ಬಿಟ್ಟಿದ್ದಾರೆ. ಆದರೆ, ಜೀವ ರಕ್ಷಕ ಉಪಕರಣ ನೀಡಿಲ್ಲ. ತರಬೇತುದಾರರನ್ನು ಸ್ಥಳದಲ್ಲಿ ನೇಮಿಸಿಲ್ಲ. ಈ ನಿರ್ಲಕ್ಷ್ಯ ವಹಿಸಿದ್ದರಿಂದ ಪುತ್ರ ಸಾವನ್ನಪ್ಪಿದ್ದಾನೆ ಎಂದು ನೂರಿ ಆರೋಪಿಸಿದ್ದರು. ಅದನ್ನು ಆಧರಿಸಿ, ಬಿಎನ್‌ಎಸ್‌ 106(1) ಅಡಿಯಲ್ಲಿ ನಿರ್ಲಕ್ಷ್ಯ ಅಥವಾ ಅವಘಡದಿಂದ (ಅಪಘಾತದಿಂದ) ಬೇರೆಯವರ ಸಾವಿಗೆ ಕಾರಣವಾಗುವ ಅಪರಾಧದಡಿ ಅರ್ಜಿದಾರರ ವಿರುದ್ಧ ಪಾವಗಡ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈದ್ ಮಿಲಾದ್ ಹಬ್ಬದ ರಜೆಯಲ್ಲಿ ದಿಢೀರ್ ಬದಲಾವಣೆ: ಕರಾವಳಿ ಜಿಲ್ಲೆಗಳಿಗೆ ನಾಳೆಯೇ ಸರ್ಕಾರಿ ರಜೆ!
Onion Price: ಗ್ರಾಹಕರಿಗೆ ರಿಲೀಫ್‌, ಆದರೆ ಈರುಳ್ಳಿ ಬೆಳೆದ ರೈತನಿಗೆ ಆತಂಕ? ಆಡಳಿತದ ಹೊಸ ಪ್ಲಾನ್‌ ಅನ್ನದಾತನಿಗೆ ತಂದಿಡ್ತಾ ಸಂಕಷ್ಟ!