'ಬಾಂಬೆ ರಿಟರ್ನ್ ಡೇಸ್ ಸೆನ್ಸ್‌ಲೆಸ್‌ ಪಾಲಿ ಟ್ರಿಕ್ಸ್‌' ಪುಸ್ತಕ ಬಿಡುಗಡೆ: ರಾಜಕಾರಣಿಗಳ ಸೆಕ್ಸ್ ಕೂಡ ಇದೆ

By Sathish Kumar KHFirst Published Mar 15, 2023, 7:53 PM IST
Highlights

ಸಮ್ಮಿಶ್ರ ಸರ್ಕಾರ ಪತನ, ಹೊಸ ಸರ್ಕಾರ ರಚನೆ, ಬಾಂಬೆಗೆ ತೆರಳಿದ ವಿಚಾರಗಳನ್ನು ಒಳಗೊಂಡಿರುವ 'ಬಾಂಬೆ ರಿಟರ್ನ್ ಡೇಸ್ -  ಸೆನ್ಸ್ ಲೆಸ್ ಪಾಲಿಟ್ರಿಕ್ಸ್' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರು (ಮಾ.15): ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುಕ್ಕೆ ಕಾರಣವಾದ ಅತೃಪ್ತ ಶಾಸಕರ ಘಟನಾವಳಿಗಳು ಸೇರಿದಂತೆ, ರಾಜ್ಯ ರಾಜಕಾರಣದಲ್ಲಿ ನಡೆದ ಅನೇಕ ಘಟನೆಗಳು ಹಾಗೂ ಇತರೆ ವಿಚಾರಗಳನ್ನು ಒಳಗೊಂಡಿರುವ 'ಬಾಂಬೆ ರಿಟರ್ನ್ ಡೇಸ್ -  ಸೆನ್ಸ್ ಲೆಸ್ ಪಾಲಿಟ್ರಿಕ್ಸ್' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಒಳಗೊಂಡಂತೆ ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಅವರು ಬರೆದ ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರ ಪತನ, ಹೊಸ ಸರ್ಕಾರ ರಚನೆ, ಬಾಂಬೆಗೆ ತೆರಳಿದ ಘಟನಾವಳಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಅವರು ಬರೆದ ಈ ಪುಸ್ತಕವನ್ನು ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಹಿರಿಯ ವಕೀಲ ಹೆಚ್ ಹನುಮಂತರಾಯಪ್ಪ ಅವರು ಲೋಕಾರ್ಪಣೆ ಮಾಡಿದರು. ಈ ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಜಯಪ್ರಕಾಶ್ ನಾರಾಯಣ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವನಾಂದ ತಗಡೂರು ಮತ್ತು ಹಿರಿಯ ವಕೀಲ ಶ್ರೀನಿವಾಸ ಬಾಬು ಉಪಸ್ಥಿತರಿದ್ದರು.

Latest Videos

suvarna special: ಗೌಡರ ಕುಟುಂಬ Vs ಡಿಕೆಶಿ ಜಿದ್ದಾಜಿದ್ದಿ ಹಿಂದಿದೆ ರೋಚಕ ಚರಿತ್ರೆ..!

ಪುಸ್ತಕ ಬರೆದಾಗ ಹಲ್ಲೆ ಮಾಡಲು ಹುಡುಕಿದ್ದಾರೆ: ಪುಸ್ತಕದ ಕುರಿತು ಮಾತನಾಡಿದ ಲೇಖಕ ವೀರಭದ್ರಪ್ಪ ಬಿಸ್ಲಳ್ಳಿ ಅವರು, ಈ ಪುಸ್ತಕ ಬರೆದಾಗ ನನ್ನ ಊರು ಯಾವುದು? ನಾನ್ ಯಾರು ಅಂತೆಲ್ಲ ಹುಡಕಿದ್ದಾರೆ. ಎಲೆಕ್ಷನ್ ಬರ್ತಿರೋದಕ್ಕೆ ಪುಸ್ತಕ ಬರೆದಿದ್ದಾರೆ ಅಂತೆಲ್ಲ ಹೇಳ್ತಿದ್ದರು. ಆದರೆ ಎಲೆಕ್ಷನ್ ಬರಲಿಲ್ಲವೆಂದರೂ ಈ ಪುಸ್ತಕ ಬರೆಯುತ್ತಿದ್ದೆ. ಇತ್ತಿಚೀನ ರಾಜಕಾರಣದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಇಲ್ಲಿ ಯಾರನ್ನೂ ವಯಕ್ತಿಕವಾಗಿ ತೇಜವೋಧೆ ಮಾಡಿಲ್ಲ. ಯಾರ ಹೆಸರನ್ನೂ ನಾನು ಪ್ರಸ್ತಾಪ ಮಾಡಿಲ್ಲ. ಸತ್ಯ ಘಟನೆಗಳನ್ನ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಕೆಲವರಿಗೆ ಬೆಸರವಾದ್ರೆ ನಾನು ಏನು ಮಾಡೋಕೆ ಆಗಲ್ಲ. ಮುಂದೊಂದು ದಿನ ಕರ್ನಾಟಕ ಸರ್ಕಾರ ರಚನೆಯಗಲೂ ಬೇರೆ ದೇಶಕ್ಕೆ ಹೋಗಿ ಬರ್ತಿರಾ? ವಿಧಾನಸೌಧದ ಔಚಿತ್ಯವೆನಾದೀತು. ಕೆಲವು ವೈಯಕ್ತಿಕ ಅನಿಸಿಕಗಳನ್ನ ಸಹ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.

ರೆಸಾರ್ಟ್‌ ರಾಜಕಾರಣದ ಬಗ್ಗೆ ಪೂರ್ಣ ಮಾಹಿತಿ: ನಾವು ಒಂದು ವಾರದ ಹಿಂದೆ ಪುಸ್ತಕ ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆವು. ದುರುದ್ದೇಶದಿಂದ ಪುಸ್ತಕ ಬರೆದಿದ್ದೇನೆ ಎಂದು ಅನೇಕರು ಹೀಗಳಿದರು. ನನ್ನ ಬಗ್ಗೆ, ನನ್ನ ಹಿನ್ನೆಲೆಯ ಬಗ್ಗೆ ಎಲ್ಲಾ ಅನೇಕರು ಹುಡುಕಿದರು. ಇದು ನನಗೂ ಸೋಜಿಗ ಅನಿಸುತ್ತದೆ. ರಾಜ್ಯ ರಾಜಕೀಯದಲ್ಲಿ ನಡೆದ ಅತಿದೊಡ್ಡ ಪ್ರಹಸನದ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದೇನೆ. ರಾಜ್ಯ ರಾಜಕಾರಣದಲ್ಲಿ ನಡೆದ ಪ್ರಹಸನ ಅದು. ಮುಂದವರೆದು ರೆಸಾರ್ಟ್ ಮತ್ತು ಮಹಾರಾಷ್ಟ್ರದಲ್ಲಿ ನಡೀತು. ಕೆಂಗಲ್ ಹನುಮಂತಯ್ಯನವರು ಕಟ್ಟಿದ ವಿಧಾನಸೌಧದ ಸ್ಥಾನವೇನು..? ಎಂದು ಪ್ರಶ್ನೆ ಮಾಡಿದರು.

ನಿಮ್ಮ..ನಿಮ್ಮ ಶಾಸಕರು ಯಾವ ರೆಸಾರ್ಟ್‌ನಲ್ಲಿದ್ದಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ

ದರಿದ್ರ ರಾಜಕಾರಣಿಗಳ ಸೆಕ್ಸ್‌ ಸಹ ಇದೆ: ಹಿರಿಯ ವಕೀಲ ಹೆಚ್ ಹನುಮಂತರಾಯಪ್ಪ ಮಾತನಾಡಿ, ಪುಸ್ತಕದಲ್ಲಿ ಜೆ.ಹೆಚ್. ಪಾಟೀಲರದ್ದು ಕೋಟ್ ಮಾಡಿರೋದು ನನಗೆ ತುಂಬಾ ಇಷ್ಟವಾಯ್ತು. ವ್ಯವಸ್ಥೆಗೆ ಪೆಟ್ಟು ಕೊಡೋದು ಬೇಡ ಒಂದು ಸಾರಿ ಸೋತರೇನು ಅಂತ ಹೇಳಿದ್ದು ಕೋಟ್ ಮಾಡಲಾಗಿದೆ. ಈ ಪುಸ್ತಕದಲ್ಲಿ ಪ್ರಸ್ತಾಪ ಮಾಡಿರೋ ಘಟನಾವಳಿಗಳು ನಡೆಯಬಾರದು ಇದು ಹೀಗೆ ಮುಂದುವರಿದರೆ ಮಾರಕ. ತುಂಬಾ ಧೈರ್ಯ ಮಾಡಿ ಕೆಲ ಘಟನಾವಳಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ದರಿದ್ರ ರಾಜಕಾರಣದ ದರಿದ್ರ ರಾಜಕಾರಣಿಗಳು ಯಾವ ಕೀಳು ಮಟ್ಟಕ್ಕೆ ಹೋಗ್ತಾರೆ ಅನ್ನೋದನ್ನ ಚನ್ನಾಗಿ ವರ್ಣಿಸಿದ್ದಾರೆ. ಈ ಪುಸ್ತಕದಲ್ಲಿ ಸೆಕ್ಸ್ ಸಹ ಇದೆ, ಅದರೆ ಚೀ ಅಸಯ್ಯ ಅನ್ನಿಸೋದಿಲ್ಲ ಎಂದು ಹೇಳಿದರು.

click me!