ಮಂಗಳೂರು ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯ ಪ್ರಕ್ರಿಯೆ!

By Suvarna News  |  First Published Jan 20, 2020, 4:27 PM IST

ಬಾಂಬ್ ನಿಷ್ಕ್ರಿಯ ಮಾಡುತ್ತಿರುವ ಗಂಗಯ್ಯ| ಸ್ಕ್ಯಾನರ್ನ ತರಂಗಾಂತರದಿಂದ ಡಿಟೋನೇಟರ್, ಬ್ಯಾಟರಿ ಯೂನಿಟ್ ಸಂಪರ್ಕವಾಗದಂತೆ ಮುನ್ನಚ್ಚರಿಕೆ| ಡಿಟೋನೇಟರ್, ಬ್ಯಾಟರಿ ಯೂನಿಟ್ ಸಂಪರ್ಕ ಕಡಿತಗೊಳಿಸಲಾಗುತ್ತದೆ| ವೈಯರ್ ಕಟ್ ಮಾಡಿದ ತಕ್ಷಣ ಬಾಂಬ್ ನಿಷ್ಕ್ರಿಯಗೊಳ್ಳುತ್ತದೆ| 4 ಇಂಚು ದಪ್ಪದ ಕಬ್ಬಿಣದ ಕಂಟೇನರ್ನಲ್ಲಿ ಸುರಕ್ಷಿತ ಜಾಗಕ್ಕೆ ಬಾಂಬ್ ಸ್ಥಳಾಂತರ


ಮಂಗಳೂರು[ಜ.20]: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬನ್ನು ಸದ್ಯ ಕೆಂಜಾರು ಮೈದಾನಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಇಲ್ಲಿ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. 

"

Tap to resize

Latest Videos

ಮಂಗಳೂರಿನಲ್ಲಿ ಸ್ಫೋಟಕ: ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಅಪಾಯಕಾರಿ!

ಹೌದು ಸೋಮವಾರ ಬೆಳಗ್ಗೆ 10 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಜೀವಂತ ಬಾಂಬ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಲಭಿಸುತ್ತಿದ್ದಂತೆಯೇ ಅಲರ್ಟ್ ಆದ ಮಂಗಲೂರು ಪೊಲೀಸರು ಕೂಡಲೇ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದರು. ಬಳಿಕ ವಾಹನವೊಂದರ ಮೂಲಕ ಇದನ್ನು ನಿಲ್ದಾಣದಿಂದ ಕೇವಲ 2 ಕಿ. ಮೀ ದೂರದಲ್ಲಿರುವ ಕೆಂಜಾರು ಮೈದಾನಕ್ಕೆ ಶಿಫ್ಟ್ ಮಾಡಿದ್ದ ಬಾಂಬ್ ನಿಷ್ಕ್ರಿಯದಳ ಮುಂದಿನ ಕಾರ್ಯಾಚರಣೆ ನಡೆಸುತ್ತಿದೆ.

ಮಂಗಳೂರು ಏರ್ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆ!

ಬಾಂಬ್ ನಿಷ್ಕ್ರಿಯದಳದ ಗಂಗಯ್ಯ ಎಂಬುವವರು ಇದನ್ನು ಡಿಫ್ಯೂಸ್ ಮಾಡುವ ಮಹತ್ವದ ಕೆಲಸ ಆರಂಭಿಸಿದ್ದಾರೆ. ಬ್ಯಾಗ್ನಲ್ಲಿ ಡಿಟೋನೇಟರ್ ಯಾವ ಭಾಗದಲ್ಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದ್ದು, ಸ್ಕ್ಯಾನರ್ನ ತರಂಗಾಂತರದಿಂದ ಡಿಟೋನೇಟರ್, ಬ್ಯಾಟರಿ ಯೂನಿಟ್ ಸಂಪರ್ಕವಾಗದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ. ಬಳಿಕವೈಯರ್ ಕಟ್ ಮಾಡಿದ ತಕ್ಷಣ ಬಾಂಬ್ ನಿಷ್ಕ್ರಿಯಗೊಳ್ಳುತ್ತದೆ. ಸದ್ಯ ಮರಳಿನ ಚೀಲ ತುಂಬಿಟ್ಟಿದ್ದ ದಿಣ್ಣೆ ಬಳಿ ಬಾಂಬ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. 

ಜನವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!