Bengaluru ಖಾಸಗಿ ವಾಹನಗಳ ಸಂಚಾರ ಬಂದ್‌ ಮಾಡಿದ್ದಕ್ಕೆ, ಬಿಎಂಟಿಸಿಗೆ 6 ಕೋಟಿ ರೂ. ಆದಾಯ ಬಂತು!

By Sathish Kumar KH  |  First Published Sep 12, 2023, 3:18 PM IST

ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಸೋಮವಾರ ಬೆಂಗಳೂರು ಬಂದ್‌ ಮಾಡಿದ್ದರಿಂದ ಸರ್ಕಾರಿ ಸಂಸ್ಥೆ ಬಿಎಂಟಿಸಿಗೆ ಸುಮಾರು 6 ಕೋಟಿ ರೂ. ಲಾಭ ಬಂದಿದೆ.


ಬೆಂಗಳೂರು (ಸೆ.12): ರಾಜ್ಯದಾದ್ಯಂತ ಸೋಮವಾರ ನಡೆದ ಖಾಸಗಿ ಸಾರಿಗೆ ವಾಹನಗಳ ಬಂದ್‌ನಿಂದ ಸರ್ಕಾರಿ ವಾಹನಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಿಗೆ ಭರ್ಜರಿ ಲಾಭವಾಗಿದೆ. ಪ್ರತಿಬಾರಿ ಬಂದ್‌ ಹಾಗೂ ಪಗ್ರತಿಭಟನೆ ವೇಳೆ ನಷ್ಟ ಪ್ರಯಾಣಿಕರಿಲ್ಲದೇ ನಷ್ಟ ಅನುಭವಿಸುತ್ತಿದ್ದ ಸರ್ಕಾರಿ ನಿಗಮಗಳಿಗೆ ಖಾಸಗಿ ಸಾರಿಗೆಗಳ ಮಾಲೀಕರ ಬಂದ್‌ನಿಂದ ಸಾಮಾನ್ಯ ದಿನಕ್ಕಿಂತ ತು ಹೆಚ್ಚೇ ಲಾಭವಾಗಿದೆ. 

ಹೌದು, ನಿನ್ನೆ ಸೋಮವಾರ ಖಾಸಗಿ ಸಾರಿಗೆ ಸಂಘಟನೆಗಳ ಬಂದ್ ಪರಿಣಾಮವಾಗಿ, ಸರ್ಕಾರಿ ಸಾರಿಗೆ ನಿಗಮಗಳಿಗೆ ಭರ್ಜರಿ ಆದಾಯ ಬಂದಿದೆ. ಬಿಎಂಟಿಸಿ,  ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಏರಿಕೆ ಕಂಡುಬಂದಿದೆ. ಖಾಸಗಿ ವಾಹನಗಳಾದ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಮಾಲೀಕರು ಮತ್ತು ಚಾಲಕರು ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಯಾವುದೇ ವಾಹನಗಳು ಸಂಚಾರ ಮಾಡಿಲ್ಲ.ಅದರ ಬದಲಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ನಿಗಮಗಳಿಂದ ಹೆಚ್ಚುವರಿ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿತ್ತು.

Tap to resize

Latest Videos

ಸರ್ಕಾರಿ ಬಸ್ ಹೈಜಾಕ್: ಪ್ರಯಾಣಿಕರಿಂದ ಟಿಕೆಟ್ ಹಣ ಪಡೆದು ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎಸ್ಕೇಪ್

ಇನ್ನು ಆಟೋ, ಟ್ಯಾಕ್ಸಿ ಹಾಗೂ ಖಾಸಗಿ ಬಸ್‌ಗಳಿಲ್ಲದೇ ಪ್ರಯಾಣಿಕರು ಸರ್ಕಾರಿ ನಿಗಮದ ಬಸ್‌ಗಳನ್ನೆ ನೆಚ್ಚಿಕೊಂಡು ಅದರಲ್ಲಿಯೇ ಸಂಚಾರ ಮಾಡಿದ್ದಾರೆ. ಬಿಎಂಟಿಸಿ‌ ನಿಗಮದಿಂದ 500 ಹೆಚ್ಚುವರಿ ಬಸ್‌ಗಳು ಪ್ರಯಾಣ ಮಾಡಿವೆ. ಇನ್ನು ಬೆಂಗಳೂರಿನ ಹೊರವಲಯದಲ್ಲಿ ಸಾಮಾನ್ಯ ದಿನಗಳಂತೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಮಾಡಿವೆ. ಆದರೆ, ಕಳೆದ ಸೋಮವಾರಕ್ಕೆ ಹೋಲಿಕೆ ಮಾಡಿದ್ರೆ ಹೆಚ್ಚುವರಿ 2 ಲಕ್ಷ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಭಾನುವಾರ 30,39,314 ಪ್ರಯಾಣಿಕರು ಪ್ರಯಾಣಿಸಿದ್ದರು. ಆದರೆ, ಬಂದ್ ಖಾಸಗಿ ವಾಹನಗಳ ಬಂದ್‌ ಹಿನ್ನೆಲೆಯಲ್ಲಿ ಸೋಮವಾರ 35,80,134 ಜನರು ಪ್ರಯಾಣ ಮಾಡಿದ್ದಾರೆ. ಭಾನುವಾರಕ್ಕೆ ಹೋಲಿಕೆ ಮಾಡಿದರೆ, ಕೆಎಸ್‌ಆರ್‌ಟಿಸಿಯಲ್ಲಿ ನಿನ್ನೆ ಒಂದೇ ದಿನ 5 ಲಕ್ಷ ಜನ ಹೆಚ್ಚುವರಿಯಾಗಿ ಪ್ರಯಾಣ ಮಾಡಿದ್ದಾರೆ. ನಿನ್ನೆ 8,100 ಬಸ್ ಗಳು ಕಾರ್ಯಚರಣೆ ನಡೆಸಿವೆ ಎಂದು ಕೆಸ್‌ಆರ್‌ಟಿಸಿ ತಿಳಿಸಿದೆ.

ಬಿಎಂಟಿಸಿ ಸಿಟಿಎಂ ವಿಶ್ವನಾಥ್ ಮಾತನಾಡಿ, ಯಾವಾಗಲೂ 2400 ರಿಂದ 2500 ಶೆಡ್ಯುಲ್ ಅಪರೇಟ್ ಮಾಡುತ್ತಿದ್ದೆವು. ಆದರೆ, ಖಾಸಗಿ ವಾಹನಗಳ ಮಾಲೀಕರು ನಿನ್ನೆ ಬೆಂಗಳೂರು ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ 384 ಹೆಚ್ಚುವರಿ ಬಸ್‌ಗಳನ್ನು ಶೆಡ್ಯೂಲ್‌ ಮಾಡಲಾಗಿತ್ತು. ನಿನ್ನೆ ಒಟ್ಟಾರೆ 1600  ಟ್ರಿಪ್ ಹೆಚ್ಚುವರಿಯಾಗಿ ಮಾಡಲಾಗಿದೆ. ಬಂದ್  ದಿನ ನಾರ್ಮಲ್ ಆಗಿ ಪ್ರಯಾಣಿಕರ ಸಂಖ್ಯೆ ಅರ್ಧಕ್ಕೆ ಅರ್ಧ ಕಡಿಮೆ ಆಗ್ತಿತ್ತು. ಆದ್ರೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಜನ ಬಸ್ ಗಳಲ್ಲಿ ಓಡಾಟ ನಡೆಸಿದ್ದಾರೆ. ಬಂದ್ ದಿನ 5.96 ಕೋಟಿ ರೂ. ಟಿಕೆಟ್‌ನಿಂದ ಆದಾಯ ಬಂದಿದೆ. ಕಳೆದ ವಾರ 5.78 ಕೋಟಿ ರೂ. ಟಿಕೆಟ್ ಆದಾಯ ಬಂದಿತ್ತು. ಆದರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ  25 ಲಕ್ಷ ರೂ. ಹೆಚ್ಚುವರಿ ಆದಾಯ ಬಂದಿದೆ ಎಂದರು. 

ಓದಿದ್ದು ಬಿಟೆಕ್ ಮಾಡ್ತಿದ್ದ ಕೆಲಸ ಮಾತ್ರ ಸೈಬರ್ ಹ್ಯಾಕ್: ಗಿಪ್ಟ್‌ ವೋಚರ್‌ಗೆ ಕನ್ನ ಹಾಕುವುದೇ ಕಾಯಕ

ಬೆಂಗಳೂರು ಸಂಗೊಳ್ಳಿ ರಾಯಣ್ಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷವಾಗಿ 55 ರಿಂದ 60 ಹೆಚ್ಚುವರಿ ಟ್ರಿಪ್‌ಗಳನ್ನ ಮಾಡಲಾಗಿದೆ. ಪ್ರತಿನಿತ್ಯ 12 ಸಾವಿರ ಜನ ಏರ್ಪೋರ್ಟ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಬಂದ್ ದಿನ ಏರ್ಪೋರ್ಟ್ ರಸ್ತೆಯಲ್ಲಿ 22,371 ಜನ ಓಡಾಟ ನಡೆಸಿದ್ದಾರೆ. ಏರ್ಪೋರ್ಟ್ ಬಸ್ ಗಳಲ್ಲಿ ಯಾವಾಗ್ಲೂ 32 ಲಕ್ಷ ರೂ. ಆದಾಯ ಬರ್ತಿತ್ತು. ಆದರೆ, ನಿನ್ನೆ 60 ಲಕ್ಷ ರೂ. ಆದಾಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಸ್‌ಗಳಿಂದ ಬಂದಿದೆ. ಒಟ್ಟು ಬಂದ್ ದಿನ 39 ಲಕ್ಷ 52 ಸಾವಿರ ಜನ ಪ್ರಯಾಣಿಸಿದ್ದಾರೆ. ಹಿಂದಿನ ವಾರ 39 ಲಕ್ಷದ 25 ಸಾವಿರ  ಜನ ಪ್ರಯಾಣಿಸಿದ್ದರು.

click me!