
ಬೆಂಗಳೂರು (ಸೆ.20): ಡ್ರೈವರ್ ಮೇಲೆ ನಂಬಿಕೆ ಇಟ್ಟು ನಿಶ್ಚಿಂತೆಯಿಂದ ಪ್ರಯಾಣಿಸುತ್ತಿರುವಾಗ ಏಕಾಏಕಿ ಚಾಲಕನಿಗೆ ಹೃದಯಾಘಾತವಾದರೆ? ಫ್ಲೈಓವರ್ ಮೇಲೆ ಬಸ್ ಓಡುತ್ತಿರುವಾಗ ಚಾಲಕನಿಗೆ ಏನೋ ಆದರೆ.. ಹೀಗೆಲ್ಲ ಯೋಚಿಸಿ ಬೆಚ್ಚಿಬಿದ್ದಿರ್ತೀರಿ ಅಲ್ಲವೇ? ಹೌದು ಪ್ರತಿಯೊಬ್ಬ ಪ್ರಯಾಣಕನಿಗೂ ಹಿಂಗೊಂದು ಯೋಚನೆ ಸಣ್ಣಗೆ ಬೆವರಿರುತ್ತಾರೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಂತದ್ದೊಂದು ಘಟನೆ ನಡೆದುಹೋಗಿದೆ ಅದೃಷ್ಟವಶಾತ್ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ.
ಬಿಎಂಟಿಸಿ ಬಸ್ ಡ್ರೈವರ್ ವಿರೇಶ್ ನಿನ್ನೆ ಎಂದಿನಂತೆ KA51AJ6905 ನಂಬರಿನ ಬಸ್ ಚಲಾಯಿಸಿಕೊಂಡು ಹೊರಟಿದ್ದಾನೆ. ಬಸ್‌ನಲ್ಲಿ ಸುಮಾರು 45 ಜನರು ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್‌ನಲ್ಲಿದ್ದ ವೇಳೆ ಏಕಾಏಕಿ ಚಾಲಕ ವಿರೇಶ್‌ಗೆ ಎದೆನೋವು ಕಾಣಿಸಿಕೊಂಡಿದೆ.d ಬಳಿಕ ವೇಗವಾಗಿ ಓಡುತ್ತಿದ್ದ ಬಸ್ ನಿಧಾನವಾಗಿ ಚಲಿಸಿದೆ.
ನಿನಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಮಹಿಳೆಗೆ ಒತ್ತಿಕೊಂಡೇ ಕುಳಿತ ಬಿಎಂಟಿಸಿ ಕಂಡಕ್ಟರ್
ಅನುಮಾನಗೊಂಡು ಬಸ್ಸಿನತ್ತ ಓಡಿ ಬಂದಿರುವ ಹಲಸೂರು ಟ್ರಾಫಿಕ್ ಎಎಸ್‌ಐ ಆರ್ ರಘುಕುಮಾರ್. ಬಸ್ ಬಳಿ ಬಂದು ನೋಡಿದಾಗ ಎದೆಗೆ ಕೈ ಹಿಡಿದು ಒಂದು ಕಡೆಗೆ ವಾಲಿದ್ದ ಚಾಲಕ ವೀರೇಶ್. ಹಾರ್ಟ್ ಅಟ್ಯಾಕ್ ಆಗಿರುವುದನ್ನ ಗಮನಿಸಿದ ಟ್ರಾಫಿಕ್ ಎಎಸ್‌ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿದ್ದಾರೆ. ನಂತರ ಆಂಬುಲೆನ್ಸ್ ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ ಪೊಲೀಸರು. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ