* ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಔಷಧಿ
* ಹುಬ್ಬಳ್ಳಿಯಲ್ಲಿ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
* ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದ ಜೋಶಿ
ಹುಬ್ಬಳ್ಳಿ, (ಮೇ.30): ದೇಶದಲ್ಲಿ ಕೊರೋನಾಗೆ ರೆಮ್‌ಡೆಸಿವಿಯರ್ ಉಚಿತವಾಗಿ ನೀಡಿದ್ದು, ಅದೇ ರೀತಿಯಾಗಿ ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಔಷಧಿ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ಕೇಂದ್ರ ಸರಕಾರ ಯಶಸ್ವಿ ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಇಂದು(ಭಾನುವಾರ) ಸಸಿ ನೆಡುವ ಸಾಂಕೇತಿಕ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಭಾರಿ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ ಆಯಿತು. ಆ ಹಿನ್ನಲೆಯಲ್ಲಿ ವಿಜೃಂಭಣೆ ಸಂಭ್ರಮಾಚರಣೆ ಬಿಟ್ಟು. ಕೊರೋನಾ ನಿಯಂತ್ರಿಸಲು ಸರಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಬ್ಲ್ಯಾಕ್ ಫಂಗಸ್ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ!
ಇನ್ನು ಇದೇ ವೇಳೆ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ ಜೋಶಿ. ಜೂನ್ 7 ರ ನಂತರ ಲಾಕ್ ಡೌನ್ ಮುಂದುವರಿಸುವ ವಿಚಾರವಾಗಿ, ಈಗಲೆ ಹೇಳುವುದು ಭವಿಷ್ಯ ಹೇಳುವುದು ಸೂಕ್ತವಲ್ಲ. ಇಲ್ಲಿಯವರೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರಕಾರ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದೇನು ಒಳ್ಳೆಯ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ. ಈಗಲೇ ಲಾಕ್ ಡೌನ್ ಮುಂದವರೆಸಬೇಕೋ ಬೇಡವೋ ಎನ್ನುವುದು ಸೂಕ್ತವಲ್ಲ. ಸಿಎಂ ಆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
ರಾಜ್ಯದಲ್ಲಿ ಲಾಕ್ ಡೌನ್ ಜೂನ್ 7 ರವರೆ ಇದ್ದು, ಅಲ್ಲಿಯವರೆಗೆ ಕೋರೋನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಆದರೆ ಲಾಕ್ ಮಾಡೋ ಬಗ್ಗೆ ತಯಾರಿದ್ದೇವೆ ಎಂದು ಸಿಎಂ ಹೇಳಿದ್ದು ಅಲ್ಲಿಯವರೆಗೆ ಕಾದು ನೋಡೋಣ ಎಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ಇಳಿಮುಖವಾಗುತ್ತಿದೆ. ಎರಡು ಮೂರು ದಿನದಲ್ಲಿ ಮತ್ತೆ ಕೇಸ್ ಗಳು ಕಡಿಮೆ ಆಗಲಿದೆ. ರಾಜ್ಯದಲ್ಲಿ ಲಾಕ್ ಡೌನ್ ಸಕ್ಸಸ್ ಆಗಿದೆ. ಜೂನ್ 7 ರವರೆಗೆ ಲಾಕ್ ಡೌನ್ ಇದೆ. ಇನ್ನು ಎಂಟು ದಿನ ಸಮಯವಿದೆ . ಪಾಸಿಟಿವಿಟಿ ರೇಟ್ ಜೀರೋ ಆಗಬಹುದು. ಕೊರೋನಾ ಕಡಿಮೆಯಾದರೆ ಜೂನ್ 7 ರವೆಗೆ ಕಾಯೋಣ ಅವತ್ತಿನ ಪರಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಭಿಪ್ರಾಯ ವ್ಯಕ್ತಪಿಡಿಸಿದರು.