ಇದೇ ಮಾ.25 ರಂದು ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಹಳೇ ಕುಂದುವಾಡ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮಾ.21): ಇದೇ ಮಾ.25 ರಂದು ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಜಿಎಂ ಸಿದ್ದೇಶ್ವರ, ಶಾಸಕ ಎಸ್ ವಿ ರವೀಂದ್ರನಾಥ್ ವಿರುದ್ಧ ಹಳೇ ಕುಂದುವಾಡ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದಾರೆ, ಮತ್ತು ಮುಂಬರುವ ದಿನಗಳಲ್ಲಿ ದೂಡಾ ಕಚೇರಿ ಬೀಗ ಮುತ್ತಿಗೆ ಹಾಕಲಾಗುವುದು ಎಂದು ಹಳೇ ಕುಂದುವಾಡ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಕುರಿತು ಕುಂದುವಾಡ ಗ್ರಾಮಸ್ಥರಾದ ಮಹಾಂತೇಶ್ ಜೆ.ಆರ್ ಮಾತನಾಡಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಕೇಂದ್ರ, ರಾಜ್ಯ ಸರ್ಕಾರ, ನಗರಾಭಿವೃದ್ಧಿ, ಅಧಿಕಾರಿಗಳ ನಡೆ ವಿರೋಧಿಸಿ ಇದೇ 25ರಂದು ಬೃಹತ್ ಪ್ರತಿಭಟನೆ ಹಾಗೂ ಕಪ್ಪು ಬಾವುಟ ಪ್ರದರ್ಶನ ನಡೆಸಲು ತೀರ್ಮಾನಿಸಿದ್ದೇವೆ.
undefined
ದೂಡಾ ಇಲಾಖೆಯವರು ಹಳೇ ಕುಂದುವಾಡ ರೈತರನ್ನ ಮೂರು ವರ್ಷದಿಂದ ಅಲೆದಾಡಿಸಿ ರೈತರ ನೆಮ್ಮದಿ ಕಸಿದಿದ್ದಾರೆ.ಈ ಹಿಂದೇ ಡಿಸಿ ಮಹಾಂತೇಶ್ ಬೀಳಗಿಯವರ ಮಾತಿಗೆ ಒಪ್ಪಿ ನಾವುಗಳು ಜಮೀನು ನೀಡಲು ಒಪ್ಪಿದರು ಸಹ ದೂಡಾದವರು ನಿರ್ಲಕ್ಷ್ಯ ಮಾಡಿ ಎರಡು ವರ್ಷ ಜಮೀನು ಖರೀದಿ ಮಾಡಿಕೊಳ್ಳಲಿಲ್ಲ, ಈ ಹಿಂದೇಯೂ ಒಂದುವರೆ ವರ್ಷ ಅಲೆದಾಡಿಸಿದರು. ಖಾಸಗಿಯವರ ಲೇ ಔಟ್ ಗಳಲ್ಲಿ ಎಂತದ್ದೆ ಸಮಸ್ಯೆ ಇದ್ದರು ಮೂರ್ನಾಲ್ಕು ತಿಂಗಳಲ್ಲೇ ಬಗೆಹರಿಸಿಕೊಡುತ್ತಾರೆ. ಸ್ವತ ಇಲಾಖೆಯ ಹೊಸ ಬಡಾವಣೆ ಬಗ್ಗೆ ಅಂದಿನ ದೂಡಾ ಆಯುಕ್ತರಾದ ಬಿಟಿ ಕುಮಾರಸ್ವಾಮಿ ಅವರು ತಲೆಕೆಡಿಸಿಕೊಳ್ಳದೇ ರೈತರನ್ನ ಮೂರು ವರ್ಷ ಅಲೆದಾಡಿಸಿದರು.
ಮೂರು ತಿಂಗಳು, ಆರು ತಿಂಗಳಿಗೆ ಒಬ್ಬರಂತೆ ದೂಡಾ ಅಧ್ಯಕ್ಷರು ಬದಲಾಗಿ ಇಲ್ಲಿಯವರೆಗೆ ನಾಲ್ಕು ಜನ ಅಧ್ಯಕ್ಷರು ಬದಲಾದರು ಆದರೆ ಒಬ್ಬರು ಸಹ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಲಿಲ್ಲ, ಇನ್ನೂ ಆಯುಕ್ತ ಬಿಟಿ ಕುಮಾರಸ್ವಾಮಿ ಮೂರು ವರ್ಷದಿಂದ ಹೇಳಿದ್ದ ಕಥೆಯನ್ನೆ ಹೇಳಿ ದಿನ ದೂಡಿದರು. ಅವರು ಬದಲಾದರು, ಇಬ್ಬರು ಜಿಲ್ಲಾಧಿಕಾರಿಗಳು ಬದಲಾದರು, ಈಗ ಸರ್ಕಾರದ ಅವಧಿಯೇ ಮುಗಿಯುತ್ತಿದೆ, ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದರು.
ಪ್ರಜಾಪ್ರಭುತ್ವದ ಯಶಸ್ಸಿಂದ ಕೆಲವರಿಗೆ ಘಾಸಿ, ಹೀಗಾಗಿ ಅದರ ಮೇಲೆ ದಾಳಿ: ಮೋದಿ
ಈಗ ಬೇರೆಡೆ ಜಮೀನುಗಳ ದರ ದುಪ್ಪಟ್ಟಾಗಿದೆ, ನಮ್ಮ ಜಮೀನು ದರ ಮಾತ್ರ ಇವರು ಹೇಳಿದಂತೆ ಕೊಡಬೇಕು, ಬೇರೆಡೆ ಹೋಗಿ ಜಮೀನು ಕೊಳ್ಳುವುದು ಕಷ್ಟಸಾಧ್ಯವಾಗಿದೆ, 53 ಎಕರೆ ಪ್ರದೇಶ ಹಿಂದುಳಿದ ಸಮುದಾಯದವರ ಜಾಗವಾಗಿದೆ. ಈ ಹಿಂದೇ ಇದು ನೇರ ಖರೀದಿ, ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಆಗುವುದಿಲ್ಲ ಎಂದು ಹೇಳಿದ್ದೀರಿ, ಆದರೆ ಈಗ ಭೂ ಸ್ವಾಧೀನ ಮಾಡಲು ದೂಡಾದವರು ಅನುಮತಿ ಕೇಳಿದ್ದಾರೆ, ದೂಡಾ ಬಜೆಟ್ ನಲ್ಲಿ ಹಣ ಮೀಸಲು ಇರಿಸಿದ್ದಾರೆ, ದೂಡಾದವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸ್ವಾಧೀನಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಮಾರ್ಚ್ 25ಕ್ಕೆ ಪ್ರಧಾನಿ ಮೋದಿ ಮೆಗಾ ರೋಡ್ ಶೋ..!
ದೂಡಾದವರು ಬೇರೆಡೆ ಜಾಗ ನೋಡಿದ್ದಾರೆ ಎಂದು ತಿಳಿದು ಬಂದಿದೆ, ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸ್ಥಳ ಬದಲಾವಣೆ ಮಾಡಿ, ಅಲ್ಲಿ ಹೊಸ ಬಡಾವಣೆ ಮಾಡಲು ಅವಕಾಶ ಮಾಡಿದರೆ, ಆಗ ಕುಂದುವಾಡ ರೈತರ ಸಮಸ್ಯೆಯೂ ಬಗೆಹರಿಯುತ್ತದೆ. ದೂಡಾದವರು ಹೊಸ ಬಡಾವಣೆ ಮಾಡಲು ಅನುಮತಿ ಸಿಗುತ್ತದೆ, ಈ ಹಿನ್ನಲೆ ರೈತರನ್ನು ಸಮಸ್ಯೆಗೆ ಸಿಲುಕಿಸದೇ ಈ ಪ್ರಕ್ರಿಯೆಯಿಂದ ಮುಕ್ತಿಗೊಳಿಸಿಕೊಡಿ ಎಂದರು ಸುದ್ದಿಗೋಷ್ಠಿಯಲ್ಲಿ ಬಲ್ಲೂರು ರವಿಕುಮಾರ್, ಮಲ್ಲಿಕಾರ್ಜುನ ಎನ್, ಹೆಚ್ ಸೋಮಶೇಖರ್,ರಾಮಪ್ಪ, ಶಿವಪ್ಪ ಮತ್ತಿತರರಿದ್ದರು.