
ಬೆಂಗಳೂರು (ಸೆ.19) ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿ ಅಂತ ಒಬ್ಬ ಮಹಾ ಮಾನವ ಪ್ರಧಾನಮಂತ್ರಿ ಆಗಿಬಿಟ್ಟಿದ್ದಾರೆ. ತ್ರಿಪಲ್ ತಲಾಕೆ ಅಂತೆ, ಇವನಿಗೆ ಯಾಕೇ ಬೇಕು, ಮದುವೆನೇ ಆಗಿಲ್ಲ, ಇವನು ತ್ರಿಪಲ್ ತಲಾಕ್ ಅಂತೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಏಕಚವನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.
ಮೋದಿ ಪ್ರಧಾನಿಯಾಗಿ 12 ವರ್ಷ ಆಯಿತು. ಈ 12 ವರ್ಷದಲ್ಲಿ 12 ನಿಮಿಷ ಯಾವತ್ತಾದರೂ ಮಾತಾನಾಡಿರುವುದು ನಿಮದೆ ನೆನಪಿದೆಯಾ? ಕರ್ನಾಟಕದಲ್ಲಿ ಅಚತೀ ಹೆಚ್ಚಿನ ಸಾರ್ವಜನಿಕ ಉದ್ಯಮಗಳು ಇವೆ. ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಕಾಂಗ್ರೆಸ್ ಸ್ಥಾಪನೆ ಮಾಡಿದೆ. ಆದರೆ ಮಹಾಮಾನವ ಪದೇ ಪದೇ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇವ್ರು 26 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ. ಯಾರು ಮಾಡಿದ್ದು ಎಂದು ಕೇಳಿ ನೋಡಿ ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಇದೇ ನರೇಂದ್ರ ಮೋದಿ 26 ಸಾರ್ವಜನಿಕ ಉದ್ಯಮ ಮಾರಾಟ ಮಾಡಿದ್ದಾರೆ. ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ನರಸಿಂಹರಾಯರವರೆಗೂ ಸಾರ್ವಜನಿಕ ಉದ್ಯಮ ಮಾಡಿದ್ದು ಕಾಂಗ್ರೆಸ್. ನಾನು ಗುಜರಾತ್‌ನಲ್ಲಿ 4.5 ವರ್ಷ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದೇನೆ. ಅಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ಮಾಡಲಿಲ್ಲ.ಈಗ ಏನಿದ್ರೂ ಅದಾನಿ, ಅಂಬಾನಿ ಒಂದಷ್ಟು ಜನ ಬಂಡವಾಳ ಶಾಹಿಗಳು ಇದ್ದಾರೆ. ಎಲ್ಲವನ್ನೂ ಖರೀದಿ ಮಾಡುತ್ತಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ನೀವು ಹೋರಾಟದ ಮನೋಭಾವ ರೂಢಿಸಿಕೊಂಡಾಗ ಮಾತ್ರ ಬದಲಾವಣೆ ಮಾಡಬಹುದು. ಫಸ್ಟ್ ನೀವು ಸುಧಾರಣೆ ಆಗ್ತೀರಾ, ನೀವು ಸುಧಾರಣೆ ಆದ್ರೆ ಸಮಾಜ ಸುಧಾರಣೆ ಆಗುತ್ತೆ. ಸಮಾಜ ಸುಧಾರಣೆ ಆದ್ರೆ ದೇಶ ಸುಧಾರಣೆ ಆಗುತ್ತೆ ಅನ್ನೋದನ್ನ ನೀವು ತಿಳಿದುಕೊಳ್ಳಿ. ಯಾಕಂದ್ರೆ 12 ವರ್ಷದಿಂದ ಮಹಾಮಾನವ ಪ್ರಧಾನಮಂತ್ರಿ ಆದಮೇಲೆ ಕೇವಲ ಧರ್ಮಾಧಾರಿತ ರಾಜಕಾರಣ ನಡೀತಿದೆ. ಧರ್ಮ ಕಟ್ಟಿಕೊಂಡು ನಮಗೆ ಏನಾಗಬೇಕಾಗಿದೆ? . ದಿನ ಬೆಳಗ್ಗೆ ಎದ್ದರೆ ನಾವು ದೇವರನ್ನು ಪೂಜೆ ಮಾಡುತ್ತೇವೆ. ದಿನಕ್ಕೆ ಐದು ಸರಿ ನಮಾಜ್ ಮಾಡುತ್ತೇವೆ. ಭಾನುವಾರ ಆದ್ರೆ ಪ್ರಾರ್ಥನೆ ಮಾಡೋಕೆ ಹೋಗುತ್ತೇವೆ. ಜೈನ ಧರ್ಮಕ್ಕೆ ಹೋದ್ರೆ ಕೀರ್ತನೆಗಳನ್ನು ಹೇಳುತ್ತೇವೆ. ಇದೆಲ್ಲಾ ನಾವು ಮನೆಯಲ್ಲಿ ಮಾಡುತ್ತೇವೆ. ಸರ್ಕಾರಕ್ಕೂ ಇದಕ್ಕೂ ಏನು ಸಂಬಂಧ? ರಾಜಕಾರಣಕ್ಕೆ ಧರ್ಮವನ್ನು ತಂದು, ನಮ್ಮ ಮಕ್ಕಳನ್ನೆಲ್ಲ ಜೈಲಿಗೆ ಕಳಿಸತಕ್ಕಂತಹ ಕೆಲಸ ಮಾಡ್ತಾ ಇದ್ದಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕಾರ್ಮಿಕರ ಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದರೆ ಪರವಾಗಿಲ್ಲ. ಮಹಿಳೆಯರ ಸುರಕ್ಷತೆ ಬಗ್ಗೆ ಹೋರಾಟ ಮಾಡಿ ಜೈಲಿಗೆ ಹೋದ್ರೆ ಸಂತೋಷ. ಆದರೆ ಅದ್ಯಾವುದು ಇಲ್ಲ. ಗಣಪತಿ ಪೂಜೆ ಮಾಡ್ತಾರೆ, ಇವರಿಗೆ ಭಕ್ತಿ ಬರೋದು ಮಸೀದಿ ಮುಂದೆ ಹೋದಾಗ ಮಾತ್ರ. ಅವರು ಮನೆಯಲ್ಲಿ ಗಣಪತಿ ಪ್ರಾರ್ಥನೆ ಮಾಡಲ್ಲ, ಮಂಗಳಾರತಿನೂ ಮಾಡೋದಿಲ್ಲ. ಡಿಜೆ ಹಾಕೊಂಡು ಮಸೀದಿ ಮುಂದೆ ಡ್ಯಾನ್ಸ್ ಆಡೋದು ಇದೇ ಭಕ್ತಿ. ಇದನ್ನ ಯಾರು ಸಹ ಹೇಳಿಕೊಟ್ಟಿಲ್ಲ, ಯಾವ ಧರ್ಮದಲ್ಲೂ ಸಹ ಹೇಳಿಕೊಟ್ಟಿಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ