
ಬೆಂಗಳೂರು [ಜ.05]: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ರಾಜ್ಯ ಬಿಜೆಪಿಯು ಮನೆ-ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ.
ದೇಶಾದ್ಯಂತ ನಡೆಯಲಿರುವ ಈ ಅಭಿಯಾನಕ್ಕೆ ರಾಜ್ಯದ 12 ಕಡೆ ಜ.5ರ ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಬೆಂಗಳೂರಿನ ವಸಂತನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ...
ಈ ಕೆಳಗಿನ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲಿ, ಯಾರಿಂದ ಚಾಲನೆ:
ಬೆಂಗಳೂರು ಕೇಂದ್ರ- ಬಿ.ಎಸ್.ಯಡಿಯೂರಪ್ಪ (ವಸಂತನಗರ), ಹುಬ್ಬಳ್ಳಿ-ಧಾರವಾಡ- ಪ್ರಹ್ಲಾದ್ ಜೋಶಿ (ಧಾರವಾಡ ಪಶ್ಚಿಮ), ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ (ದಾಸರಹಳ್ಳಿ), ಬೆಂಗಳೂರು ದಕ್ಷಿಣ-ಡಾ.ಸಿ.ಎನ್.ಅಶ್ವತ್ಥನಾರಾಯಣ್ (ಬಸವನಗುಡಿ), ಬಳ್ಳಾರಿ- ಲಕ್ಷ್ಮಣ ಸವದಿ (ಹೊಸಪೇಟೆ), ಗದಗ- ಗೋವಿಂದ ಕಾರಜೋಳ, ಧಾರವಾಡ-ಜಗದೀಶ್ ಶೆಟ್ಟರ್ (ಹುಬ್ಬಳ್ಳಿ ಪೂರ್ವ), ಶಿವಮೊಗ್ಗ- ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ ನಗರ), ತುಮಕೂರು- ಆರ್.ಅಶೋಕ (ತುಮಕೂರು ನಗರ), ಮೈಸೂರು- ಅರವಿಂದ ಲಿಂಬಾವಳಿ (ಮೈಸೂರು ನಗರ), ಚಿಕ್ಕಮಗಳೂರು- ಸಿ.ಟಿ.ರವಿ (ಚಿಕ್ಕಮಗಳೂರು ನಗರ), ಬೆಂಗಳೂರು ಕೇಂದ್ರ- ವಿ.ಸೋಮಣ್ಣ (ಗೋವಿಂದರಾಜನಗರ), ಚಿತ್ರದುರ್ಗ- ಶಶಿಕಲಾ ಜೊಲ್ಲೆ (ಚಿತ್ರದುರ್ಗ ನಗರ), ಕೊಪ್ಪಳ- ಸಿ.ಸಿ.ಪಾಟೀಲ್ (ಕೊಪ್ಪಳ ನಗರ), ದಕ್ಷಿಣ ಕನ್ನಡ - ಕೋಟ ಶ್ರೀನಿವಾಸ ಪೂಜಾರಿ (ಮಂಗಳೂರು), ಚಿಕ್ಕಬಳ್ಳಾಪುರ- ಶೋಭಾ ಕರಂದ್ಲಾಜೆ, ಹಾವೇರಿ- ಶಿವಕುಮಾರ್ ಉದಾಸಿ (ಹಾವೇರಿ ನಗರ), ಬಾಗಲಕೋಟೆ- ಪಿ.ಸಿ.ಗದ್ದಿಗೌಡರ (ಬಾಗಲಕೋಟೆ ನಗರ), ವಿಜಯಪುರ- ರಮೇಶ್ ಜಿಗಜಿಣಗಿ (ವಿಜಯಪುರ ನಗರ), ಬೀದರ್- ಭಗವಂತ ಖೂಬಾ (ಬೀದರ್ ನಗರ), ಚಿಕ್ಕೋಡಿ-ಮಹಾಂತೇಶ್ ಕವಟಗಿ (ಚಿಕ್ಕೋಡಿ ನಗರ) ಚಾಲನೆ ನೀಡಲಿದ್ದಾರೆ.
ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್ ಪೌರತ್ವ?...
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ