ಬಿಜೆಪಿ ತಪ್ಪು ಮಾಡೋರ ಜೊತೆ ನಿಲ್ಲೋದಿಲ್ಲ, ಬೈರತಿ ಬಸವರಾಜ್ ವಿರುದ್ಧದ ಎಫ್‌ಐಆರ್ ಬಗ್ಗೆ ರಾಜೀವ್ ಹೇಳಿಕೆ

Published : Jul 17, 2025, 02:54 PM IST
 Byrathi Basavaraj  p rajeev

ಸಾರಾಂಶ

ಕಾಂಗ್ರೆಸ್ ನಾಯಕರ ಆಪ್ತನ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿನ ಭಾಗಿತ್ವದ ಬಗ್ಗೆ ಬಿಜೆಪಿ ಗಂಭೀರ ಆರೋಪ ಮಾಡಿದೆ. ಬೈರತಿ ಬಸವರಾಜ್ ವಿರುದ್ಧದ ಎಫ್‌ಐಆರ್ ರಾಜಕೀಯ ಪ್ರೇರಿತ ಎಂದು ಪಕ್ಷ ಪ್ರತಿಪಾದಿಸಿದೆ. ಡ್ರಗ್ಸ್ ಜಾಲದ ವಿರುದ್ಧ ಜನಾಂದೋಲನದ ಎಚ್ಚರಿಕೆಯನ್ನೂ ನೀಡಿದೆ.

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಶೈಲಿಯನ್ನು ಕಠಿಣವಾಗಿ ಟೀಕಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬೈರತಿ ಬಸವರಾಜ್ ವಿರುದ್ಧ ದಾಖಲಾದ ಎಫ್‌ಐಆರ್ ಬಗ್ಗೆ ಮಾತನಾಡಿ, ಬಿಜೆಪಿ ಪಕ್ಷ ತಪ್ಪು ಮಾಡುವವರ ಜೊತೆ ನಿಲ್ಲುವ ಕೆಲಸ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು. ಯಾವುದೇ ಅಪರಾಧಕ್ಕೆ ಮೂರೂ ಅಂಶಗಳು ಅಗತ್ಯ. ಕೊಲೆ ಆಗಲು ಮೋಟೀವ್, ಪ್ರಿಪ್ರೇಷನ್, ಕಮೀಷನ್. ಈ ಮೂರು ಅಂಶಗಳಿಲ್ಲದೆ ಯಾರನ್ನಾದರೂ ಅಪರಾಧ ಮಾಡೋದಕ್ಕೆ ಸಿದ್ದ ಅಗಿರಬೇಕು. ಎಫ್‌ಐಆರ್ ದಾಖಲಿಸುವುದು ಅತಿಶಯ ಸ್ಪಷ್ಟ ರಾಜಕೀಯ ನಾಟಕವಾಗಿದೆ. ಬೈರತಿ ಬಸವರಾಜ್ ಅವರಿಗೆ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಇಲ್ಲದಿರುವಾಗ, ಪೊಲೀಸರು ಈ ರೀತಿ ಏಕೆ ಪ್ರೆಸ್ ಮೀಟಿಂಗ್ ಮಾಡಿ ಆರೋಪ ಹೊರಿಸುತ್ತಿದ್ದಾರೆ ಎಂಬುದು ಸಂಶಯಾಸ್ಪದ ಎಂದಿದ್ದಾರೆ. ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರು ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಎಫ್‌ಐಆರ್‌ಗೆ ಒಳಗಾಗಿದ್ದಾರೆ. ಮೃತನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ತನಿಖಾ ಸಂಸ್ಥೆಗಳ ನಿಷ್ಠೆ ಪ್ರಶ್ನಾರ್ಹವಾಗಬಾರದು

ನ್ಯಾಯಾಂಗ, ಚುನಾವಣಾ ಆಯೋಗ, ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆ ಕುಂದಬಾರದು. ಈ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ದುರುದ್ದೇಶ ಸಾಧಿಸೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇಂತಹ ಅವ್ಯವಸ್ಥೆಯ ವಿರುದ್ಧ ಜನಜಾಗೃತಿ ಅಗತ್ಯವಾಗಿದೆ. ತನಿಖಾ ಸಂಸ್ಥೆ ಅತ್ಯಂತ ಕಳಪೆಯಾಗಿ ಬಳಸಿಕೊಂಡ ಆರೋಪ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.

ದಲಿತರಿಗೆ ಕಾಂಗ್ರೆಸ್‌ನ ನೀತಿ ಸ್ಪಷ್ಟವಲ್ಲ

ಕಾಂಗ್ರೆಸ್ ಪಕ್ಷದ ವಿರುದ್ಧದ ಟೀಕೆಯನ್ನು ಮುಂದುವರೆಸಿದ ಅವರು, ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮೀರಿಸಲು ಕಾಂಗ್ರೆಸ್ ಯೋಚಿಸುತ್ತಿದೆಯೆಂಬುದು ತಾರತಮ್ಯದ ಭಾಗವಲ್ಲದೆ ರಾಜಕೀಯ ಲಾಭದ ಲೆಕ್ಕಾಚಾರ ಮಾತ್ರ. ಕಾಂಗ್ರೆಸ್‌ಗೆ ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದರ ಬೋಧನೆ ಬೇಕಾಗಿಲ್ಲ. ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಂದಲೇ ಉನ್ನತ ಸ್ಥಾನಗಳವರೆಗೆ ಏರಿಕೆ ಸಾಧ್ಯವಾಗಿದೆ. ಇದಕ್ಕೆ ರಾಜ್ಯಸಭಾ ಸದಸ್ಯರಿಂದ ಹಿಡಿದು ಪದ್ಮ ಪ್ರಶಸ್ತಿ ಪುರಸ್ಕೃತರ ಆಯ್ಕೆಗಳು ಸಾಕ್ಷ್ಯ.

ಡ್ರಗ್ ಪೆಡ್ಲಿಂಗ್ ಬಗ್ಗೆ ಗಂಭೀರ ಆರೋಪ: ಪ್ರಿಯಾಂಕಾ ಖರ್ಗೆ ಆಪ್ತನ ಪಾತ್ರ ಏನು?

ರಾಜೀವ್ ಗಂಭೀರ ಆರೋಪವನ್ನೂ ಮುಂದಿಟ್ಟಿದ್ದು, "ಕಲಬುರಗಿ ಘಟಕದ ಕಾಂಗ್ರೆಸ್ ಅಧ್ಯಕ್ಷನ ಆಪ್ತ ಲಿಂಗರಾಜ್ ಎಂಬಾತನು ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಬೇರೊಂದು ರಾಜ್ಯದಲ್ಲಿ ಬಂಧಿತನಾಗಿದ್ದಾನೆ. ಹಾಗಾದರೆ ನಮ್ಮ ರಾಜ್ಯದಲ್ಲಿ ಇದುವರೆಗೆ ಕ್ರಮ ಏಕೆ ಆಗಿಲ್ಲ? ಇಂತಹ ಕ್ರಿಯಾಶೀಲತೆಯ ಮಾಹಿತಿ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಗಮನಕ್ಕೆ ಬಾರದಿರಲು ಸಾಧ್ಯವೇ?"

ಮಕ್ಕಳಿಗೂ ಅಪಾಯ: ಡ್ರಗ್ ಚೈನ್ ಲಿಂಕ್ ತಕ್ಷಣ ತಡೆಗಟ್ಟಬೇಕು

"ನಾಳೆ ಡ್ರಗ್ ನಿಮ್ಮ ಮನೆಯ ಬಾಗಿಲಿಗೆ ಬರಬಹುದಾದಷ್ಟು ಭಯಾನಕ ಸ್ಥಿತಿ. ಸ್ಕೂಲ್, ಕಾಲೇಜು ಪಾರ್ಟಿಗಳಲ್ಲಿ ಡ್ರಗ್ ಪಸರಿಸುತ್ತಿದೆ. ಐಸ್ ಕ್ರೀಂನಲ್ಲಿಯೂ ಡ್ರಗ್ ಹಾಕಲಾಗುತ್ತಿದೆ ಎನ್ನುವುದು ಗಂಭೀರ ಮಾಹಿತಿ. ಇದು ಚೈನ್ ಲಿಂಕ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಹಾಗೂ ರಾಜಕಾರಣಿಗಳ ಜವಾಬ್ದಾರಿ ಹೆಚ್ಚಾಗಿದೆ," ಎಂದು ಅವರು ಎಚ್ಚರಿಸಿದರು.

ಕಲಬುರಗಿಯಲ್ಲಿ ವಿಶೇಷ ತನಿಖೆಗೆ ಆಗ್ರಹ

"ಪ್ರಿಯಾಂಕಾ ಖರ್ಗೆ ಲಿಂಗರಾಜ್‌ನ ಬೆಂಬಲಕ್ಕೆ ನಿಂತಿದ್ದಾರೆ ಎಂಬುದು ಖಂಡಿತ ರಾಜಕೀಯ ಅಪರಾಧವನ್ನು ಮುಚ್ಚಿಡುವ ಪ್ರಯತ್ನ. ಇಂತಹವರನ್ನು ಪಕ್ಷದ ಪದಾಧಿಕಾರಿಗಳಾಗಿ ಮಾಡುವದು ಅನೀತಿಯ ಕಾರ್ಯ. ಸಚಿವ ಖರ್ಗೆ ಇದುವರೆಗೆ ಕ್ಷಮೆ ಕೇಳಿಲ್ಲ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಗೆ ವಿಶೇಷ ತನಿಖೆ ಅಗತ್ಯ. ಡ್ರಗ್ ಪೆಡ್ಲಿಂಗ್‌ ಹಿಂದೆ ಯಾವ ರಾಜಕೀಯ ಬೆಂಬಲ ಇದೆ ಎಂಬುದನ್ನು ಪತ್ತೆಹಚ್ಚಬೇಕು," ಎಂದು ರಾಜೀವ್ ಒತ್ತಾಯಿಸಿದರು.

ಜನಾಂದೋಲನದ ಎಚ್ಚರಿಕೆ

"ಈ ವಿಚಾರದಲ್ಲಿ CCB ಮತ್ತು DCRB ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸರ್ಕಾರ ಶೂನ್ಯ ಸಹಿಷ್ಣುತೆಯ (Zero Tolerance) ನಿಲುವಿನಲ್ಲಿ ಕ್ರಮ ಕೈಗೊಳ್ಳದಿದ್ದರೆ, ಈ ವಿಷಯದ ಬಗ್ಗೆ ಬಿಜೆಪಿ ಪಕ್ಷವು ಬೃಹತ್ ಜನಾಂದೋಲನ ಕೈಗೊಳ್ಳಲಿದೆ," ಎಂದು ಅಂತಿಮ ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!