ರಾಜ್ಯದಲ್ಲಿ ಮತ್ತೆ JDS-BJP ಮೈತ್ರಿ ಸರಕಾರ ಬರುತ್ತಾ?

By Web DeskFirst Published Feb 7, 2019, 12:23 PM IST
Highlights

ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ಬುಡ ಅಲ್ಲಾಡುತ್ತಿದ್ದಂತೆ, ಇತ್ತ ಬಿಜೆಪಿ-ಜೆಡಿಎಸ್ ಒಂದಾಗಲು ತೆರೆಮರೆಯ ಕಸರತ್ತು ನಡೆಸಲಾಗುತ್ತಿದೆ. ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳುತ್ತಿರುವುದೇನು? ಮಹಾಗಠಬಂದನ್‌ ರಚಿಸಲು ಮುಂದಾದ ಜೆಡಿಎಸ್, ಬಿಜೆಪಿಯೊಂದಿಗೆ ಕೈ ಜೋಡಿಸಿದರೆ ರಾಷ್ಟ್ರ ರಾಜಕಾರಣದ ಕಥೆ ಏನು?

ಬೆಂಗಳೂರು : ಕಾಂಗ್ರೆಸ್‌ನೊಂದಿಗಿನ ಸ್ನೇಹ ತೊರೆದು ಹೊರಬಂದಲ್ಲಿ ನಾವು ನಿಮಗೆ ಬಾಹ್ಯ ಬೆಂಬಲ ನೀಡುತ್ತೇವೆ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ಜೆಡಿಎಸ್ ವರಿಷ್ಠರಿಗೆ ರವಾನಿಸಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಈ ವದಂತಿಯನ್ನು ರಾಜ್ಯ ಬಿಜೆಪಿ ನಾಯಕರಾಗಲಿ ಅಥವಾ ಜೆಡಿಎಸ್ ನಾಯಕರಾಗಲಿ ಪುಷ್ಟೀಕರಿಸಿಲ್ಲ.

ರಾಜಕೀಯ ಹಂಗಾಮ: ತಮ್ಮ ನಿಲುವು ಪ್ರಕಟಿಸಿದ ಸ್ಪೀಕರ್

ಮಿತ್ರ ಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಇಂಥದೊಂದು ಪ್ರಸ್ತಾಪವನ್ನು ಜೆಡಿಎಸ್‌ಗೆ ನೀಡಿದೆ ಎನ್ನಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಮಹಾಗಠಬಂಧನ್ ಜೊತೆ ಗುರುತಿಸಿಕೊಂಡಿರುವ ದೇವೇಗೌಡರು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. 

ಮೈತ್ರಿ ಉಳಿಸಲು ಹೈಕಮಾಂಡ್ ಪ್ರತಿತಂತ್ರ

ಸದ್ಯದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪರಿಸ್ಥಿತಿಯಲ್ಲಿ ಮಹಾಗಠಬಂಧನ್ ತೊರೆದು ಬರುವುದು ಸಾಧ್ಯವಿಲ್ಲ ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ.

ಕಾಂಗ್ರೆಸ್ ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಡೆಡ್‌ಲೈನ್

click me!