Karnataka Politics: ಸಿದ್ದು ಮತೀಯವಾದಿ, ಕೇಸರಿ ಕಂಡ್ರೆ ಉರಿದುಬೀಳ್ತಾರೆ: ಸಿ.ಟಿ.ರವಿ

Kannadaprabha News   | Asianet News
Published : Mar 01, 2022, 09:04 AM ISTUpdated : Mar 01, 2022, 09:21 AM IST
Karnataka Politics: ಸಿದ್ದು ಮತೀಯವಾದಿ, ಕೇಸರಿ ಕಂಡ್ರೆ ಉರಿದುಬೀಳ್ತಾರೆ: ಸಿ.ಟಿ.ರವಿ

ಸಾರಾಂಶ

*   ತಾಲಿಬಾನ್‌ಗಿಂತ ಕಡಿಮೆ ಇಲ್ಲದ ಮನಸ್ಥಿತಿಯವರು *  ಕುಂಕುಮ ಕಂಡರೆ ಹೆದರಿಕೆ ಅಗುತ್ತೆ ಅಂತ ಹೇಳಿದ್ದ ಸಿದ್ದರಾಮಯ್ಯ *   ಕುಂಕುಮದಿಂದ ಜಗತ್ತಿನಲ್ಲಿ ಎಲ್ಲೂ ಭಯೋತ್ಪಾದನೆ ನಡೆದಿಲ್ಲ 

ಚಿಕ್ಕಮಗಳೂರು(ಮಾ.01): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ಮತೀಯವಾದಿ, ತಾಲಿಬಾನ್‌ಗಿಂತ(Taliban) ಕಡಿಮೆ ಇಲ್ಲದ ಮನಸ್ಥಿತಿಯವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಆರೋಪಿಸಿದರು.

ಬಾದಾಮಿಯಲ್ಲಿ(Badami) ಕೇಸರಿ ಪೇಟ ತೊಡಿಸಲು ಹೋದ ಅವರದೇ ಕಾರ್ಯಕರ್ತರಿಗೆ ಸಿದ್ದರಾಮಯ್ಯ(Siddaramaiah) ಅಪರಾಧ ಮಾಡಿದ್ದಾರೆ ಎಂಬ ರೀತಿಯಲ್ಲಿ ಗದರಿಸಿ, ಕೇಸರಿ ಪೇಟ ಕಿತ್ತೊಗೆದರು. ಅದೇ ಸಿದ್ದರಾಮಯ್ಯ ಅವರು ಉಳ್ಳಾಲದ ಉರುಸ್‌ಗೆ ಸ್ಕಲ್‌ (Muslim) ಟೋಪಿ ಹಾಕಿಕೊಂಡು ಹೋದ್ರು. ಸ್ಕಲ್‌ ಹಾಕಿಕೊಂಡಾಗ ಅವರಿಗೆ ಯಾವ ಆಸ್ಥೆ ಇತ್ತೋ ಅದೇ ಆಸ್ಥೆ ಕೇಸರಿ ಪೇಟ ಧರಿಸುವ ಸಂದರ್ಭದಲ್ಲೂ ಇದ್ದಿದ್ದರೆ ಜಾತ್ಯತೀತವಾದಿ(Secularist) ಎನ್ನಬಹುದಿತ್ತು ಎಂದು ತಿಳಿಸಿದರು. ಕೇಸರಿ(Saffron) ಟೋಪಿ ಕಂಡಾಗ ಉರಿದುಬೀಳುವ ಸಿದ್ದರಾಮಯ್ಯ ಜಾತ್ಯತೀತವಾದಿ ಎಂದು ಯಾವ ಲೇಬಲ್‌ನಲ್ಲಿ ಬರೆದುಕೊಂಡರೂ ನಂಬಲು ಆಗುವುದಿಲ್ಲ ಎಂದರು.
ಅವರು ಮತೀಯವಾದಿ ಮತ್ತು ತಾಲಿಬಾನ್‌ಗಿಂತ ಕಡಿಮೆ ಇಲ್ಲದ ಮನಸ್ಥಿತಿಯವರು. ಕುಂಕುಮ ಕಂಡರೆ ಹೆದರಿಕೆ ಅಗುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಅವರ ತಾಯಿಯ ಹಣೆಯಲ್ಲಿ, ಪತ್ನಿ ಹಣೆಯಲ್ಲಿ, ಸೊಸೆ ಹಣೆಯಲ್ಲಿ ಹಾಗೂ ಅವರಿಗೆ ಹೆಣ್ಮಕ್ಕಳು ಇದ್ದರೆ ಅವರ ಹಣೆಯಲ್ಲೂ ಕುಂಕುಮ ಇದೆ. ಕುಂಕುಮದಿಂದ ಜಗತ್ತಿನಲ್ಲಿ ಎಲ್ಲೂ ಭಯೋತ್ಪಾದನೆ ನಡೆದಿಲ್ಲ ಎಂದರು.

Hijab Row: ಹಿಜಾಬ್ ವಿವಾದ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ: ಸಿ.ಟಿ ರವಿ

'ಜಮೀರ್‌ ಒಬ್ಬ ಮತೀಯವಾದಿ, ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ'

ಕೋಲಾರ(Kolar): ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ. ರವಿ ಆಯ್ತು, ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin Kumar Kateel) ಅವರು ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. 

ಕಳೆದ ವರ್ಷದ ಜು.16 ರಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಇದು ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾದ ಕಾಯ್ದೆ ಅಲ್ಲ. ರಾಜ್ಯದ ಎಲ್ಲರಿಗೂ ನ್ಯಾಯ ಕೊಡುವ ಕಾಯ್ದೆ. ಇದನ್ನು ವಿರೋಧಿಸುವ ಶಾಸಕ ಜಮೀರ್‌ ಅಹಮದ್‌(Zameer Ahmed Khan) ಒಬ್ಬ ಮತೀಯವಾದಿ. ಜಮೀರ್‌ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ ಅವರಿಗೆ ಚಿಕಿತ್ಸೆ ಅಗತ್ಯವಿದೆ ಎಂದು ಕಿಡಿಕಾರಿದ್ದರು.

ಕಾಂಗ್ರೆಸ್‌ಗೆ(Congress) ನೆಲೆಯೇ ಇಲ್ಲ- ಈ ಮಧ್ಯೆ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಟೀಲ್‌ ರಾಜ್ಯದ ಕಾಂಗ್ರೆಸ್‌ ಮನೆಗೆ ಬೆಂಕಿ ಬಿದ್ದಿದೆ, ವಿಧಾನಸಭೆ ಚುನಾವಣೆಗೆ(Assembly Elections) ಇನ್ನೂ ಎರಡು ವರ್ಷಗಳು ಇರುವಾಗಲೇ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದೆ. ಆದರೂ ಬೇರೆಯವರ ಬಗ್ಗೆ ಆ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಮೊದಲು ಅವರ ಮನೆಯನ್ನು ನೋಡಿಕೊಳ್ಳಲಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ. ಎಐಸಿಸಿಯಲ್ಲಿ ಅಧ್ಯಕ್ಷರಿಲ್ಲ. ರಾಜ್ಯದಲ್ಲಿ ಯುವ ಕಾಂಗ್ರೆಸ್‌ಗೆ ಇಬ್ಬರು ಅಧ್ಯಕ್ಷರಿದ್ದಾರೆ. ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲೂ ಲಾಭಿ ನಡೆಯುತ್ತದೆ ಎಂದು ಕಟೀಲ್‌ ವ್ಯಂಗ್ಯವಾಡಿದ್ದರು. 

ಹಂತಕರನ್ನು ಕೊಲ್ಲಬೇಕು ಅಂತ ನಮಗೂ ಅನ್ಸತ್ತೆ, ಆದರೆ ಸರ್ಕಾರ ಭಾವನೆ ಮೇಲೆ ನಡೆಯಲ್ಲ: ಸಿ ಟಿ ರವಿ

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಾಲು ಸಾಲು ಹತ್ಯೆಗಳಾಗಿವೆ. ಆದರೂ ಏನೂ ಆಗಿಲ್ಲ ಎಂಬಂತೆ ಅವರಿದ್ದರು. ನಮ್ಮ ಸರ್ಕಾರ ಸಂವೇದನಾ ರಹಿತವಲ್ಲ. ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ನಮಗೂ ಭಾವನೆಗಳಿವೆ. ಆದರೆ ಸರ್ಕಾರ ಕಾನೂನಿನ ಆಧಾರದ ಮೇಲೆ ನಡೆಯುತ್ತೆ ಎಂದು ಸಿಟಿ ರವಿ ಹೇಳಿದ್ದಾರೆ. 

Weekend Curfew: ಜನರನ್ನು ಸಂಕಷ್ಟಕ್ಕೆ ತಳ್ಳೋದ್ಯಾಕೆ? ಸಿ ಟಿ ರವಿ ವಿರೋಧ

ಹರ್ಷ ಕೊಲೆಯಾದಾಗ(Harsha Murder) ಕೂಡಲೇ ಎಸ್‌ಪಿಗೆ ಕರೆ ಮಾಡಿ ಮಾತನಾಡಿದೆ.  ಜೊತೆಗೆ ಸುತ್ತಮುತ್ತಲಿನ ಜನರನ್ನು ವಿಚಾರಿಸಿದೆವು. ಆಗ ಅವರು ಮುಸ್ಲಿಂ ಗೂಂಡಾಗಳೇ ಕೊಲೆ ಮಾಡಿದ್ದು ಎಂದಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. 

‘ನಮ್ಮ ಸಜ್ಜನ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ.  ಶಿವಮೊಗ್ಗದಲ್ಲಿ(Shivamogga) ಎಂದೂ ಈ ಮುಸ್ಲಿಂ ಗೂಂಡಾಗಳು ಬಾಲಬಿಚ್ಚಿರಲಿಲ್ಲ. ಆದರೆ ಮೊನ್ನೆ ಶಿವಮೊಗ್ಗದ ಸರ್ಕಾರಿ ಶಾಲೆ ಆವರಣದಲ್ಲಿ ರಾಷ್ಟ್ರ ಧ್ವಜ ಇಳಿಸಿ ಭಗವಾ ಧ್ವಜ ಹಾರಿಸಿದ್ದಾರೆ. 50 ಲಕ್ಷ ಕೇಸರಿ ಶಾಲು ಹಂಚಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರು ನೀಡಿದ ಪ್ರಚೋದನಾಕಾರಿ ಹೇಳಿಕೆಯಿಂದ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಿದೆ’ ಎಂದು ಈಶ್ವರಪ್ಪ ಹೇಳಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್