ಜಾರಕಿಹೊಳಿ ರಾಸಲೀಲೆ : ಹೆಣ್ಣನ್ನ ಬಳಸಿಕೊಂಡಿದ್ದಲ್ಲಿ ಗಲ್ಲಿಗೆ ಹಾಕಲಿ ಎಂದ ಬಿಜೆಪಿ ಶಾಸಕ

By Suvarna News  |  First Published Mar 4, 2021, 2:04 PM IST

ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಹಲವು ಮುಖಂಡರು ಅವರ ಪರವೇ ಬ್ಯಾಟ್ ಬೀಸಿದ್ದಾರೆ. ಇದೀಗ ಬಿಜೆಪಿ ಶಾಸಕರೋರ್ವರು ಅವರನ್ನು ತಪ್ಪು ಮಾಡಿದ್ದಲ್ಲಿ ಗಲ್ಲಿಗೆ ಹಾಕಲಿ ಎಂದು  ಹೇಳಿದ್ದಾರೆ. 


ಬೆಂಗಳೂರು (ಮಾ.04):  ರಮೇಶ್ ಜಾರಕಿಹೊಳಿ ಹಾಗೂ ನನಗೆ 20 ವರ್ಷದುಂದ ಒಡನಾಟ ಇದೆ. ರಮೇಶ್  ಜಾರಕಿಹೊಳಿ ಅವರ ವಿಚಾರವನ್ನು ಮಾಧ್ಯಮದಲ್ಲಿ ನೋಡಿ ಬಹಳ ನೋವಾಗಿದೆ ಎಂದು ಶಾಸಕ ರಾಜೂಗೌಡ ಹೇಳಿದರು. 

ರಾಜಕೀಯ ಹೊರತು ಪಡಿಸಿ 20 ವರ್ಷದಿಂದ ನಮಗೆ ಒಡನಾಟ ಇದೆ. ಮಾಧ್ಯಮದಲ್ಲಿ ನೋಡಿ ನನಗೆ ಬಹಳ ನೋವಾಗಿದೆ. ರಾಜಕೀಯದಲ್ಲಿ‌ ಎದುರಾಳಿಗಳು ಇರಬೇಕು. ಮಾಧ್ಯಮದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಆ ಹುಡುಗಿಗೆ ಮೋಸ ಮಾಡಿದ್ದಾರೆ ಎಂದು ತೋರಿಸಲಾಗುತ್ತಿದೆ. ವಿಡಿಯೋ ನೋಡಿದರೆ ಹಾಗೆ ಎನಿಸುತ್ತದೆಯೇ ಎಂದು ರಾಜೂಗೌಡ ಪ್ರಶ್ನೆ ಮಾಡಿದ್ದಾರೆ. 

Tap to resize

Latest Videos

 ನಮ್ಮ ಅಣ್ಣ ಅಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಕೆಲಸ ಕೊಡಿಸುತ್ತೇನೆ ಎಂದು ಹೆಣ್ಣು ಮಕ್ಕಳನ್ನು ಬಳಸಿಕೊಂಡಿದ್ದೆ ಆದಲ್ಲಿ ನಮ್ಮ ಅಣ್ಣಲಿಗೆ ಶಿಕ್ಷೆಯಾಗಲಿ. ಗಲ್ಲಿಗೂ ಹಾಕಲಿ ಎಂದರು.  

ಜಾರಕಿಹೊಳಿ ರಾಸಲೀಲೆ : ಇದೊಂದು ಪಕ್ಕಾ ಪ್ಲಾನ್ಡ್ ಘಟನೆ ..

ಮಾನ್ಯ ಸಿಎಂ ಸಾಹೇಬ್ರ ಹತ್ರ ಮನವಿ‌ ಮಾಡ್ತೀನಿ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲಿ. ಈ ತರ ಕೀಳು‌ ಮಟ್ಟದ ರಾಜಕೀಯ ಮಾಡೋದು ಸರಿ ಅಲ್ಲ. ತನಿಖೆಯಾಗದಿದ್ರೆ ಮುಂದೆ ಬಹಳ ಕಷ್ಟವಾಗುತ್ತದೆ. ರಾಜಕಾರಣಿಗಳು ಮುಂದೆ ಹೆಣ್ಣು ಮಕ್ಕಳನ್ನು ಮಾತನಾಡಿಸೋದಕ್ಕೆ ಹೆದರಿಕೆ ಪಡೋ ಹಾಗೆ ಆಗುತ್ತದೆ ಎಂದರು. 

ನಮ್ಮ ಅಣ್ಣನನ್ನು ಬಹಳ‌ದಿನಗಳಿಂದ ಅರಿತುಕೊಂಡವರೆ, ಅವರ ಇಷ್ಟ ಕಷ್ಟಗಳನ್ನು ಬಲ್ಲವರು, ನಮ್ಮ‌ ಅಣ್ಣನ ಜೊತೆ ಒಡನಾಟ ಇದ್ದವರೆ ಈ ಕೆಲಸ ಮಾಡಿದ್ದಾರೆ.  ಒಂದೊಂದು ಸ್ಯಾಟಲೈಟ್ ಗೆ ಅಪ್ ಲೋಡ್ ಮಾಡ ಬೇಕು‌ ಅಂದ್ರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡ ಬೇಕು. ದಿನೇಶ್ ಕಲ್ಲಳಿ ಹತ್ರ ಅಷ್ಟೋಂದು ದುಡ್ಡಿಲ್ಲ ಹಾಗಾಗಿ ಇದಕ್ಕೆಲ್ಲ ದುಡ್ಡು ಕೊಡ್ತಾ ಇರೋರು ಯಾರು ಎಂದು ರಾಜೂಗೌಡ ಪ್ರಶ್ನೆ ಮಾಡಿದರು. 

 ನಮ್ಮ ಅತ್ತಿಗೆ ಹಾಗೂ ಅಣ್ಣನ‌ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಈ ರೀತಿ ತೇಜೋವದೆ ಮಾಡೋ ಕೆಲಸ ಮಾಡಿದ್ದಾರೆ. ಒತ್ತಡ ಬರುವ ಮುನ್ನವೇ ಅವರೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದಾರೆ.  ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡಲಾಗಿದೆ. 

click me!