'ಮುಸ್ಲಿಮರ ಕೇರಿಗೆ ಬಂದ ಹಣ ಹಿಂದುಗಳ ಕೇರಿಗೆ ನೀಡುವೆ'

By Suvarna News  |  First Published Jan 20, 2020, 11:34 PM IST

ವಿವಾದಾತ್ಮಕ ಹೇಳಿಕೆ ನೀಡಿದ ಹೇಳಿದ ರೇಣುಕಾಚಾರ್ಯ/ ಹೊನ್ನಾಳಿ ತಾಲೂಕನ್ನು ಕೇಸರಿಮಯ ಮಾಡ್ತೆವೆ/ ಮಸೀದಿಗಳಲ್ಲಿ ಪ್ರಾರ್ಥನೆ ಬದಲು ಶಸ್ತ್ರಾಸ್ತ್ರ ಸಂಗ್ರಹ ಮಾಡುತ್ತಿದ್ದಾರೆ


ಹೊನ್ನಾಳಿ(ಜ. 20)  ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ. ಹೊನ್ನಾಳಿ, ನ್ಯಾಮತಿ ತಾಲೂಕನ್ನ ಕೇಸರಿಮಯ ಮಾಡ್ತೀನಿ. ಮುಸ್ಲಿಮರ ಕೇರಿಗೆ ಬಂದ ಹಣ ಹಿಂದುಗಳ ಕೇರಿ ಅಭಿವೃದ್ಧಿ ಗೆ ನೀಡುವೆ. ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲೇ ಇಡುತ್ತೇನೆ ಎಂದು ಹೊನ್ನಾಳಿಯಲ್ಲಿ ಹೇಳಿಕೆ ನೀಡಿದ್ದಾರೆ.

ಮಸೀದಿಗಳಲ್ಲಿ ಪ್ರಾರ್ಥನೆ ಬದಲು ಶಸ್ತ್ರಾಸ್ತ್ರ ಸಂಗ್ರಹ ಮಾಡುತ್ತಿದ್ದಾರೆ. ಇದಕ್ಕಾಗಿ ನಿಮಗೆ ಮಸೀದಿಗಳು ಬೇಕಾ ಎಂದ ರೇಣುಕಾಚಾರ್ಯ. ನಿಮ್ಮ ಸಂಸ್ಕೃತಿ ಭಯೋತ್ಪಾದನೆ ಬಿತ್ತೋದು, ಬಂದೂಕು ಸಂಗ್ರಹಿಸೋದು, ಮಾರಕಾಸ್ತ್ರ ಸಂಗ್ರಹ ಮಾಡೋದು. ಇದನ್ನು ನೋಡಿ ಕೊಂಡು ನಾವು ಸಮ್ಮನಿರ‌ ಬೇಕಾ ?

Tap to resize

Latest Videos

ಗೂಳಿ ಆಯ್ತು, ಟಗರು ಆಯ್ತು..ಹೊನ್ನಾಳಿ ಕಾಳಗ

ಯುಟಿ ಖಾದರ್‌ ಮಂಗಳೂರು ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಅಂತಾರೆ. ಭಾರತ ಏನು ಭಯೋತ್ಪಾದಕರ ಮಾವನ ಮನೆನಾ..? ನಿಮಗೆ ಪಾಕಿಸ್ತಾನದಿಂದ ಹಣ ಬಂದಿದ್ದರೇ ಮೃತ‌ಕುಟುಂಬಕ್ಕೆ ಹಣ ನೀಡಿ ಯಾರು ಬೇಡ.  ಹೊನ್ನಾಳಿ, ನ್ಯಾಮತಿ ಸಂಪೂರ್ಣ ಕೇಸರಿಮಯ ಮಾಡ್ತೀನಿ. ಮುಸ್ಲೀಂರನ್ನು ಎಲ್ಲಿಡಬೇಕೋ ಅಲ್ಲೇ ಇಡ್ತೇನೆ. ಅವರ ಕೇರಿಗೆ ಬಂದ‌ ಹಣ ಹಿಂದುಗಳ ಕೇರಿಗಳ ಅಭಿವೃದ್ದಿಗೆ ಕೊಡ್ತೀನಿ ಎಂದು ಹೇಳಿದರು.

ಸಿದ್ದರಾಮಯ್ಯ, ಡಿ‌.ಕೆ.ಶಿವಕುಮಾರ್ ಬಿಜೆಪಿ ಕೋಮುವಾದಿ ಅಂತಾರೆ.  ಜಾತಿಗಣತಿ ಮಾಡಿ,  ವೀರಶೈವ-ಲಿಂಗಾಯತ ಒಡೆದರಲ್ಲ ನೀವು ಕೋಮುವಾದಿಗಳು. ಸಿದ್ದರಾಮಯ್ಯರಿಗೆ ಬಿಜೆಪಿ‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ನಲ್ಲಿ ಪ್ರತಿಪಕ್ಷದ ನಾಯಕ ಸ್ಥಾನ ಖಾಲಿ ಇದೆ.

ದಿನೇಶ್ ಗುಂಡುರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಓಡಿ ಹೋದರು. ಅದು ಕೂಡ ಖಾಲಿ ಇದ್ದು ಮೂರು ತಿಂಗಳಾಯ್ತು ಇನ್ನು ನೇಮಕ‌ ಮಾಡಿಲ್ಲ ರೇಣುಕಾಚಾರ್ಯ ವ್ಯಂಗ್ಯವಾಡಿದರು.

click me!