ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಚೆಕ್‌ಬೌನ್ಸ್ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರು (ಫೆ.14): ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಚೆಕ್‌ಬೌನ್ಸ್ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಚೆಕ್‌ಬೌನ್ಸ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಒಟ್ಟು ಎಂಟು ಚೆಕ್‌ಬೌನ್ಸ್ ಪ್ರಕರಣದಲ್ಲಿ 1.38 ಕೋಟಿ ರು. ಹಣ ಪಾವತಿಸಬೇಕು ಎಂದು ನ್ಯಾಯಾಲಯವು ತಿಳಿಸಿದೆ.
ಹೂವಪ್ಪಗೌಡ ಎಂಬುವರಿಂದ 1.35 ಕೋಟಿ ರು.ಗಳನ್ನು ಎಂ.ಪಿ.ಕುಮಾರಸ್ವಾಮಿ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಎಂಟು ಚೆಕ್‌ಗಳನ್ನು ನೀಡಿದ್ದರು. ಆದರೆ, ಎಲ್ಲ ಚೆಕ್‌ಗಳು ಬೌನ್ಸ್ ಆಗಿದ್ದವು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದಲ್ಲಿ ಹೂವಪ್ಪಗೌಡ ಎಂಟು ಪ್ರಕರಣಗಳನ್ನು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಎಂಟು ತಲಾ ಪ್ರಕರಣಗಳಿಗೆ ಆರು ತಿಂಗಳಂತೆ ಕುಮಾರಸ್ವಾಮಿ ಅವರಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ.
ಗೋಡ್ಸೆ ಪೂಜಿಸುವವರು ನಮಗೇನು ಪಾಠ ಮಾಡ್ತಾರೆ?: ಸಿದ್ದರಾಮಯ್ಯ
ಸರಕಾರದ ಸವಲತ್ತು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು: ಕೇಂದ್ರ ಹಾಗೂ ರಾಜ್ಯ ಸರಕಾರ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದಂತೆ ಸಂಜೀವಿನಿ ಸ್ವಸಹಾಯ ಸಂಘಗಳು ಉತ್ತಮ ವ್ಯವಹಾರ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸ ಬೇಕೆಂಬ ದೂರದೃಷ್ಟಿಇಟ್ಟುಕೊಂಡು ಸಂಜೀವಿನಿ ಸ್ವಸಹಾಯ ಸಂಘಗಳಿಗೆ ಸಹಾಯಧನ ನೀಡಲು ಮುಂದಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಸಂಜೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದ ಹೇಮಾದ್ರಿ ವೇದಿಕೆಯಲ್ಲಿ ತಾಲೂಕು ಆಡಳಿತ ಮತ್ತು ಮೂಡಿಗೆರೆ ಉತ್ಸವ ಸಮಿತಿಯಿಂದ ಏರ್ಪಡಿಸಿದ್ದ ಮೂಡಿಗೆರೆ ಉತ್ಸವ ಕಾರ್ಯಕ್ರಮದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳಿಗೆ ಸಹಾಯಧನವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ 37 ಸಂಜೀವಿನಿ ಸ್ವಸಾಯ ಸಂಘದ ಒಕ್ಕೂಟವಿದ್ದು, 6393 ಮಂದಿ ಸದಸ್ಯರಿದ್ದಾರೆ. ಎಲ್ಲಾ ಸಂಘಗಳಿಗೆ ಸಹಾಯಧನ ನೀಡಲು 8 ಕೋಟಿ ಬೇಕಾಗುತ್ತದೆ. ಈಗ ಸರಕಾರದಿಂದ 3.69 ಕೋಟಿ ಬಿಡುಗಡೆಯಾಗಿದ್ದು, ತಲಾ 1.5 ಲಕ್ಷ ರು. ವಿವಿಧ ಸಂಘಗಳ ಖಾತೆಗೆ ಒಂದು ವಾರದಲ್ಲಿ ಜಮೆ ಮಾಡಲಾಗುತ್ತದೆ.
ಯಾರ ಹಂಗಿಲ್ಲದೆ ಸರ್ಕಾರ ರಚಿಸುವ ಶಕ್ತಿ ನೀಡಿ: ನಿಖಿಲ್ ಕುಮಾರಸ್ವಾಮಿ
ಉಳಿದ ಹಣ ಬಂದ ಕೂಡಲೇ ಬಾಕಿ ಇರುವ ಸಂಘಗಳಿಗೆ ವಿತರಿಸಲಾಗುವುದು ಎಂದರು. ಸಹಾಯ ಧನ ಪಡೆದ ಸಂಜೀವಿನಿ ಸ್ವಸಾಹಯ ಸಂಘಗಳು ಹಣ ಸದ್ಬಳಕೆ ಮಾಡಿಕೊಂಡು ಸಮಂದ ಏಳಿಗೆಗೆ ಶ್ರಮಿಸಬೇಕು. ಮಹಿಳೆಯರು ಮನೆಯಲ್ಲಿಯೇ ಅನೇಕ ರೀತಿಯ ಉದ್ಯೋಗ ಮಾಡಿ ಆರ್ಥಿಕವಾಗಿ ಮುಂದೆ ಬರಬೇಕು. ಸಹಾಯಧನಕ್ಕೆ ಶೇ.1 ರಷ್ಟುಮಾತ್ರ ಬಡ್ಡಿ ಇದ್ದು, ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲು ತಾನು ವಿಧಾನಸಭೆಯಲ್ಲಿ ಚರ್ಚಿಸುತ್ತೇ ನೆಂದು ಹೇಳಿದರು.