ಶಾಸಕ ಸಿ.ಟಿ. ರವಿ ಕಾರು ಅಪಘಾತ : ಇಬ್ಬರು ದುರ್ಮರಣ

By Web Desk  |  First Published Feb 19, 2019, 7:44 AM IST

ಶಾಸಕ ಸಿ.ಟಿ. ರವಿ ಅವರಿದ್ದ ಕಾರು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ತುಮಕೂರಿನ ಕುಣಿಗಲ್ ಬಳಿ ನಡೆದಿದೆ. 


ತುಮಕೂರು :  ರಾಷ್ಟ್ರೀಯ ಹೆದ್ದಾರಿ 75ರ  ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರಿಗೆ ಬಿಜೆಪಿ ಶಾಸಕ ಸಿ.ಟಿ. ರವಿ ಕಾರ್ ಡಿಕ್ಕಿಯಾಗಿ  ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.  ಮೂವರು ಗಾಯಗೊಂಡಿದ್ದಾರೆ. 

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದರಲ್ಲಿ ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದ್ದು, ಮೃತರನ್ನು ಸುನಿಲ್ ಗೌಡ ಮತ್ತೆ ಶಶಿಕುಮಾರ್ ಎಂದು ಗುರುತಿಸಲಾಗಿದೆ. 

Tap to resize

Latest Videos

ಕನಕಪುರ ತಾಲ್ಲೂಕಿನ ಸೂರನಹಳ್ಳಿಯ ಈ  ಯುವಕರು ಕೊಲ್ಲೂರು ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ ಮಂಗಳೂರು ಕಡೆಯಿಂದ ಆಗಮಿಸಿದ ಶಾಸಕರ ಫಾರ್ಚುನರ್ ಕಾರು  ರಸ್ತೆ  ಬದಿ ನಿಂತಿದ್ದ ಕಾರುಗಳಿಗೆ ಡಿಕ್ಕಿಯಾಗಿ ನಿಂತಿದ್ದವರ ಮೇಲೆ ಹರಿದಿದೆ. 

ಈ ವೇಳೆ ಗಾಯಗೊಂಡ ಮುನಿರಾಜು ಜಯಚಂದ್ರ ಪುನೀತ್, ಮಂಜುನಾಥ್ ಎಂಬುವರಿಗೆ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

ಇನ್ನು ಶಾಸಕ ಸಿ.ಟಿ ರವಿ ಮತ್ತು ಅವರೊಂದಿಗಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. 

click me!