ಒಂದು ದಿನದ ವೇತನ CRPFಗೆ: ರಾಜ್ಯದ IPS ಅಧಿಕಾರಿಗಳ ನಿರ್ಧಾರ

By Web DeskFirst Published Feb 18, 2019, 12:05 PM IST
Highlights
  • CRPF ಯೋಧರ, ಕುಟುಂಬಗಳ ಬೆಂಬಲಕ್ಕೆ ನಿಂತ ರಾಜ್ಯದ IPS ಅಧಿಕಾರಿಗಳು
  • ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 44 ಜವಾನರು ಹುತಾತ್ಮ; 70ಕ್ಕೂ ಯೋಧರಿಗೆ ಗಾಯ 

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ  ಪುಲ್ವಾಮಾದಲ್ಲಿ ಉಗ್ರರ ಕೌರ್ಯಕ್ಕೆ 44 ಮಂದಿ CRPF ಜವಾನರು ಬಲಿಯಾಗಿದ್ದಾರೆ.  ಒಂದೆಡೆ ಉಗ್ರರ ಹುಟ್ಟಡಗಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕೆಂದು ಭಾರತೀಯರು ಆಗ್ರಹಿಸುತ್ತಿದ್ದರೆ, ಇನ್ನೊಂದೆಡೆ ಹುತಾತ್ಮರ ಕುಟುಂಬಗಳ ಬೆನ್ನಿಗೆ ಇಡೀಯ ದೇಶವೇ ನಿಂತಿದೆ.

ಈಗ ಕರ್ನಾಟಕದ IPS ಅಧಿಕಾರಿಗಳು ಕೂಡಾ CRPF ಯೋಧರ ನೆರವಿಗೆ ಬಂದಿದ್ದಾರೆ. ಉಗ್ರರ ಭೀಬತ್ಸ ಕೃತ್ಯವನ್ನು ಕಟುವಾಗಿ ಖಂಡಿಸಿರುವ IPS ಅಧಿಕಾರಿಗಳ ಸಂಘವು, ತಾವು ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ CRPF ಯೋಧರು ಹಾಗೂ ಅವರ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ  ಎಂದು ಹೇಳಿದೆ.  

ಇಂದಿನ ಕನ್ನಡಪ್ರಭ ಓದಿ: http://kpepaper.asianetnews.com/

ಇದೇ ಸಂದರ್ಭದಲ್ಲಿ, ತಮ್ಮ ಒಂದು ದಿನದ ಸಂಬಳವನ್ನು CRPF ಶ್ರೇಯೋಭಿವೃದ್ಧಿ ಫಂಡ್ ಗೆ ನೀಡಲು IPS ಅಧಿಕಾರಿಗಳು ನಿರ್ಧರಿಸಿದ್ದಾರೆ.

pic.twitter.com/tG4fUbiSki

— BengaluruCityPolice (@BlrCityPolice)

ಕಳೆದ ಗುರುವಾರ (ಫೆ.14)ರಂದು ಪುಲ್ವಾಮದಲ್ಲಿ CRPF ಯೋಧರ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿ 44 ಮಂದಿಯನ್ನು ಬಲಿಪಡೆದಿದ್ದಾರೆ. 70ಕ್ಕೂ ಅಧಿಕ ಮಂದಿ ಜವಾನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ವೀರ ಯೋಧರಿಗೆ ನೆರವು ನೀಡಬಯಸುವವರು ಇಲ್ಲಿಗೆ ಭೇಟಿ ನೀಡಿ: ಭಾರತ್ ಕೆ ವೀರ್

click me!