ರಾಮ ಜನ್ಮಭೂಮಿ ಅಯೋಧ್ಯೆಯಷ್ಟೇ ಕೃಷ್ಣನ ನೆಲವೂ ಪವಿತ್ರ; ಮಥುರಾ ಕಾಶಿ ದೇಗುಲ ವಿಮೋಚನೆ ಸುಳಿವು ನೀಡಿದ ಸಿಟಿ ರವಿ!

By Ravi JanekalFirst Published Jan 23, 2024, 8:54 PM IST
Highlights

ಅತಿಕ್ರಮಣದ ಜಾಗದಲ್ಲಿ ನಮಾಜ್ ಮಾಡುವುದು ಹರಾಮ್. ಇದನ್ನು ಸ್ವತಃ ಮುಸಲ್ಮಾನರೇ ಹೇಳುತ್ತಾರೆ. ರಾಮ ಹುಟ್ಟಿದ ಜಾಗದಷ್ಟೇ ಕೃಷ್ಟನ ಮಥುರಾ ನಮಗೆ ಪವಿತ್ರ ಎಂದು ಬಿಜೆಪಿ ನಾಯಕ ಸಿಟಿ ರವಿ ತಿಳಿಸಿದರು.

ಉಡುಪಿ (ಜ.23): ಅತಿಕ್ರಮಣದ ಜಾಗದಲ್ಲಿ ನಮಾಜ್ ಮಾಡುವುದು ಹರಾಮ್. ಇದನ್ನು ಸ್ವತಃ ಮುಸಲ್ಮಾನರೇ ಹೇಳುತ್ತಾರೆ. ರಾಮ ಹುಟ್ಟಿದ ಜಾಗದಷ್ಟೇ ಕೃಷ್ಟನ ಮಥುರಾ ನಮಗೆ ಪವಿತ್ರ ಎಂದು ಬಿಜೆಪಿ ನಾಯಕ ಸಿಟಿ ರವಿ ತಿಳಿಸಿದರು.

ಅಯೋಧ್ಯೆ ರಾಮಮಂದಿರದ ಬಳಿಕ ಮಥುರಾ ಶ್ರೀಕೃಷ್ಣ ದೇವಾಲಯ ವಿಮೋಚನ ವಿಚಾರವಾಗಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜ್ಞಾನ ವ್ಯಾಪಿಯ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ಸನಾತನಿಗಳ ವಿರುದ್ಧ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ. ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಮಾಡಿದ ಪ್ರಾಯಶ್ಚಿತ ಮಾಡಿಕೊಳ್ಳಲು ಅವರಿಗೆ ಅವಕಾಶ ಎಂದರು.

ಇದೀಗ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ  ಸಾಂಸ್ಕೃತಿಕ ಬೀಜಾಂಕುರ ಆಗಿದೆ. ಇಡೀ ಹಿಂದು ಸಮುದಾಯ ಬಾಲರಾಮ ಒಗ್ಗೂಡಿಸಿದ್ದಾನೆ. ಬಾಬರ್ ಮತ್ತು ಅವನ ಸಂತಾನಕ್ಕೆ ಓಲೈಸುವ ವೋಟ್ ಬ್ಯಾಂಕ್ ರಾಜಕೀಯದ ಅನಿವಾರ್ಯತೆ ಉಂಟಾಗಿದೆ. ರಾಮನನ್ನು ಬಿಟ್ಟರೆ ರಾಷ್ಟ್ರ ಇಲ್ಲ ವೋಟ್ ಇಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿಯೇ ರಾಮ ಕಾಲ್ಪನಿಕ ಎಂದಿದ್ದವರು. ಇದೀಗ ರಾಮನಾಮ ಜಪ ಆರಂಭಿಸಿದ್ದಾರೆ. ಅತಿಕ್ರಮಣಕಾರರನ್ನು ಬಿಟ್ಟು ರಾಮಕೃಷ್ಣ ಶಿವನ ಜೊತೆ ಮುಸಲ್ಮಾನರು ಗುರುತಿಸಕೊಳ್ಳುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ 11 ದಿನ ಉಪವಾಸ ಮಾಡಿರೋದು ಡೌಟ ಎಂಬ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ವೀರಪ್ಪ ಮೊಯ್ಲಿಯ ಸರ್ಟಿಫಿಕೇಟ್ ಅವಶ್ಯಕತೆ ಇದೆಯಾ? ವೀರಪ್ಪ ಮೊಯ್ಲಿ  ಸರ್ಟಿಫಿಕೇಟನ್ನು ಯಾರು ಕೇಳುತ್ತಾರೆ? ರಾಮ ಕಾಲ್ಪನಿಕ ಎಂದು ಕಾಂಗ್ರೆಸಿಗರು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಾನು ದೇವಸ್ಥಾನಕ್ಕೆ ಹೋಗಲ್ಲ ಸಂವಿಧಾನ ಮುಖ್ಯ ಎಂದಿದ್ದ ಖರ್ಗೆ. ಸಂವಿಧಾನ ನಮಗೂ ಮುಖ್ಯ, ಸಂವಿಧಾನದ ಮೊದಲ ಪುಟದಲ್ಲೇ ರಾಮ ಇದ್ದಾನೆ. ಎಂದು ತಿರುಗೇಟು ನೀಡಿದರು.

ಇನ್ನು ಡಿಕೆಶಿ ರಾಮ ಯಾರಪ್ಪನ ಸ್ವತ್ತು ಅಲ್ಲ ಎನ್ನುತ್ತಾರೆ. ರಾಮನನ್ನು ಯಾರಪ್ಪನ ಸ್ವತ್ತು ಮಾಡಲು ಸಾಧ್ಯವಿಲ್ಲ ಒಪ್ಪುತ್ತೇನೆ. ಆದರೆ ಭಗವಾನ್ ಶ್ರೀರಾಮಚಂದ್ರ ಭಕ್ತರ ಅಧೀನ. ಕಾಂಗ್ರೆಸಿಗರು ಬಾಬರ್ ಮತ್ತು ಅವನ ಸಂತಾನವನ್ನು ಅಪ್ಪನಿಗಿಂತ ಜಾಸ್ತಿ ಹೊತ್ತುಕೊಂಡಿದ್ದಾರೆ. ಬಾಬರ್ ಸಂತಾನವನ್ನು ಪ್ರೀತಿಸಿದಷ್ಟು ಅವರ ಅಪ್ಪನನ್ನು ಪ್ರೀತಿಸುತ್ತಾರೋ ಗೊತ್ತಿಲ್ಲ ರಾಮ ಈ ದೇಶವನ್ನು ಜೋಡಿಸಿದವ ಹೊರತು ರಾಮ ಈ ದೇಶದ ಸಮಸ್ಯೆ ಅಲ್ಲ ಎಂದರು.

ಹಿರೇಮಗಳೂರು ಕಣ್ಣನ್ ಗೆ ಸರ್ಕಾರ ನೋಟಿಸ್ ವಿಚಾರಕ್ಕೆ ಕಿಡಿಕಾರಿದ ಸಿಟಿ ರವಿ, ಕಣ್ಣನ್ ಮಾಮ ನನಗೂ ನೋಟಿಸ್ ತೋರಿಸಿದರು. ಹಣ ವಾಪಸ್ ಕೇಳುವುದು ಅಕ್ಷಮ್ಯ, ಸರಕಾರದ ಮಾನಸಿಕತೆ ತೋರಿಸುತ್ತದೆ. ದೇವಾಲಯ ಭಕ್ತರ ಸ್ವತ್ತು. ಭಕ್ತರು ಕೊಟ್ಟ ಹಣವನ್ನು ಟೆನೆಂಟ್ ಆಕ್ಟ್ ತಂದು ದೇವಾಲಯವನ್ನು ಬಡವು ಮಾಡಿಬಿಟ್ಟರು. ದೇವಸ್ಥಾನಕ್ಕೆ ತಸ್ತಿಕನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವೇ ತಪ್ಪು. ದೇವಸ್ಥಾನಗಳು ಸಮಾಜದ ನಿಯಂತ್ರಣದಲ್ಲಿರಬೇಕು. ಸರ್ಕಾರದ ಕಪಿಮುಷ್ಠಿಯಿಂದ ಹೊರ ಬಂದರೆ ದೇಗುಲ ಅಭಿವೃದ್ಧಿ ಆಗುತ್ತದೆ. ಈ ನಿಯಂತ್ರಣ ಮರ್ಸೀದಿ -ಚರ್ಚುಗಳ ಮೇಲೆ ಏಕೆ ಇಲ್ಲ ಎಂದು ಪ್ರಶ್ನಿಸಿದರು ಮುಂದುವರಿದು ನೋಟಿಸ್ ಕೊಟ್ಟವರ ಮೇಲೆ ಕ್ರಮ ಆಗಬೇಕು, ಸರ್ಕಾರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸಿದ್ದ'ರಾಮ'ಯ್ಯ ಹೆಸರಲ್ಲಿ ರಾಮನಿದ್ದಾನೆ, ನನ್ನಲ್ಲಿ 'ಶಿವ'ನಿದ್ದಾನೆ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ ಗರಂ

ಸರ್ಕಾರದ ನಿಯಂತ್ರಣ ಕಡಿಮೆ ಮಾಡಲು ಧಾರ್ಮಿಕ ಪರಿಷತ್ತು ಮಾಡಿದ್ದೆವು. ದೇವಾಲಯಗಳನ್ನು ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ. ತಮಿಳುನಾಡಿನಂತಹ ನಾಸ್ತಿಕ ಸರ್ಕಾರಕ್ಕೂ ದೇವರ ದುಡ್ಡು ಬೇಕು. ದೇವರ ಮೇಲೆ ಭಕ್ತಿ ಇಲ್ಲ ಹುಂಡಿ ಮೇಲೆ ಪ್ರೀತಿ ಅದು ತಪ್ಪಬೇಕು ಎಂದರು.

click me!