ಚಿನ್ನದ ವ್ಯಾಪಾರಿ, ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಇದೀಗ ಅದೇ ಜಗನ್ನಾಥ್ ಶೆಟ್ಟಿ ಲಾಡ್ಜ್‌ನಲ್ಲಿ ಯುವತಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಂಡ್ಯ/ಮೈಸೂರು, (ಸೆಪ್ಟೆಂಬರ್.08): ಚಿನ್ನದ ಅಂಗಡಿ ಮಾಲೀಕ, ಬಿಜೆಪಿ ಮಖಂಡ ಜಗನ್ನಾಥ ಶೆಟ್ಟಿ(Jaganath Shetty) ಹನಿಟ್ರ್ಯಾಪ್ ಸುಳಿಗೆ ಸಿಲುಕಿ, 50 ಲಕ್ಷ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅವರು ಸಲ್ಮಾ ಭಾನು ವಿರುದ್ಧ ಕೇಸ್ ದಾಖಲಾಗಿದ್ದು, ಆಕೆಯನ್ನು ಪೊಲೀಸು ಅರೆಸ್ಟ್ ಸಹ ಮಾಡಿದ್ದಾರೆ. ಆದ್ರೆ, ಇದೀಗ ಇದೇ ಬಿಜೆಪಿ ಮಖಂಡ ಜಗನ್ನಾಥ ಶೆಟ್ಟಿ ಯುವತಿಯೊಂದಿಗೆ ಲಾಡ್ಜ್‌ವೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ವಿಡಿಯೋ ಫುಲ್ ವೈರಲ್ ಅಗಿದೆ. ಹೌದು..ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಶೆಟ್ಟಿ, ಮಂಡ್ಯದ ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ್ ಶೆಟ್ಟಿ ಮೈಸೂರಿನ ಲಾಡ್ಜ್‌ವೊಂದರಲ್ಲಿ ಯುವತಿಯೊಂದಿಗೆ ಇರುವುದರನ್ನು ಸಲ್ಮಾ ಗ್ಯಾಂಗ್ ರೆಡ್ ಹ್ಯಾಂಡ್ ಆಗಿ ಹಿಡಿದಿದೆ.
ಕಾಲೇಜ್ ಲೆಕ್ಚರರ್ ಎಂದು ಹೇಳಿಕೊಂಡು ಟ್ಯೂಷನ್ ಹೇಳಿಕೊಡುತ್ತೇನೆ ಎಂದ ಯುವತಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾರೆ. ಯುವತಿ ಜೊತೆ ಜಗನ್ನಾಥ್ ಇರುವ ವಿಚಾರ ತಿಳಿದು ಅಲರ್ಟ್ ಆದ ಸಲ್ಮಾ ಗ್ಯಾಂಗ್ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್‌ಗೆ ನುಗ್ಗಿದ್ದಾರೆ. ಒಳ ನುಗ್ಗುತ್ತಿದ್ದಂತೆ ಗ್ಯಾಂಗ್ ವಿಡಿಯೋ ಚಿತ್ರೀಕರಣ ಮಾಡಿದ್ದು, ಯುವತಿ, ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ. ಯುವತಿಯೊಂದಿಗೆ ಇರುವ ವಿಡಿಯೋ ಫುಲ್ ವೈರಲ್ ಆಗಿದೆ.ಈ ಹಿನ್ನೆಲೆಯಲ್ಲಿ ಈ ಹಿಂದೆ ಹನಿಟ್ರ್ಯಾಪ್ ಕೇಸ್ ನೀಡಿದ್ದ ಜಗನ್ನಾಥ ಶೆಟ್ಟಿ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Honey Trap ಬಲೆಗೆ ಮಂಡ್ಯದ ಉದ್ಯಮಿ : ಚಿನ್ನದ ಅಂಗಡಿ ಮಾಲೀಕನ ಬಳಿ 50ಲಕ್ಷ ಪೀಕಿದ ಗ್ಯಾಂಗ್!
ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ಕೇಸ್
ಬಿಜೆಪಿ ಮುಖಂಡ ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, 50 ಲಕ್ಷ ಹಣವನ್ನು ಸುಲಿಗೆ ಮಾಡಲಾಗಿದೆ. ಈ ಸಂಬಂಧ ಮಂಡ್ಯದ (Mandya) ಪಶ್ಚಿಮ ಪೊಲೀಸ್ ಠಾಣೆಗೆ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ ನಿನ್ನೆ ದೂರು ನೀಡಿದ್ದರು.
Honey Trap: ಚಿನ್ನಿ ಕೈಯಲ್ಲಿ ಚಿನ್ನದ ವ್ಯಾಪಾರಿ, ಮೇಕಪ್ ರಾಣಿಯ ನಿಜ ಬಣ್ಣ ಬಟಾಬಯಲು
ಫೆಬ್ರವರಿ 26 ರಂದು ಮಂಗಳೂರಿಗೆ ಹೊರಡಲು ಮಂಡ್ಯದ ಬಸ್ ಸ್ಟ್ಯಾಂಡ್‌ನಲ್ಲಿ ಜಗನ್ನಾಥ ಶೆಟ್ಟಿ ಕಾದು ನಿಂತಿದ್ದರು. ರಾತ್ರಿ 8 ಗಂಟೆ ಸಮಯದಲ್ಲಿ ಅಲ್ಲಿಗೆ ಕಾರಿನಲ್ಲಿ ಬಂದ ಸಲ್ಮಾ ಭಾನು ನೀವು ಶ್ರೀನಿಧಿ ಜ್ಯುವೆಲರಿಸ್ ಮಾಲೀಕರಲ್ವಾ ಅಂತ ಮಾತನಾಡಿಸಿದ್ದಾಳೆ. ಮಾತು ಮುಂದುವರಿದು ಬನ್ನಿ ನಾವು ಮೈಸೂರಿಗೆ ಹೊರಟಿದ್ದೇವೆ ಅಲ್ಲಿಗೆ ಡ್ರಾಪ್ ಮಾಡ್ತೀವಿ ಎಂದು ಕಾರು ಹತ್ತಿಸಿ ಕೊಂಡಿದ್ದಾಳೆ. ಪ್ರಯಾಣದ ವೇಳೆ ಆತ್ಮೀಯವಾಗಿ ಮಾತನಾಡಿಸಿ ಜಗನ್ನಾಥ ಶೆಟ್ಟಿ ಸ್ನೇಹ ಸಂಪಾದಿಸಿದ ಸಲ್ಮಾ, ಸ್ನೇಹಿತರ ಬಳಿ ಗೋಲ್ಡ್ ಪರ್ಚೇಸ್ ಮಾಡ್ತಿದೀವಿ. ಹೇಗಿದ್ರು ನೀವು ಚಿನ್ನದ ವ್ಯಾಪಾರಿ ಒಮ್ಮೆ ಬಂದು ಪರಿಶೀಲಿಸಿ ಕೊಡಿ ಎಂದಿದ್ದಾಳೆ. ಅವಳ ಮಾತು ನಂಬಿ ಹೋದ ಶೆಟ್ಟಿಯನ್ನು ಮೈಸೂರಿನ ದರ್ಶನ್ ಪ್ಯಾಲೇಸ್ ಲಾಡ್ಜ್ ರೂಂ ಒಂದಕ್ಕೆ ಕರೆದು ಕೊಂಡು ಹೋಗಿದ್ದರು.
ರೂಮ್‌ಗೆ ಹೋಗುತ್ತಿದ್ದಂತೆ ಏಕಾ ಏಕಿ ಲಾಕ್ ಮಾಡಿದ್ದಾರೆ. ಮೊದಲೇ ಅಲ್ಲಿಗೆ ಹುಡುಗಿಯನ್ನು ಕಳುಹಿಸಿದ್ದ ಸಲ್ಮಾ ಭಾನು ಇಬ್ಬರ ವಿಡಿಯೋ ರೆಕಾರ್ಡ್ ಮಾಡಿದ್ದರು. ಬಳಿಕ ವಿಡಿಯೋ ಇಟ್ಟುಕೊಂಡು 4 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರಂತೆ. ಬ್ಲಾಕ್ ಮೇಲ್‌ಗೆ ಹೆದರಿ 3 ಕಂತುಗಳಲ್ಲಿ 50 ಲಕ್ಷ ಹಣ ಕೊಟ್ಟು ಜಗನ್ನಾಥ ಶೆಟ್ಟಿ ಸುಮ್ಮನಾಗಿದ್ರು, ಆದ್ರೆ ಪದೇ ಪದೇ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಹಿನ್ನೆಲೆ ಈಗ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.