Anti Conversion Bill : ಮತಾಂತರ ನಿಷೇಧ ವಿಧೇಯಕ : ಎಚ್ ವಿಶ್ವನಾಥ್ ವಿರೋಧ

By Suvarna News  |  First Published Dec 23, 2021, 11:57 AM IST
  • ಅಧಿವೇಶನದಲ್ಲಿ‌ ಮತಾಂತರ ವಿಧೇಯಕ ಮಂಡನೆ ವಿಚಾರ - ಬಿಜೆಪಿ ಮುಖಂಡರಿಂದಲೇ ವಿರೋಧ 
  • ವಿಧೇಯಕಕ್ಕೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರೋಧ 

ಬೆಳಗಾವಿ (ಡಿ.23):  ಅಧಿವೇಶನದಲ್ಲಿ‌ ಮತಾಂತರ ವಿಧೇಯಕ ಮಂಡನೆ ವಿಚಾರಕ್ಕೆ ಇದೀಗ ಬಿಜೆಪಿ (BJP)  ಮುಖಂಡರಿಂದಲೇ ವಿರೋಧ ವ್ಯಕ್ತವಾಗಿದೆ.  ವಿಧೇಯಕಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿಂದು (Belagavi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್ 12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ಮಾನವ ಧರ್ಮ ಸ್ಥಾಪನೆ ‌ಮಾಡಿದ್ದರು.   ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದ್ದರು.  ಇದಕ್ಕೆಲ್ಲಾ ವಿರೋಧವಾಗಿರುವ ಈ  ವಿಧೇಯಕ ಜಾರಿ ಸರಿ ಅಲ್ಲ ಎಂದರು. 

ಭಾರತ ಬಹುತ್ವ ಉಳ್ಳ ದೇಶವಾಗಿದೆ.  ಅಂಬೇಡ್ಕರ್ (Ambedkar) ಸಂವಿಧಾನವನ್ನು ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ.  ಪ್ರಧಾನಿ ಮೋದಿ (Prime Minister Modi)  ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನಿಯರು ಹೇಳಿರುವುದು ಸಹಬಾಳ್ವೆ ಬಗ್ಗೆಯೆ ಹೇಳಿರುವುದು.  ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಒಡೆಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ ಎಂದು ವಿಶ್ವನಾಥ್ (Vishwanath)  ಹೇಳಿದರು.

Latest Videos

undefined

ನಮ್ಮ ಮುಖ್ಯಮಂತ್ರಿ ಹೆಸರು ಕೂಡ ಬಸವಣ್ಣನೆ.  ಮತಾಂತರ ವಿಧೇಯಕವನ್ನು ಯಾರೂ ಮೆಚ್ಚುವುದಿಲ್ಲ. ಜಿಲ್ಲಾಧಿಕಾರಿಗಳಿಂದ ಜೈಲಿಗೆ ಹಾಕಿಸಲು ಸಾಧ್ಯವಾ..?  ಆರ್.ಎಸ್.ಎಸ್ (RSS) ನಾಯಕರ ಮಕ್ಕಳೇ ಮುಸ್ಲಿಂರ ಮಕ್ಕಳನ್ನು ಮದುವೆಯಾಗಿದ್ದಾರೆ. ಇವರುಗಳನ್ನು ಜೈಲಿಗೆ ಹಾಕಲು ಸಾಧ್ಯವೇ.  ಸಿನಿಮಾ ನಟರು ಬ್ರಾಹ್ಮಣರನ್ನು‌ ಮದುವೆಯಾಗಿದ್ದಾರೆ.  ಇವರನ್ನ ಜೈಲಿಗೆ ಹಾಕಲು ಸಾಧ್ಯವೇ ಎಂದರು. 

ಕಾಂಗ್ರೆಸ್‌ (Congress)  ನಾಯಕರು ಇಬ್ಬಗೆಯ ನಾಟವಾಡುತ್ತಿದ್ದಾರೆ. ನಾವು ಹೊರಗೆ ಇದ್ದಾಗ ಮಂಡನೆ ಮಾಡಿದರು ಎನ್ನುತ್ತಾರೆ.  ಹೊರಗಡೆ ಹರಟೆ ಹೊಡೆಯುತ್ತಾ ಕುಳಿತು ಮುಸ್ಲಿಂರ (Muslim) ಧಾರ್ಮಿಕ ಸ್ವಾತಂತ್ರ್ಯ ಕಾಪಾಡುತ್ತಿದ್ದೀರಾ?  ದಲಿತರು ಮತಾಂತರ ಆಗಲೆ ಬಾರದು ಎನ್ನುವ ರೀತಿ ಧಾರ್ಮಿಕ ದಿಗ್ಬಂದನ ಹಾಕಲಾಗುತ್ತಿದೆ.  ದಿಗ್ಬಂದನವನ್ನು ಹೇರಲಾಗುತ್ತಿದೆ ಎಂದರು. 

 ಬಸವಣ್ಣನ (Basavanna) ತತ್ವವನ್ನ ಅಳವಡಿಸಿಕೊಂಡಿರುವ ಮಠಾಧೀಶರು ಯಾರು ಮಾತನಾಡುತ್ತಿಲ್ಲ.  ಚಿತ್ರದುರ್ಗದ (Chitradurga) ಮಠದವರು ಬಾಯಿ ಮುಚ್ಚಿ ಕುಳಿತಿದ್ದಾರೆ.  ಸರ್ಕಾರದ ಅನುದಾನ ನೀಡಿ ಬಾಹಿ ಮುಚ್ಚಿಸಿದ್ದಾರೆ.  ಅಹಿಂದ ಮಠಗಳು ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು. ಸಾಹಿತಿಗಳು ಚಿಂತಕರು ಬಾಯಿ‌ಬಿಡುತ್ತಿಲ್ಲ. ಅವರೆಲ್ಲಾ ರಾಜ್ಯೋತ್ಸವ ಪ್ರಶಸ್ತಿಗಷ್ಟೆ ಸೀಮಿತವಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. 

ಕಾಂಗ್ರೆಸ್ ಇಬ್ಬಂದಿತನ : ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ (Congress) ಇಬ್ಬಂದಿತನ ತೋರಿಸುತ್ತಿದ್ದಾರೆ. ಹರಟೆ ಹೊಡಿತ ಕುಳಿತು ಸಭೆಗೆ ಬರುವ ಮುನ್ನ ಕಾಯ್ದೆ ಮಂಡನೆ ಆಗಿತ್ತು. ಆಮೇಲೆ ಬಂದು ನಾಟಕವಾಡುತ್ತಿದ್ದಾರೆ.  ಸಿದ್ದರಾಮಯ್ಯ, ಡಿಕೆಶಿ ನಿಮ್ಮ ವೋಟ್ ಬ್ಯಾಂಕ್ ದಲಿತರು. ಮುಸ್ಲಿಂರು, ಹಿಂದುಳಿದವರು. ಇವರ ಪರ ಹೋರಾಟ ಮಾಡುತ್ತಿದ್ದೀರಾ ?  ದಲಿತರು ಮತಾಂತರ ಆಗಲೇ ಬಾರದು ಎಂದು ದಿಗ್ಬಂಧನ ಹಾಕುತ್ತಿದ್ದಾರೆ.  ಇದು ಯಾವ ನ್ಯಾಯವೇ ಎಂದು ಕೇಳಿದರು. 

ಕಳ್ಳರಂತೆ ಕಾಯ್ದೆ ಜಾರಿ : 

ಬಿಜೆಪಿ ಸರ್ಕಾರ(BJP Government) ಮತಾಂತರ ಕಾಯ್ದೆಯನ್ನು ಕಳ್ಳರ ರೀತಿ ಜಾರಿಗೆ ತರಲು ಹೊರಟಿದೆ. ಇದರ ವಿರುದ್ಧ ಸದನದ ಹೊರ, ಒಳಗೆ ಹಾಗೂ ಕಾನೂನು ರೀತಿಯಲ್ಲೂ ಹೋರಾಟ ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮತಾಂತರ ನಿಷೇಧದ ವಿಚಾರವಾಗಿ ಬಿಜೆಪಿ ಸರ್ಕಾರ ಸಂವಿಧಾನ ಬಾಹಿರ ಕಾನೂನು ತರುತ್ತಿದೆ. ಈವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಒಳಗಾಗಿ ಮತಾಂತರವಾಗಿದಕ್ಕಿಂತ(Conversion) ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದಾದ ಅವಮಾನ ಹಾಗೂ ಆರ್ಥಿಕ, ಸಾಮಾಜಿಕ ಅಸಮಾನತೆಯಿಂದ ಮತಾಂತರ ಆಗಿದ್ದೇ ಜಾಸ್ತಿ ಎಂದರು.

ರಾಜ್ಯದಲ್ಲಿ(Karnataka) ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಜನರ ಗಮನ ಬೇರೆಡೆ ತಿರುಗಿಸಲು ಬಿಜೆಪಿ ಸರ್ಕಾರ ಹೊರಟಿದೆ. ಮತಾಂತರ ನಿಷೇಧ ಕಾಯ್ದೆ(Anti Conversion Bill) ಸಂವಿಧಾನ ಬಾಹಿರ ಮತ್ತು ಖಂಡನೀಯ. ನಾವು ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು.

Anti Conversion Bill: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್‌ನ ನಿಲುವು ತಿಳಿಸಿದ ಎಚ್‌ಡಿಕೆ

ಹಿಂದೂ ಧರ್ಮದಲ್ಲಿನ(Hinduism) ನ್ಯೂನತೆಗಳನ್ನು ಸರಿಪಡಿಸಲು ಯತ್ನಿಸಿದರೂ ಸುಧಾರಣೆ ಸಾಧ್ಯವಾಗಲಿಲ್ಲ. ಹೀಗಾಗಿ ತಾವು ಮತಾಂತರ ಆಗಿದ್ದಾಗಿ ಡಾ.ಅಂಬೇಡ್ಕರ್‌(Dr BR Ambedkar) ತಿಳಿಸಿದ್ದಾರೆ. ಜಾತಿ, ವರ್ಣ ವ್ಯವಸ್ಥೆಯ ನಡುವೆ ಗೌರವದಿಂದ ಬದುಕಲು ಸಾಧ್ಯವಿಲ್ಲ, ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಬಹುತೇಕರು ಮತಾಂತರ ಆಗಿದ್ದಾರೆ. ಆಮಿಷ, ಹೆದರಿಕೆಗೆ ಮತಾಂತರ ಆಗಿರುವುದು ಬಹಳ ಕಡಿಮೆ ಎಂದರು ಸಿದ್ದರಾಮಯ್ಯ.

click me!