ಡಿಕೆ ಶಿವಕುಮಾರ ನೂರಕ್ಕೆ ನೂರರಷ್ಟು ತಪ್ಪಿತಸ್ಥ ಇದ್ದಾನೆ. ಹೀಗಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹಿಸಿದರು.
ರಾಯಚೂರು (ಅ.20): ಡಿಕೆ ಶಿವಕುಮಾರ ನೂರಕ್ಕೆ ನೂರರಷ್ಟು ತಪ್ಪಿತಸ್ಥ ಇದ್ದಾನೆ. ಹೀಗಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹಿಸಿದರು.
ಇಂದು ಲಿಂಗಸಗೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಡಿಕೆಶಿ ಅಕ್ರಮ ದುಡ್ಡು ಹೊಡೆದಿದ್ದಾನೆ.ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹೈಕೋರ್ಟ್ ಮೂರು ತಿಂಗಳಲ್ಲಿ ತನಿಖೆ ಕ್ಲಿಯರ್ ಮಾಡಬೇಕು ಅಂತ ಹೇಳಿದೆ. ಅಲ್ಲೀತನಕ ಮಂತ್ರಿಯಾಗಿ ಇರಬಾರದು. ತನಿಖೆ ಬಳಿಕ ಪುನಃ ಮಂತ್ರಿಯಾಗಿ, ಇಲ್ಲ ಜೈಲಿಗೆ ಹೋಗಿ ಅಲ್ಲೀತನ ಮಂತ್ರಿಯಾಗಿ ಇರಬಾರದು. ಮೊದಲು ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಡಿಕೆಶಿ ರಾಜೀನಾಮೆಗೆ ಬಿಜೆಪಿ ಒತ್ತಾಯ; ಬಿಜೆಪಿ ಷಡ್ಯಂತ್ರಕ್ಕೆ ಕೋರ್ಟ್‌ನಲ್ಲೇ ಉತ್ತರ ಕೊಡುವೆ ಎಂದ ಡಿಕೆಶಿ!
ಅವರ ಮನೆಯಲ್ಲಿ ಸಿಕ್ಕ ಬಂಡಲ್ ಗಟ್ಟಲೇ ನೋಟನ್ನ ನಾವು ನೋಡಿದ್ದು ನಿಮ್ಮ ಟಿವಿಯಲ್ಲೇ, ಅದಕ್ಕಿಂತ ಸಾಕ್ಷಿಬೇಕಾ? ಈತ ಫಸ್ಟ್ ಮೊದಲ ತನಖೆಯಲ್ಲೇ ತಪ್ಪಿತಸ್ಥನೆಂದು ತಿಹಾರ್ ಜೈಲಲ್ಲಿಟ್ಟಿದ್ರು. ಬೇಲ್‌ನಲ್ಲಿ ಹೊರಗೆ ಬಂದಿದ್ದಾರೆ ಇದಕ್ಕಿಂತ ಸಾಕ್ಷಿ ಬೇಕಾ ? ಎಂದು ಪ್ರಶ್ನಿಸಿದರು.
ಸುಪ್ರಿಂ, ಲೋಕಾಯುಕ್ತ ಇರೋದು ರಾಜಕಾರಣ ಮಾಡಕ್ಕೆ ಅಲ್ಲ:
ಸಿಬಿಐ ವಿಚಾರದಲ್ಲಿ ಬಿಜೆಪಿ ಹಸ್ತಕ್ಷೇಪ ವಿಚಾರ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಈಶ್ವರಪ್ಪ, ನೋಡ್ರಿ, ಕುಡಿದವನೇನೋ(ಡಿಕೆಶಿ) ಮಾತಾಡ್ತಾನೆ ಅಂತಾ ನಾನು ಉತ್ತರ ಕೊಡಬೇಕಾ? ಸುಪ್ರೀಂ ಕೋರ್ಟ್, ಲೋಕಾಯುಕ್ತ, ಸಿಬಿಐ ಇರೋದು ರಾಜಕಾರಣ ಮಾಡೋಕೆ ಅಲ್ಲ. ಯಾವಾಗ ನನ್ನ ಮೇಲೆ ಬಂದ್ರೆ ರಾಜಕಾರಣ, ಬೇರೆಯವರ ಮೇಲೆ ಬಂದ್ರೆ ಅದು ರಾಜಕಾರಣ ಅಲ್ಲ ಅನ್ನೋದು ಇದು ಡಿಕೆಶಿ ತಂತ್ರ. ಎಲ್ಲ ಕಾಂಗ್ರೆಸ್ಸಿಗರು ಇದೇ ತಂತ್ರ ಮಾಡ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತೆ:
ದೇಶದಲ್ಲೇ ಕಾಂಗ್ರೆಸ್ ನವರಿಗೆ ಅಧಿಕಾರ ಇರ್ಲಿಲ್ಲ. ರಾಜ್ಯದಲ್ಲಿ ಈಗ ಗ್ಯಾರಂಟಿ ಅದು ಇದು ಅಂತಾ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ನೋಡ್ತಾ ಇರಿ, ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ ಎಂದು ಕೆಎಸ್ ಈಶ್ವರಪ್ಪನವರು ಭವಿಷ್ಯ ನುಡಿದರು.
ಸತೀಶ್ ಜಾರಕಿಹೋಳಿ ಎಷ್ಟು ಜನರನ್ನ ಕರೆದೊಯ್ತಾರೊ ಗೊತ್ತಿಲ್ಲ. ಸರ್ಕಾರ ಬಿದ್ದುಹೋಗುತ್ತೆ ಅನ್ನೊದರಲ್ಲಿ ಯಾವುದೇ ಅನುಮಾನವಿಲ್ಲ. ಲೋಕಸಭೆ ಚುನಾವಣೆ ವೇಳೆ ಹಿಂದೆ ಮುಂದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರಲ್ಲ. ಅದಕ್ಕೆ ಏನು ಬೇಕಾದ್ರೂ ಮಾತನಾಡ್ತಿದ್ದಾರೆ ಎಂದರು.
ವಿಧಾನಸೌಧ,ವಿಕಾಸಸೌಧದಲ್ಲಿ ಅರಿಶೀನ-ಕುಂಕುಮಕ್ಕೆ ಬ್ರೇಕ್ ವಿಚಾರ ಪ್ರಸ್ತಾಪಿಸಿದ ಈಶ್ವರಪ್ಪ, ಈ ಕಾಂಗ್ರೆಸ್ ಸರ್ಕಾರ ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಿದೆ. ನೇರವಾಗಿ ಅರಿಶಿನ ಕುಂಕುಮ ಇರಬಾರ್ದು ಅಂದಿದ್ರೆ, ಇಷ್ಟೊತ್ತಿಗಾಗ್ಲೆ ಸರ್ಕಾರ ಬಿದ್ದಗೊಗ್ತಿತ್ತು. ಐದು ನಿಮಿಷ ಸರ್ಕಾರ ಇರ್ತಿರ್ಲಿಲ್ಲ. ಹೀಗಾಗಿ ರಾಸಾಯನಿಕ ವಸ್ತುಗಳ ಜೊತೆ ಸೇರಿ ಇರಬಾರ್ದು ಅಂತಾ ಹೇಳಿ ಹಿಂದೂ ಧರ್ಮದ ವಿಚಾರದಲ್ಲಿ ಚೆಲ್ಲಾಟ ಆಡ್ತಿದ್ದಾರೆ, ಆಡಲಿ. ಎಷ್ಟು ದಿನ ಆಡ್ತಾರೆ ಅಂತಾ ವ್ಯಂಗ್ಯ ಮಾಡಿದರು.
ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಬರೆದಿಟ್ಟು ಬಿಜೆಪಿ ಮುಖಂಡ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಿಂದೆ ನನ್ನ ಹೆಸರು ಬರೆದಿಟ್ಟು ಯಾರೋ ಆತ್ಮಹತ್ಯೆ ಮಾಡಿಕೊಂಡ್ರು. ನನ್ನ ಹೆಸರು ಬರೆದಿಟ್ಟು ವ್ಯಕ್ತಿ ಸತ್ತಾಗ ಕಾಂಗ್ರೆಸ್ನವ್ರು ನನ್ನ ರಾಜೀನಾಮೆಗೆ ಪಟ್ಟು ಹಿಡಿಲಿಲ್ಲ. ನಾನೇ ಮೋದಿ, ಅಮಿತ್ ಶಾ ಅವ್ರಿಗೆ ಹೇಳಿದೆ ನನ್ನ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಸತ್ತಿದ್ದಾನೆ ರಾಜೀನಾಮೆ ತಗೊಳ್ಳಿ ಅಂದಿದ್ದೆ. ಅವರೆ ಎರಡು ದಿನ ತಡಿಲಿಕ್ಕೆ ಹೇಳಿದ್ರು. ನಂತರ ನನ್ನ ಬಲವಂತಕ್ಕೆ ರಾಜೀನಾಮೆ ತಗೊಂಡಿದ್ರು. ಆಗ ತನಿಖೆನೂ ಆಯ್ತು ನಾನು ನಿರ್ದೋಷಿ ಅಂತಾ ತೀರ್ಮಾನ ಆಯ್ತು.
ಎಚ್‌ಡಿ ಕುಮಾರಸ್ವಾಮಿ ಇಂದು ಮಹತ್ವದ ಸುದ್ದಿಗೋಷ್ಠಿ, ಬಯಲು ಮಾಡ್ತಾರಾ ಇಂಧನ ಇಲಾಖೆ ಕರ್ಮಕಾಂಡ?
ನಿಮ್ಮ ಹೆಸರು ಬರೆದಿಟ್ಟಿದ್ದಾನೆ ಅಂದ್ರೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರೇ ಯೋಚನೆ ಮಾಡಬೇಕು. ಮಂತ್ರಿ ಸ್ಥಾನದಲ್ಲಿರೋದು ಎಷ್ಟರಮಟ್ಟಿಗೆ ಯೋಗ್ಯ ಅಂತಾ. ಮಂತ್ರಿ ಆದೋನು ಸಮಾಜದಲ್ಲೆ ಮಾದರಿಯಾಗಿರ್ಬೇಕು. ನಾನು ಶರಣಪ್ರಕಾಶ್ರನ್ನ ದೋಷಿ ಅನ್ನಲ್ಲ. ಸಮಾಜದ ಮುಂದೆ ಅವರ ಹೆಸರು ಬರೆದಿಟ್ಟು ಸತ್ತಿರೋದ್ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ.ಯಾರದಾದ್ರೂ ಆಗ್ಲಿ ಸಾವು ಸಾವೇ. ಅದರಲ್ಲಿ ರಾಜಕೀಯ ತರಬಾರದು. ತನಿಖೆ ಬಳಿಕ ನಿರ್ದೋಷಿ ಅಂತಾ ಸಾಬೀತು ಆದ ಬಳಿಕ ಮತ್ತೆ ಮಂತ್ರಿ ಆಗ್ಲಿ ಎಂದರು.